ನಟಿ ಖುಷ್ಬೂ ಮೂಲ ಹೆಸರೇನು? ಹೆಸರು ಬದಲಾಗಿದ್ದು ಹೇಗೆ ಗೊತ್ತೇ?
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ವಿವಿಧ ಭಾಷೆಗಳ ನೂರಾರು ಚಿತ್ರದಲ್ಲಿ ನಟಿಸಿರುವ ಖುಷ್ಬೂ, ಈಗ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಎಲ್ಲ ಭಾಷೆಗಳಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ತಮ್ಮ ರಾಜಕೀಯ ಸೈದ್ಧಾಂತಿಕ ನಿಲುವಿನ ಕಾರಣದಿಂದ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಹಾಗೆಯೇ ವಿರೋಧಿಗಳನ್ನು ಪಡೆದುಕೊಂಡಿದ್ದಾರೆ.
Recommended Video
ಕೆಲವು ವರ್ಷಗಳ ಹಿಂದೆ ಖುಷ್ಬೂ ಅವರ ಮೂಲ ಹೆಸರು ಚಾಲ್ತಿಗೆ ಬಂದಿತ್ತು. ಅದರ ಬಗ್ಗೆ ಚರ್ಚೆ ನಡೆದಿತ್ತು. ಖುಷ್ಬೂ ಅವರ ರಾಜಕೀಯ ವಿರೋಧಿಗಳು ಮೂಲ ಹೆಸರನ್ನು ಪ್ರಸ್ತಾಪಿಸಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಖುಷ್ಬೂ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರ ವಿರುದ್ಧ ಕಿಡಿಕಾರಿದ್ದರು. ಮುಂದೆ ಓದಿ...

ಮೂಲ ಹೆಸರು ನಖಾತ್ ಖಾನ್
ಖುಷ್ಬೂ ಅವರ ಮೂಲ ಹೆಸರು ನಖಾತ್ ಖಾತ್. ಮುಂಬೈನಲ್ಲಿ ಜನಿಸಿದ್ದ ಖುಷ್ಬೂ ಅವರಿಗೆ ತಂದೆ ತಾಯಿ ಇರಿಸಿದ್ದ ಹೆಸರು ನಖಾತ್ ಖಾನ್ ಎಂದು. ಕುಟುಂಬದವರು, ಶಾಲೆಯ ಸ್ನೇಹಿತರು ಮತ್ತು ಶಿಕ್ಷಕರು ಕರೆಯುತ್ತಿದ್ದದ್ದು ನಖಾತ್ ಎಂದೇ. ಆದರೆ ಸುಮಾರು ಏಳೆಂಟು ವರ್ಷದವರಾಗಿದ್ದರಿಂದ ಅವರು ಖುಷ್ಬೂ ಹೆಸರಿನಿಂದ ಗುರುತಿಸಿಕೊಳ್ಳತೊಡಗಿದರು.

ನಖಾತ್ ಎಂದರೆ ಸುವಾಸನೆ
'ನಾನು ಹೆಸರನ್ನು ಬದಲಿಸಿಕೊಳ್ಳಲಿಲ್ಲ. ಆ ಹೆಸರಿನ ಬಗ್ಗೆ ಹೆಮ್ಮೆಯಿದೆ. ನಖಾತ್ ಹೆಸರಿನ ಅರ್ಥ ಹೆಚ್ಚಿನವರಿಗೆ ಗೊತ್ತಾಗುತ್ತಿರಲಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗ ಎಲ್ಲರೂ ನಿನ್ನ ಹೆಸರಿನ ಅರ್ಥ ಏನು ಎಂದು ಕೇಳತೊಡಗಿದರು. 'ನಖಾತ್' ಎಂದರೆ ಅರ್ಥವೇ ಖುಷ್ಬೂ, ಅಂದರೆ ಸುವಾಸನೆ' ಎಂದು ಖುಷ್ಬೂ ತಿಳಿಸಿದ್ದಾರೆ.

ತಡವಾಗಿ ಕಂಡುಹಿಡಿದಿದ್ದೀರಿ
ಕೆಲವು ವರ್ಷಗಳ ಹಿಂದೆ ಕೆಲವರು ಖುಷ್ಬೂ ಅವರ ಮೂಲ ಹೆಸರನ್ನು ಕೆದಕಿದ್ದರು. ಅದಕ್ಕೆ ಖುಷ್ಬೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. 'ಕೆಲವು ಟ್ರೋಲಿಗರು ನನ್ನ ಬಗ್ಗ ಆವಿಷ್ಕಾರ ಮಾಡಿದ್ದಾರೆ. ನನ್ನ ಹೆಸರು ನಖಾತ್ ಖಾನ್.. ಯುರೇಕಾ! ಮೂರ್ಖರೇ ಆ ಹೆಸರು ನನಗೆ ಪೋಷಕರು ಇಟ್ಟ ಹೆಸರು. ಹೌದು ನಾನು ಒಬ್ಬ ಖಾನ್... ಅದಕ್ಕೇನೀಗ? ತಡವಾಗಿ ಎದ್ದಿದ್ದೀರಲ್ಲ. ಎದ್ದೇಳಿ ನೀವು 47 ವರ್ಷ ತಡವಾಗಿದ್ದೀರಿ..' ಎಂದು ವ್ಯಂಗ್ಯವಾಗಿ ಹೇಳಿದ್ದರು.

ಹೆಮ್ಮೆಯ ಭಾರತೀಯಳು
'ನೀವೂ ಫಿಲ್ಮ್ ಸ್ಟೈಲ್‌ನಲ್ಲಿ ಹೇಳುವುದಾದರೆ ನಾನೂ ಹೇಳುತ್ತೇನೆ, ನನ್ನ ಹೆಸರು ಖಾನ್. ನಖಾತ್ ಖಾನ್. ಮತ್ತು ನಾನು ಟೆರರಿಸ್ಟ್ ಅಲ್ಲ, ಆದರೆ ಒಬ್ಬ ಹೆಮ್ಮೆಯ ಭಾರತೀಯಳು. ಭಾರತ ನನ್ನ ದೇಶ' ಎಂದು ಹೇಳಿದ್ದರು.

ನಾನು ಹುಟ್ಟಿನಿಂದ ಮುಸಲ್ಮಾನಳು
'ನಾನು ಹಿಂದೆಂದೂ ಈ ರೀತಿ ಸನ್ನಿವೇಶ ಎದುರಿಸಿರಲಿಲ್ಲ. ನನ್ನ ಹೆಸರು ನಖಾತ್ ಎಂದು ಪ್ರತಿಯೊಬ್ಬರಿಗೂ ಗೊತ್ತು. ಇದುವರೆಗೂ ಯಾರೊಬ್ಬರೂ ಈ ಸಂಗತಿಯನ್ನು ಕೆದಕಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಬಳಿಕವಷ್ಟೇ ಅದರ ಜನರಿಗೆ ನೀವು ಹಿಂದುವೋ ಅಥವಾ ಮುಸ್ಲಿಮನೋ ಎಂಬ ಸಮಸ್ಯೆ ಕಾಡುತ್ತಿದೆ. ಇದುವರೆಗೂ ಯಾರೂ ನೀನು ಹಿಂದುವೋ ಮುಸಲ್ಮಾನಳೋ ಎಂದು ಕೇಳಿರಲಿಲ್ಲ. ನಾನು ಹುಟ್ಟಿನಿಂದಲೂ ಮುಸ್ಲಿಮಳು. ನನ್ನ ಧರ್ಮ ಬದಲಿಸಿಕೊಂಡಿಲ್ಲ' ಎಂದು ಹೇಳಿದ್ದರು.


Click it and Unblock the Notifications











