ತಲೈವಾ 173 ಚಿತ್ರಕ್ಕೆ ಕೊನೆಗೂ ನಿರ್ದೇಶಕ ಆಯ್ಕೆ; ಖುಲಾಯಿಸಿತು ಯುವ ನಿರ್ದೇಶಕನ ಅದೃಷ್ಟ

ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ಸಿನಿಮಾ ಘೋಷಣೆ ಆಗಿತ್ತು. ಸುಂದರ್ ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಸಿನಿಮಾ ಘೋಷಣೆಯಾದ ಒಂದೇ ವಾರಕ್ಕೆ ಭಿನ್ನಾಭಿಪ್ರಾಯಗಳಿಂದ ನಿರ್ದೇಶಕ ಹೊರ ಬಂದಿದ್ದರು. ಅಧಿಕೃತವಾಗಿ ಪತ್ರ ಬರೆದು ಸುಂದರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ತಲೈವಾ 173 ಚಿತ್ರದಿಂದ ಸುಂದರ್ ಸಿ ಹೊರ ಬಂದ ಮೇಲೆ ಯಾರು ಚಿತ್ರ ಮುಂದುವರೆಸುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಕೆಲ ನಿರ್ದೇಶಕರು ಕಥೆ ಹೇಳಿ ಕಮಲ್ ಹಾಗೂ ರಜನಿಕಾಂತ್ ಇಬ್ಬರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಅಂತೂ ಇಂತೂ ಯುವ ನಿರ್ದೇಶಕನಿಗೆ ಆ ಸುವರ್ಣಾವಕಾಶ ಸಿಕ್ಕಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ.

Young Director Shibi Chakravarthy to Direct Rajinikanth s Thalaivaa 173 Under Kamal Haasan s Production

ರಜನಿಕಾಂತ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಅಷ್ಟು ಸುಲಭವಾಗಿಲ್ಲ ಸಿಗಲ್ಲ. ಸಾಕಷ್ಟು ಫಿಲ್ಮ್ ಮೇಕರ್ಸ್ ಕನಸು ಇದು. ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸುವ ಚಿತ್ರವನ್ನು ಕಟ್ಟಿಕೊಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ. ಯುವ ನಿರ್ದೇಶಕ ಶಿಬಿ ಚಕ್ರವರ್ತಿಗೆ ಆ ಅವಕಾಶ ಸಿಕ್ಕಿದೆ. ಕೆಲ ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದ ಶಿಬಿ 4 ವರ್ಷಗಳ ಹಿಂದೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು.

2022ರಲ್ಲಿ ಬಂದ 'ಡಾನ್' ಎಂಬ ತಮಿಳು ಚಿತ್ರಕ್ಕೆ ಶಿಬಿ ಚಕ್ರವರ್ತಿ ಆಕ್ಷನ್ ಕಟ್ ಹೇಳಿದ್ದರು. ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದರು. ಒಂದೇ ಒಂದು ಸಿನಿಮಾ ಕಟ್ಟಿಕೊಟ್ಟಿರುವ ನಿರ್ದೇಶಕನಿಗೆ ಇದೀಗ ತಲೈವಾ 173 ಸಿನಿಮಾ ಅವಕಾಶ ಸಿಕ್ಕಿದೆ.

ರಾಮ್‌ಕುಮಾರ್ ಬಾಲಕೃಷ್ಣನ್, ಅಶ್ವಥ್ ಮಾರಿಮುತ್ತು, ನಿಥಿಲನ್ ಸಾಮಿನಾಥನ್, ಎಸ್‌ಯು ಅರುಣ್‌ಕುಮಾರ್ ಮತ್ತು ಆರ್‌ಜೆ ಬಾಲಾಜಿ ಹೀಗೆ ಕೆಲ ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ರೇಸ್‌ನಲ್ಲಿದ್ದರು. ಅಂತಿಮವಾಗಿ ಶಿಬಿ ಚಕ್ರವರ್ತಿ ಜಾಕ್‌ಪಾಟ್ ಹೊಡೆದಿದ್ದಾರೆ. 'ಕೂಲಿ' ಸಿನಿಮಾ ಬಳಿಕ 'ಜೈಲರ್'-2 ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ.

ನೆಲ್ಸನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಜೈಲರ್'-2 ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಶಿವರಾಜ್‌ಕುಮಾರ್ ಮತ್ತೊಮ್ಮೆ ನರಸಿಂಹ ಆಗಿ ಅಬ್ಬರಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. 'ಪಡೆಯಪ್ಪ' ಸಿನಿಮಾ ಕೂಡ ಘೋಷಣೆಯಾಗಿದೆ. ಕೆ. ಎಸ್ ರವಿಕುಮಾರ್ ನಿರ್ದೇಶನದಲ್ಲಿ ರಜನಿಕಾಂತ್, ರಮ್ಯಾಕೃಷ್ಣ ಚಿತ್ರದಲ್ಲಿ ನಟಿಸಬೇಕಿದೆ.

ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಅದಕ್ಕಾಗಿ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶಿಬಿ ಚಕ್ರವರ್ತಿ ನಿರ್ದೇಶನದ ಚಿತ್ರದಲ್ಲೇ ಕಮಲ್ ಕೂಡ ನಟಿಸುತ್ತಾರಾ? ಎಂದು ಕಾದು ನೋಡಬೇಕಿದೆ. ತಮಿಳು ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಇವರಿಬ್ಬರು ಸ್ಟಾರ್ ನಟರು. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದು ಗೆದ್ದವರು. ಕೆಲ ವರ್ಷಗಳ ಕಾಲ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ 40 ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ನಟಿಸೋದು ಬೇಡ ಎಂದು ತೀರ್ಮಾನಿಸಿದ್ದರು.

ದಶಕಗಳ ಬಳಿಕ ಮತ್ತೆ ರಜನಿಕಾಂತ್, ಕಮಲ್ ಹಾಸನ್ ಒಟ್ಟಿಗೆ ನಟಿಸುತ್ತೇವೆ ಎಂದು ಹೇಳಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅದಕ್ಕೂ ಮುನ್ನ ಕಮಲ್ ನಿರ್ಮಾಣದಲ್ಲಿ ರಜನಿಕಾಂತ್ ನಟನೆಯ ತಲೈವಾ 173 ಸಿನಿಮಾ ತೆರೆಗೆ ಬರಲಿದೆ. ಸ್ಟಾರ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ರಜನಿಕಾಂತ್ ಬಹಳ ವರ್ಷ ಸಿನಿಮಾಗಳಲ್ಲಿ ನಟಿಸಲ್ಲ ಎನ್ನಲಾಗ್ತಿದೆ. ಹಾಗಾಗಿ ಅವರು ನಟಿಸುವ ಪ್ರತಿ ಸಿನಿಮಾ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

More from Filmibeat

Read more about: rajinikanth kamal haasan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X