ದಳಪತಿ ಶೂಟಿಂಗ್ ವೇಳೆ ರಜನಿಕಾಂತ್ ಅನ್ನೇ ನೆಲದ ಮೇಲೆ ಮಲಗಿಸಿದ್ದ ಅರವಿಂದ್ ಸ್ವಾಮಿ; ಈ ಘಟನೆ ಬಗ್ಗೆ ನಿಮಗೆ ಗೊತ್ತೇ?

ರಜನಿಕಾಂತ್ ಸೂಪರ್‌ಸ್ಟಾರ್ ಆಗಿದ್ದರೂ ರಿಯಲ್‌ ಲೈಫ್‌ನಲ್ಲಿ ಅವರೆಷ್ಟು ಸಿಂಪಲ್ ಅನ್ನೋದು ಗೊತ್ತಿರೋ ವಿಷಯವೇ. ರಜನಿ ಮನಸ್ಸು ಮಾಡಿದರೆ ಹೇಗೆ ಬೇಕಾದರೂ ಇರಬಹುದು. ಆದರೆ, ಅವರ ಸರಳ ವ್ಯಕ್ತಿತ್ವವೇ ಅವರಿಗೆ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಳ್ಳುವುದಕ್ಕೆ ಮತ್ತೊಂದು ಕಾರಣ. 5 ದಶಕಗಳ ಅವರ ಸಿನಿಮಾ ಜರ್ನಿಯಲ್ಲಿ ರಜನಿಕಾಂತ್ ಬಹು ಎತ್ತರಕ್ಕೆ ಹೋಗಿ ಆಗಿದೆ.

ರಜನಿಕಾಂತ್ ಸರಳ ವ್ಯಕ್ತಿತ್ವಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಚಿಕ್ಕಂದಿನಿಂದಲೇ ಬಡತನವನ್ನು ಕಂಡಿದ್ದ ರಜನಿಗೆ ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳತೆ ಅನ್ನೋದು ಅವರನ್ನು ಅಂಟಿಕೊಂಡೆ ಮುಂದುವರೆದಿದೆ. ಯಶಸ್ಸು ಕಂಡಾಗ ಬೀಗದೆ, ಸೋಲು ಬಂದಾಗ ಕುಗ್ಗದೆ ಮುನ್ನುಗ್ಗಿದ್ದೇ ರಜನಿಕಾಂತ್ ಇಂದು ಸೂಪರ್‌ಸ್ಟಾರ್ ಮರೆಯುತ್ತಿರುವುದಕ್ಕೆ ಮತ್ತೊಂದು ಕಾರಣ.

While Shooting Thalapathi movie Superstar Rajiniknath slept on the floor because of Aravind Swami

ರಜನಿ ಅದಾಗಲೇ ಸೂಪರ್‌ಸ್ಟಾರ್ ಆಗಿ ಬೆಳೆದಿದ್ದ ಕಾಲದಲ್ಲಿ ಆಗ ತಾನೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನಟನೊಬ್ಬ ಅವರನ್ನು ನೆಲದ ಮೇಲೆ ಮಲಗಿಸಿದ್ದರು. ಅವರು ಬೇರೆ ಯಾರೂ ಅಲ್ಲ ಇಂದಿನ ಮತ್ತೊಬ್ಬ ತಮಿಳಿನ ಸ್ಟಾರ್ ನಟ ಅರವಿಂದ ಸ್ವಾಮಿ. ಅಷ್ಟಕ್ಕೂ ಆ ಘಟನೆ ಏನು? ಯಾಕೆ ರಜನಿಕಾಂತ್ ನೆಲದ ಮೇಲೆ ಮಲಗಬೇಕಾಯ್ತು? ಆ ಘಟನೆಯನ್ನು ತಿಳಿಯುವುದಕ್ಕೆ ಮುಂದೆ ಓದಿ.

ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ 1975ರಲ್ಲಿ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಶುರುವಾಗಿದ್ದ ಸಿನಿ ಪಯಣ ಇಲ್ಲಿವರೆಗೂ ಮುಂದುವರೆದಿದೆ. ಖಳ ನಾಯಕನಾಗಿ, ಪೋಷಕ ನಟನಾಗಿ ವೃತ್ತಿ ಬದುಕನ್ನು ಆರಂಭ ಮಾಡಿ ಇಂದು ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಆದರೂ, ರಜನಿ ಇಂದಿಗೂ ಆ ಸರಳತೆಯನ್ನು ಉಳಿಸಿಕೊಂಡಿದ್ದಾರೆ. ಇದಕ್ಕೆ ಅರವಿಂದ್ ಸ್ವಾಮಿ ಸಂದರ್ಶನವೊಂದರಲ್ಲಿ ಒಂದು ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ.

1991ರಲ್ಲಿ ಮಣಿರತ್ನಂ ನಿರ್ದೇಶಿಸುತ್ತಿದ್ದ 'ದಳಪತಿ' ಸಿನಿಮಾ ದಿಗ್ಗಜರೇ ನಟಿಸುತ್ತಿದ್ದರು. ರಜನಿಕಾಂತ್, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇತ್ತು. ಅದರಲ್ಲಿ ಆಗತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅರವಿಂದ್ ಸ್ವಾಮಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಅರವಿಂದ್ ಸ್ವಾಮಿಯಿಂದಾಗಿ ರಜನಿಕಾಂತ್ ನೆಲದ ಮೇಲೆ ಮಲಗಬೇಕಾದ ಪರಿಸ್ಥಿತಿ ಬಂದಿತ್ತು. ಈ ಘಟನೆಯನ್ನು ಸ್ವತ: ಅರವಿಂದ್ ಸ್ವಾಮಿಯವರೇ ವಿವರಿಸಿದ್ದರು.

While Shooting Thalapathi movie Superstar Rajiniknath slept on the floor because of Aravind Swami

"ನನಗೆ ಆರಂಭದ ದಿನಗಳಲ್ಲಿ ಎಲ್ಲವೂ ಹೊಸದು. ಶೂಟಿಂಗ್ ನಿಯಮಗಳು, ಶಿಷ್ಟಾಚಾರ ಯಾವುದೂ ಗೊತ್ತಿರಲಿಲ್ಲ. ನಮ್ಮ ಚಿತ್ರರಂಗದ ಶಿಷ್ಟಾಚಾರದ ವಿಷಯದಲ್ಲಿ ಸ್ವಲ್ಪ ಕೃತಕ ಅಂತ ಅಇಸುತ್ತೆ. ಒಂದು ದಿನ ನಾನು ಶೂಟಿಂಗ್‌ ನಡೆಯುತ್ತಿದ್ದ ಜಾಗಕ್ಕೆ ಬೇಗನೆ ತಲುಪಿದ್ದೆ. ಆಯಾಸಗೊಂಡಿದ್ದರಿಂದ ಹಾಸಿಗೆ ಹುಡುಕಿ ಮಲಗಿಬಿಟ್ಟೆ. ತಕ್ಷಣವೇ ನಾನು ನಿದ್ರೆಗೆ ಜಾರಿದೆ. ಆ ಬಳಿಕ ಕೋಣೆಗೆ ಬಂದಿದ್ದರು. ನಾನು ಅವರ ಹಾಸಿಗೆ ಮಲಗಿದ್ದನ್ನು ಗಮನಿಸಿ, ಎಬ್ಬಿಸದೆ ತಾವೇ ನೆಲದ ಮೇಲೆ ಮಲಗಿದ್ದರು" ಎಂದು ಅರವಿಂದ್ ಸ್ವಾಮಿ ಹೇಳಿಕೊಂಡಿದ್ದಾರೆ.

"ನಾನು ಎಚ್ಚರಗೊಂಡಾಗ, ರಜನಿ ಸರ್ ಅದೇ ಕೋಣೆಯಲ್ಲಿ ನೆಲದ ಮೇಲೆ ಮಲಗಿದ್ದರು. ನಾನು ಅವರ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದ್ದೆ" ಸೂಪರ್‌ಸ್ಟಾರ್ ರಜನಿಕಾಂತ್‌ ನೆಲದ ಮೇಲೆ ಮಲಗಿರುವುದನ್ನು ಕಂಡು ಅಚ್ಚರಿ ಆಯ್ತು ಎಂದು ಅರವಿಂದ್ ಸ್ವಾಮಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಘಟನೆ ರಜನಿಕಾಂತ್ ಅವರ ಸರಳತೆ ಮತ್ತು ಸಹನಟರ ಮೇಲಿನ ಗೌರವವನ್ನು ತೋರಿಸುತ್ತೆ.

More from Filmibeat

English summary
While Shooting Thalapathi movie Superstar Rajiniknath slept on the floor because of Aravind Swami.
Read more about: rajinikanth movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X