"ನಿನ್ನ ಹೆಸರನ್ನು ಹೇಳುವುದಕ್ಕೆ ನಿನಗೆ ಧೈರ್ಯವಿಲ್ಲ..".. ರಜನಿ ವಿರುದ್ಧ ಯೂಟ್ಯೂಬರ್ ಗರಂ

ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗುವ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಪ್ರಿ-ರಿಲೀಸ್ ಈವೆಂಟ್, ಆಡಿಯೋ ಲಾಂಚ್ ಅಂತ ಕಾರ್ಯಕ್ರಮಗಳಿಗೇನು ಕೊರತೆ ಇರೋದಿಲ್ಲ. ಅಭಿಮಾನಿಗಳಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಿರುತ್ತಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ ಕೇಳ್ಬೇಕಾ? ಕಾರ್ಯಕ್ರಮ ಭರ್ಜರಿಯಾಗಿರುತ್ತೆ. ಆದರೆ, ಈ ಬಾರಿ 'ಜೈಲರ್' ಈವೆಂಟ್ ಬೇರೆನೇ ಇತ್ತು. ವೇದಿಕೆ ರಜನಿ ಹೇಳಿದ ಕಾಗೆ ಮತ್ತು ಹದ್ದು ಕಥೆ ದಳಪತಿ ವಿಜಯ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.

YouTuber called Rajinikanth a comedy hawk says he doesnt have the guts to say his name

ಕೆಲವು ದಿನಗಳಿಂದ ದಳಪತಿ ವಿಜಯ್ ಅಭಿಮಾನಿಗಳು ರಜನಿಕಾಂತ್ ಸೂಪರ್‌ಸ್ಟಾರ್ ಬಿರುದಿನ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿತ್ತು. ಅದಕ್ಕೆ ರಜನಿ ವೇದಿಕೆ ಮೇಲೆ ಕಾಗೆ ಹಾಗೂ ಹದ್ದಿನ ಕಥೆ ಹೇಳಿ ಮತ್ತಷ್ಟು ಕಿಡಿ ಹಚ್ಚಿದ್ದರು. ಇದು ವಿಜಯ್ ಫ್ಯಾನ್ ಕೆಂಗಣ್ಣಿಗೂ ಗುರಿಯಾಗಿತ್ತು. ಇದೇ ಸಿಟ್ಟಿನಲ್ಲಿ ಮತ್ತೊಬ್ಬ ಯೂಟ್ಯೂಬರ್ ರಜನಿಕಾಂತ್ ವಿರುದ್ಧ ಖಾರವಾಗಿ ಕಮೆಂಟ್ ಮಾಡಿದ್ದಾನೆ. ಆ ಕಮೆಂಟ್ ಬಗ್ಗೆನೇ ಚರ್ಚೆಯಾಗುತ್ತಿದೆ.

ರಜನಿ ಹೇಳಿದ ಕಥೆಯೇನು?

'ಜೈಲರ್' ಈವೆಂಟ್‌ನಲ್ಲಿ ರಜನಿಕಾಂತ್ ಹೇಳಿದ ಕಥೆ ಹೀಗಿತ್ತು. "ಹದ್ದಿನ ಸೈಜ್ ಹಾಗೂ ತಾಕತ್ತನ್ನು ಅರ್ಥ ಮಾಡಿಕೊಳ್ಳದೆ ಕಾಗೆ ಫೈಟ್ ಮಾಡುವುದಕ್ಕೆ ಪ್ರಯತ್ನ ಪಡುತ್ತೆ. ಆದರೆ ಕಾಗೆ, ಹದ್ದು ಹಾರುವಷ್ಟು ಎಷ್ಟು ಎತ್ತರಕ್ಕೆ ಹಾರಲು ಸಾಧ್ಯವಿಲ್ಲ." ಎಂದು ರಜನಿಕಾಂತ್ ಹೇಳಿದ್ದರು. ಇದು ದಳಪತಿ ವಿಜಯ್ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ಇಲ್ಲಿಂದ ರಜನಿ ಹಾಗೂ ವಿಜಯ್ ಫ್ಯಾನ್ಸ್ ನಡುವೆ ಮಾತಿನ ಯುದ್ಧ ಆರಂಭ ಆಗಿದೆ. ಯೂಟ್ಯೂಬರ್ ಒಬ್ಬ ರಜನಿಯನ್ನು ಹೀಯಾಳಿಸಿದ್ದು, ಅದು ವೈರಲ್ ಆಗುತ್ತಿದೆ.

"ರಜನಿ ಯಾವಾಗಲೂ ಏಕಾಂಗಿ"

ರಜನಿಕಾಂತ್ ಹಾಗೂ ದಳಪತಿ ವಿಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಇಳಿದಿದ್ದಾರೆ. ಈ ಬೆನ್ನಲ್ಲೇ ಬ್ಲ್ಯೂ ಸಟ್ಟೈ ಮಾರನ್ ಅನ್ನೋ ಯೂಟ್ಯೂಬರ್ ರಜನಿಕಾಂತ್ ವಿರುದ್ಧ ತಿರುಗಿಬಿದ್ದಿದ್ದಾನೆ. ರಜನಿ ವಿರುದ್ಧ ಕಮೆಂಟ್ ಮಾಡಿದ್ದಾನೆ. "ರಜನಿಕಾಂತ್ ಒಬ್ಬ ಕಾಮಿಡಿ ಗಿಡುಗ. ಕಾಗೆಯನ್ನು ಕಪ್ಪು ಹಕ್ಕಿ ಎಂದು ಕಡೆಗಣಿಸಬಾರದು. ಹದ್ದುಗೆ ಮೇಲೆರುವ ಸಾಮರ್ಥ್ಯ ಅಷ್ಟೇ ಇರೋದು. ಅದನ್ನು ಬಿಟ್ಟರೆ ಯಾವಾಗಲೂ ಏಕಾಂಗಿಯಾಗಿಯೇ ಇರುತ್ತೆ." ಎಂದು ರಜನಿ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.

YouTuber called Rajinikanth a comedy hawk says he doesnt have the guts to say his name

ನಿನ್ನ ಹೆಸರು ಹೇಳುವುದಕ್ಕೆ ಧೈರ್ಯವಿಲ್ಲ

ಯೂಟ್ಯೂಬರ್ ಇಲ್ಲಿಗೆ ನಿಲ್ಲಿಸಿಲ್ಲ. "ಹದ್ದುವಿನ ಸ್ವಭಾವ ಸ್ವಾರ್ಥ" ಎಂದಿದ್ದಾರೆ. ಅಲ್ಲದೆ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ತನ್ನ ಹೆಸರನ್ನು ಹೇಳಿಕೊಳ್ಳುವ ಧೈರ್ಯವಿಲ್ಲ ಎಂದು ಜರಿದಿದ್ದಾರೆ. 'ಜೈಲರ್' ಸಿನಿಮಾ ಅನೌನ್ಸ್ ಆದಲ್ಲಿಂದ ಬ್ಲ್ಯೂ ಸಟ್ಟೈ ಮಾರನ್ ಸೂಪರ್‌ಸ್ಟಾರ್ ರಜನಿಕಾಂತ್ ಅನ್ನು ಅಣಕಿಸುತ್ತಲೇ ಇದ್ದಾರೆ.

ರಜನಿ ವಯಸ್ಸು ಅಣಿಸಿದ್ದ ಯೂಟ್ಯೂಬರ್

'ಜೈಲರ್' ಸಿನಿಮಾದ 'ಕಾವಾಲಾ' ಸಾಂಗ್ ಟ್ರೆಂಡಿಂಗ್‌ನಲ್ಲಿ ಇದ್ದಾಗಲೂ ಸೂಪರ್‌ಸ್ಟಾರ್ ರಜನಿಕಾಂತ್ ವಯಸ್ಸನ್ನು ಗುರಿಯಾಗಿಸಿಕೊಂಡು ಯೂಟ್ಯೂಬರ್ ಕಮೆಂಟ್ ಮಾಡಿದ್ದ. ಈಗ ರಜನಿಕಾಂತ್ ಹೇಳಿದ ಕಾಗೆ ಹಾಗೂ ಗಿಡುಗನ ಕಥೆಯನ್ನು ಮುಂದಿಟ್ಟುಕೊಂಡು ಕಿಡಿಕಾರಿದ್ದಾನೆ. ಯೂಟ್ಯೂಬರ್‌ನ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

More from Filmibeat

English summary
Youtuber Comment on Superstar Rajinikanth goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X