For Quick Alerts
  ALLOW NOTIFICATIONS  
  For Daily Alerts

  ತೆಲುಗು ಸ್ಟಾರ್ ದಿಗ್ಗಜರ ನಡುವೆ 'ಸುದೀಪೋತ್ಸವ'

  |
  <ul id="pagination-digg"><li class="previous"><a href="/news/02-kichcha-sudeep-eega-movie-audio-release-aid0172.html">« Previous</a>
  ಕನ್ನಡ, ನಂತರ ಇಂಗ್ಲಿಷ್ ಹೀಗೆ ಎರಡರಲ್ಲೂ ನಿರರ್ಗಳವಾಗಿ ಮಾತನಾಡಿದ ಸುದೀಪ್, ರಾಜಮೌಳಿಯಂತ ಪ್ರತಿಭಾವಂತರ ಜೊತೆ ಕೆಲಸಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಧನ್ಯವಾದ ಮತ್ತು ಸಂತೋಷ ಎರಡನ್ನೂ ವ್ಯಕ್ತಪಡಿಸಿದರು. ಈಗ ಚಿತ್ರ ತಮಗೆ ತೆಲುಗಿನಲ್ಲಿ ಒಂದು 'ರೆಕಗ್ನಿಷನ್' ತಂದುಕೊಡುತ್ತದೆ ಎಂದು ಹೇಳಿದರು.

  ತೆಲುಗು ಸ್ಟಾರ್ ನಟರಾದ ರವಿತೇಜ ಮತ್ತು ಜೂನಿಯರ್ ಎನ್ ಟಿಆರ್ ತಮಗೆ ಮೊದಲಿನಿಂದಲೂ ಸ್ನೇಹವಿದೆ ಎಂದು ಹೇಳಿದ ಸುದೀಪ್, ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ತಮಗೆ ಅಲ್ಲೂ ಒಂದು ಸ್ಥಾನ ಕಲ್ಪಿಸಿಕೊಟ್ಟ ರಾಜಮೌಳಿಯವರನ್ನು ಮನಸಾರೆ ಹೊಗಳಿದರು. ಬಳ್ಳಾರಿಯ ವೇದಿಕೆಯಲ್ಲಿ ತೆಲುಗು ನಟರೆಲ್ಲ ಸುದೀಪ್ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಹೇಳಿದರು.

  ಮಗಧೀರ, ವಿಕ್ರಮಾರ್ಕುಡು, ಮರ್ಯಾದಾ ರಾಮನ್ನ, ಛತ್ರಪತಿ, ಸೈ ಹಾಗೂ ಯಮದೊಂಗ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಾಜಮೌಳಿ, ಈಗ ಚಿತ್ರದ ಮೂಲಕ ಹೊಸ ದಾಖಲೆ ಮೆರೆಯಲಿದ್ದಾರೆಂದು ಇಡೀ ದಕ್ಷಿಣ ಭಾರತ ನಂಬಿದೆ. ಇದೇ ತಿಂಗಳು, ಏಪ್ರಿಲ್ 27ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ನಂತರ ಸುದೀಪ್ ಗ್ರಾಫ್ ಬಹಳಷ್ಟು ಮೇಲೇರಲಿದೆ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/02-kichcha-sudeep-eega-movie-audio-release-aid0172.html">« Previous</a>
  English summary
  Kannada Actor Kichcha Sudeep starer Telugu movie Eega's Audio Released yesterday (April 01, 2012) | in Bellary. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X