ವಿಜಯಕಾಂತ್‌ಗೆ 'ಪುರಟ್ಚಿ ಕಲೈಂಜರ್' ಬಿರುದು ಕೊಟ್ಟಿದ್ಯಾರು? ಏನಿದು ಎಂಜಿಆರ್,ಕಲಾವಿದನ ಕಥೆ?

ಕ್ಯಾಪ್ಟನ್ ವಿಜಯಕಾಂತ್ ತಮಿಳುನಾಡಿನ ಕೊಟ್ಯಾಂತರ ಜನರನ್ನು ಕಣ್ಣೀರಿನಲ್ಲಿ ತೇಲಿಸಿದ್ದಾರೆ. ತಮಿಳುನಾಡು ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲಿ ವಿಜಯ್‌ಕಾಂತ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ನೆಚ್ಚಿನ ನಾಯಕನ ಅಗಲಿಕೆ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ವಿಜಯಕಾಂತ್‌ ಅಭಿಮಾನಿಗಳು ಹಾಗೂ ಬೆಂಬಲಿಗರ ಪಾಲಿಗೆ 'ಕ್ಯಾಪ್ಟನ್' ಎಂದೇ ಚಿರಪರಿಚಿತ. ಪ್ರೀತಿಯಿಂದ ಎಲ್ಲರೂ ಕ್ಯಾಪ್ಟನ್ ಅಂತಲೇ ಕರೆಯುತ್ತಿದ್ದರು. ವಿಜಯಕಾಂತ್ ತಮ್ಮ ಕ್ರಾಂತಿಕಾರಿ ಸ್ವಭಾವದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ಸಿನಿಮಾಗಳಲ್ಲೂ ಅಷ್ಟೇ ರೆಬೆಲ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ಅದೇ ಇನ್ನೊಂದು ಕಡೆ ರಾಜಕೀಯದಲ್ಲೂ ರೆಬೆಲ್ ಆಗಿಯೇ ಬಿಂಬಿಸಿಕೊಂಡಿದ್ದವರು.

Who gave Late actor and dmdk founder vijayakanth got puratchi kalaignar name

ವಿಜಯಕಾಂತ್ ತಮಿಳಿನ ಆರಾಧ್ಯ ದೈವ ಎಂಜಿಆರ್ ಅವರ ಅಭಿಮಾನಿಯಾಗಿದ್ದವರು. ಅವರಂತೆಯೇ ಸಿನಿಮಾದಲ್ಲಿ ನಟಿಸಬೇಕು, ನಾಯಕ ನಟನಾಗಿ ಮಿಂಚಬೇಕು ಅಂತ ಇಚ್ಛೆಪಟ್ಟಿದ್ದರು. ಅವರು ಹಿಡಿದ ಹಾದಿಯಲ್ಲಿಯೇ ವಿಜಯಕಾಂತ್ ನಡೆದು ಬಂದು ಯಶಸ್ವಿಯಾಗಿದ್ದರು. ವಿಜಯಕಾಂತ್ ಅಭಿಮಾನಿಗಳ ಪಾಲಿಗೆ 'ಕ್ಯಾಪ್ಟನ್'. ಅಷ್ಟೇ ಅಲ್ಲ ಇವರಿಗೆ ಇನ್ನೊಂದು ಬಿರುದು ಇದೆ. ಅದುವೇ 'ಪುರಟ್ಚಿ ಕಲೈಂಜರ್'.

'ಪುರಟ್ಚಿ ಕಲೈಂಜರ್' ಅಂದರೆ, ಕ್ರಾಂತಿಕಾರಿ ಕಲಾವಿದ ಎಂದು ಅರ್ಥ. ಈ ಬಿರುದು ವಿಜಯಕಾಂತ್ ಅವರಿಗೆ ಕೊಟ್ಟಿದ್ದು ಯಾರು? ಅನ್ನೋದೇ ಒಂದು ಇಂಟ್ರೆಸ್ಟಿಂಗ್ ಕಥೆ. ವಿಜಯಕಾಂತ್ ಅವರ ಕ್ರಾಂತಿಕಾರಿ ಸ್ವಭಾವ ಹಾಗೂ ಕಲಾವಿದ ಎರಡನ್ನೂ ಪರಿಗಣನೆಗೆ ತೆಗೆದುಕೊಂಡು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್. ಥಾನು ಈ ಬಿರುದನ್ನು ನೀಡಿದ್ದರು.

ನಿರ್ಮಾಪಕ ಕಲೈಪುಲಿ ಎಸ್. ಥಾನು ತಮಿಳಿನ ಮತ್ತೊಬ್ಬ ನಟನಿಗೆ ಇಂತಹದ್ದೇ ಎಂದೂ ಮರೆಯಲಾಗದ ಬಿರುದನ್ನು ನೀಡಿದ್ದಾರೆ. ರಜನಿಕಾಂತ್‌ಗೆ ಸೂಪರ್‌ಸ್ಟಾರ್ ಅನ್ನೋ ಬಿರುದನ್ನು ಮೊದಲು ಕೊಟ್ಟಿದ್ದು ಕೂಡ ಇವರೇ. ಇವರೇ ನಿರ್ಮಿಸಿದ್ದ ಸಿನಿಮಾದಲ್ಲಿ ಮೊದಲ ಬಾರಿಗೆ ಟೈಟಲ್ ಕಾರ್ಡ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಎಂದು ಹಾಕಿಸಿದ್ದರು.

Who gave Late actor and dmdk founder vijayakanth got puratchi kalaignar name

ಇನ್ನು ವಿಜಯಕಾಂತ್ ಅವರಿಗೆ ಕ್ರಾಂತಿಕಾರಿ ಕಲಾವಿದ (ಪುರಟ್ಚಿ ಕಲೈಂಜರ್) ಅನ್ನೋ ಬಿರುದು ನೀಡಿದ್ದರ ಬಗ್ಗೆ ಸ್ವತ: ನಿರ್ಮಾಪಕ ಕಲೈಪುಲಿ ಎಸ್. ಥಾನು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ವಿಜಯಕಾಂತ್ ಹಾಗೂ ನಿರ್ಮಾಪಕ ಕಲೈಪುಲಿ ಎಸ್. ಥಾನು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.

More from Filmibeat

English summary
How Late actor and dmdk founder vijayakanth got Puratchi Kalaignar name
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X