ತುಳುನಾಡಿನ ಕೋಲದಲ್ಲಿ ಕಣ್ಣೀರಿಟ್ಟ ತಮಿಳು ನಟ ವಿಶಾಲ್‌; ಸ್ಟಾರ್‌ ನಟನಿಗೆ ದೈವ ನೀಡಿದ ಉತ್ತರವೇನು?

ತಮಿಳುನಾಡಿನ ಸ್ಟಾರ್ ನಟ ವಿಶಾಲ್ ಇತ್ತೀಚೆಗೆ ಸುದ್ದಿಯಲ್ಲಿ ಇದ್ದರು. ವಿಶಾಲ್ ನಟಿಸಿದ 'ಮದಗಜರಾಜ' ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ವೇದಿಕೆ ಮೇಲೆ ವಿಶಾಲ್ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಅವರ ಕೈ ನಡುಗುತ್ತಿತ್ತು. ಮಾತಾಡುವುದಕ್ಕೂ ಪರದಾಡುತ್ತಿದ್ದ ಈ ನಟನನ್ನು ನೋಡಿ ಇಡೀ ಚಿತ್ರರಂಗಕ್ಕೆ ಅಚ್ಚರಿ ಆಗಿತ್ತು. ಈಗ ಮಂಗಳೂರಿನಲ್ಲಿ ನಡೆದ ಜಾರಂದಾಯ ಕೋಲಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳಿನ ಸ್ಟಾರ್ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ದೈವದ ಮುಂದೆ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ. ವಿಶಾಲ್ ಅನಾರೋಗ್ಯದ ಬಳಿಕ ಚೇತರಿಸಿಕೊಂಡಿದ್ದರೂ ದಿಢೀರನೇ ಯಾಕೆ ದೈವದ ಮೊರೆ ಹೋಗಿದ್ದಾರೆ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ.

What was the answer given by the Jarandaya Daiva to Tamil actor Vishal in Mangalore

'ಮದಗಜರಾಜ' ಇವೆಂಟ್‌ನಲ್ಲಿ ಮೈಕ್ ಹಿಡಿಯುವುದಕ್ಕೂ ಪರದಾಡಿದ್ದ ತಮಿಳು ನಟ ವಿಶಾಲ್ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಟೀಕೆಗಳನ್ನು ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿಶಾಲ್ ವೈರಲ್ ಫೀವರ್ ಎಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿದ್ದರೂ ಅವರ ಅನಾರೋಗ್ಯದ ಬಗ್ಗೆ ಟೀಕೆಗಳು ಮಾತ್ರ ಕಡಿಮೆ ಆಗಿರಲಿಲ್ಲ. ಆನಂತರ ಕೆಲವು ವೇದಿಕೆಗಳಲ್ಲಿ ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟತೆಯನ್ನು ನೀಡಿದ್ದರು. ಅಲ್ಲಿಗೆ ಈ ಮ್ಯಾಟರ್ ತಣ್ಣಗಾಗಿತ್ತು. ಆದ್ರೀಗ ಕೋಲಾರಾಧನೆಯಲ್ಲಿ ಭಾಗಿಯಾಗಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ (ಫೆಬ್ರವರಿ 11) ಮಂಗಳೂರಿನ ಮೂಲ್ಕಿ ಸಮೀಪದ ಪಕ್ಷಿಕೆರೆಯ ಹರಿಪಾದೆಯ ಧರ್ಮ ದೈವ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ ನಡೆದಿತ್ತು. ಅಲ್ಲಿಗೆ ತಮಿಳು ನಟ ವಿಶಾಲ್ ಅವರ ಆಪ್ತರೊಂದಿಗೆ ಬಂದಿದ್ದರು. ಈ ವೇಳೆ ಸುಮಾರು ಮೂರು ಗಂಟೆಗಳ ಕಾಲ ಕೋಲಾದಲ್ಲಿ ಭಾಗಿಯಾಗಿದ್ದರು. ಈ ವೇಳೆ ದೈವ ಬಳಿಕ ತನ್ನ ಆರೋಗ್ಯ ಹಾಗೂ ವೈಯಕ್ತಿಕ ಬದುಕಿನ ಎದ್ದಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

What was the answer given by the Jarandaya Daiva to Tamil actor Vishal in Mangalore

ಜಾರಂದಾಯ ದೈವಸ್ಥಾನದಲ್ಲಿ ದೈವದ ಮುಂದೆ ಮಲ್ಲಿಗೆ ಹೂವು ಇಟ್ಟು ಕಣ್ಣೀರಿಡುತ್ತಾ ತನ್ನನ್ನು ಸಮಸ್ಯೆಗಳಿಂದ ಹೊರತರುವಂತೆ ಬೇಡಿಕೊಂಡಿದ್ದಾರೆ. ಈ ವೇಳೆ ದೈವ ಕೂಡ ಕೈ ಸನ್ನೆಯ ಮೂಲಕ ವಿಶಾಲ್‌ಗೆ ಉತ್ತರ ಕೊಟ್ಟಿದ್ದು, ಬಹಳ ಸಮಸ್ಯೆಯಲ್ಲಿ ಇದ್ದೀಯ. ಹೆದರುವುದು ಬೇಡ. ನನ್ನ ಮುಗ ಏರುವ (ಮುಖವಾಡ) ವೇಳೆ ನಿನಗೆ ನುಡಿ ನೀಡುತ್ತೇನೆ ಅಲ್ಲಿವರೆಗೂ ನಿಲ್ಲು ಎಂದು ಹೇಳಿಕೆ ಕೊಟ್ಟಿದೆ ಎಂದು ವರದಿಯಾಗಿದೆ. ಆದರೆ, ಅದಾಗಲೇ ವಿಶಾಲ್ ಮೂರು ಗಂಟೆಗಳ ಕಾಲ ಕೋಲಾದಲ್ಲಿ ಭಾಗಿಯಾಗಿದ್ದರಿಂದ ಸಮಯದ ಅಭಾವದಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.

ಹಾಗೇ ನಟ ವಿಶಾಲ್ ದೈವದ ಬಳಿ ತನ್ನ ಸಮಸ್ಯೆ ಬಗೆ ಹರಿದರೆ, ಮುಂದಿನ ವರ್ಷ ನಡೆಯುವ ನೇಮೋತ್ಸವದಲ್ಲಿ ತುಲಾಭಾರ ಮಾಡಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಉತ್ತರ ನೀಡುವುದಕ್ಕೂ ಮುನ್ನವೇ ಸಮಯದ ಅಭಾವದಿಂದ ದೇವಸ್ಥಾನಕ್ಕೆ ಮಲ್ಲಿಗೆ ಹೂ ನೀಡಿದ ಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ತೆರಳಿದ್ದಾರೆ. ತಮಿಳು ನಟ ವಿಶಾಲ್ ತುಳುನಾಡಿನ ದೈವವನ್ನು ಹುಡುಕಿಕೊಂಡು ಬಂದಿದ್ದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

'ಕಾಂತಾರ' ಸಿನಿಮಾದ ಬಳಿಕ ತುಳುನಾಡಿನ ದೈವವನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ಕೇವಲ ಕರ್ನಾಟಕದಿಂದ ಅಷ್ಟೇ ಅಲ್ಲ. ದೇಶದ ಮೂಲೆ ಮೂಲೆಯಿಂದ ಅಷ್ಟೇ ದೈವವನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಚಿತ್ರರಂಗದ ತಾರೆಯರು ಕೂಡ ಈಗಾಗಲೇ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.

More from Filmibeat

English summary
Discover the answer provided by Jarandaya Daiva to Tamil actor Vishal during his visit to Mangalore, exploring its significance
Read more about: vishal god mangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X