2026 Half Year Report: 6 ತಿಂಗಳಲ್ಲಿ ತೆಲುಗು ಚಿತ್ರರಂಗದ ಹಣೆಬರಹವೇನು? ಬಾಕ್ಸಾಫೀಸ್‌ನಲ್ಲಿ ಗೆದ್ದವರು ಯಾರು?

2026ರ ಮೊದಲ ಆರು ತಿಂಗಳುಗಳು ಮುಗಿದೇ ಹೋಗಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಶ್ರೀಮಂತ ಚಿತ್ರರಂಗವಾಗಿರುವ ತೆಲುಗು ಚಿತ್ರರಂಗ ಸಂಕ್ರಾಂತಿ ಹಬ್ಬದಿಂದ ಶುರು ಮಾಡಿತ್ತು. ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬಕ್ಕೆ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗುತ್ತವೆ. ಅಲ್ಲಿಂದ ಟಾಲಿವುಡ್‌ನ ಅಸಲಿ ಪಯಣ ಶುರುವಾಗುತ್ತೆ. ಸೂಪರ್‌ಸ್ಟಾರ್ ಸಿನಿಮಾಗಳು ಗೆದ್ದರೆ, ವರ್ಷ ಪೂರ್ತಿ ಗಲ್ಲಾ ಪೆಟ್ಟಿಗೆ ಗಲ ಗಲ ಅಂತಿರುತ್ತೆ.

ಈ ವರ್ಷ ಕೂಡ ಸಂಕ್ರಾಂತಿಗೆ ತೆಲುಗು ಸೂಪರ್‌ಸ್ಟಾರ್‌ಗಳು ಕಾಂಪಿಟೇಷನ್‌ಗೆ ಬಿದ್ದು ಸಿನಿಮಾ ರಿಲೀಸ್ ಮಾಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಪ್ರಭಾಸ್, ಮಾಸ್ ಮಹಾರಾಜ ರವಿತೇಝ ಸೇರಿದಂತೆ ತೆಲುಗು ನಟರ ಸಿನಿಮಾಗಳು ರಿಲೀಸ್ ಆಗಿದ್ದವು. ಬಾಕ್ಸಾಫೀಸ್‌ನಲ್ಲಿ ಕಾದಾಟಕ್ಕೆ ಇಳಿದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದು ಬೀಗಿದರೆ, ಮತ್ತೆ ಕೆಲ ಸಿನಿಮಾಗಳು ಮಕಾಡೆ ಮಲಗಿದ್ದವು.

2026 Half Year Report Peddi to Ustaad Bhagat Singh Top 5 Telugu movies Box Office Success

ತೆಲುಗು ಚಿತ್ರರಂಗದಲ್ಲಿ ಕೆಲ ಸಿನಿಮಾಗಳು ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿವೆ. ಇನ್ನು ಕೆಲ ಸಿನಿಮಾಗಳು ಸೋತಿವೆ. ಈಗಾಗಲೇ ಅರ್ಧ ವರ್ಷ ಮುಗಿದಿದ್ದು, ಟಾಲಿವುಡ್‌ಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಆದರೆ, ದಕ್ಷಿಣ ಭಾರತದ ಇತರ ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ, ಟಾಲಿವುಡ್‌ನಲ್ಲಿ ಕೆಲ ಸಿನಿಮಾಗಳಿಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದೆ. ಹಾಗಿದ್ದರೆ, 2026ರ ಜನವರಿಯಿಂದ ಜೂನ್‌ವರೆಗಿನ ಟಾಲಿವುಡ್‌ನ ಫಸ್ಟ್‌ ಹಾಫ್‌ನ ರಿಪೋರ್ಟ್ ಕಾರ್ಡ್ ಇಲ್ಲಿದೆ.

6 ತಿಂಗಳು.. 90 ಸಿನಿಮಾ.. ಗೆದ್ದಿದ್ದೆಷ್ಟು?

ಕನ್ನಡ ಚಿತ್ರರಂಗದಂತೆ ಟಾಲಿವುಡ್‌ನಲ್ಲೇನು ವಿಶೇಷ ಅಲ್ಲ. ತೆಲುಗು ಚಿತ್ರರಂಗದಲ್ಲಿ ಕಳೆದ ಆರು ತಿಂಗಳಲ್ಲಿ 90ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಇಷ್ಟು ಸಿನಿಮಾಗಳಲ್ಲಿ ಗೆದ್ದಿದ್ದು ಬೆರಳೆಣಿಕೆಯಷ್ಟು ಮಾತ್ರ. ಮೆಗಾ ಹಿಟ್ ಹಾಗೂ ಬ್ಲಾಕ್‌ಬಸ್ಟರ್ ಅಂತ ಆಗಿದ್ದು ಕೂಡ ಕಡಿಮೆಯೇ. ಆದರೆ, ಟಾಪ್‌ 5 ನಲ್ಲಿರುವ ಸಿನಿಮಾಗಳು ನೂರು ಕೋಟಿಯ ಹತ್ತಿರ, ಇಲ್ಲವೇ ಅದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಟಾಪ್ ಕಲೆಕ್ಷನ್ ಮಾಡಿದ ಸಿನಿಮಾಗಳಿವು.


1. ಪೆದ್ದಿ

ಇದೇ ತಿಂಗಳು, ಅಂದರೆ, ಜೂನ್ 2026 ಮೊದಲವಾರದಲ್ಲಿ ರಿಲೀಸ್ ಆಗಿದ್ದ 'ಪೆದ್ದಿ' ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಇದು ವರ್ಲ್ಡ್‌ವೈಡ್ ₹331.10 ಕೋಟಿ ಕಲೆಕ್ಷನ್ ಮಾಡಿದೆ. ರಾಮ್ ಚರಣ್ ನಟಿಸಿದ ಈ ಸಿನಿಮಾ ಕಳೆದ ಆರು ತಿಂಗಳಲ್ಲಿ ತೆರೆಕಂಡ ಚಿತ್ರಗಳಲ್ಲೇ ಅತೀ ಹೆಚ್ಚು ಕಲೆಕ್ಷನ್ ಆಗಿದೆ.

2. ಮನ ಶಂಕರ ವರ ಪ್ರಸಾದ್ ಗಾರು

'ಪೆದ್ದಿ' ಸಿನಿಮಾ ಮೂಲಕ ಮಗ ರಾಜ್‌ ಚರಣ್ ಟಾಪ್‌ನಲ್ಲಿ ಇದ್ದರೆ, ಇತ್ತ ಮೆಗಾಸ್ಟಾರ್ ಚಿರಂಜೀವಿ ನಂತರ ಸ್ಥಾನದಲ್ಲಿ ಇದ್ದಾರೆ. ಸ್ಟಾರ್ ನಿರ್ದೇಶಕ ಅನಿಲ್ ರಾವಿಪುಡಿ ನಿರ್ದೇಶಿಸಿದ 'ಮನ ಶಂಕರ ವರಪ್ರಸಾದಗಾರು' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿತ್ತು. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ₹300 ರಿಂದ ₹310 ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್ ಮಾಡಿದೆ.

2026 Half Year Report Peddi to Ustaad Bhagat Singh Top 5 Telugu movies Box Office Success

3. ದಿ ರಾಜಾ ಸಾಬ್

ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಂಕ್ರಾಂತಿ ಹಬ್ಬಕ್ಕೆಂದು ರಿಲೀಸ್ ಆಗಿತ್ತು. ಮಾಸ್ ಜೊತೆ ಹಾಸ್ಯದ ಸನ್ನಿವೇಶಗಳಿರುವ ದೃಶ್ಯಗಳಲ್ಲಿ ಪ್ರಭಾಸ್ ನಟಿಸಿದ್ದರು. ಸಿನಿಮಾ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟ ಆಗದೇ ಇದ್ದರೂ, ಬಾಕ್ಸಾಫೀಸ್‌ನಲ್ಲಿ ₹208.38 ಕೋಟಿ ಗಳಿಸಿ, ಅವರೇಜ್ ಲಿಸ್ಟ್ ಸೇರಿತ್ತು.

4 ಅನಗನಗ ಒಕ ರಾಜು

ತೆಲುಗು ನಟ ನವೀನ್ ಪೊಲಿಶೆಟ್ಟಿ ಹಾಗೂ ಮೀನಾಕ್ಷಿ ಚೌಧರಿ ನಟನೆಯ 'ಅನಗನಗ ಒಕ ರಾಜು' ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಿತ್ತು. ಈ ಯುವ ನಟನ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಸುಮಾರು ₹100.20 ಕೋಟಿ ಕಲೆಕ್ಷನ್ ಮಾಡಿ ಸೆಮಿ-ಹಟ್ ಲಿಸ್ಟ್ ಸೇರಿತ್ತು.

5. ಉಸ್ತಾದ್ ಭಗತ್ ಸಿಂಗ್

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ಕೂಡ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿತ್ತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಒಳ್ಳೆಯ ಕಲೆಕ್ಷನ್ ಮಾಡಿದೆ ಎನ್ನಬಹುದು. ಈ ಸಿನಿಮಾ ಸುಮಾರು ₹95.00 ಕೋಟಿ ಕಲೆಕ್ಷನ್ ಮಾಡಿ ಅವರೇಜ್ ಎನಿಸಿಕೊಂಡಿತ್ತು.

ನಿರೀಕ್ಷೆ ಹುಸಿಗೊಳಿದ ಸಿನಿಮಾಗಳಿವು

ಟಾಲಿವುಡ್‌ನಲ್ಲೂ ಪ್ರೇಕ್ಷಕರು ಚೂಸಿಯಾಗಿದ್ದಾರೆ ಅನ್ನೋದಕ್ಕೆ 2026ರ ಮೊದಲಾರ್ಧದ ಫಲಿತಾಂಶವೇ ಹೇಳುತ್ತಿದೆ. ಈ ಆರು ತಿಂಗಳಲ್ಲಿ ರಿಲೀಸ್ ಆಗಿದ್ದ 90 ಸಿನಿಮಾಗಳಲ್ಲಿ ಗೆದ್ದಿದ್ದು, ಬರೀ ಐದು ಸಿನಿಮಾಗಳು. ಸಮಂತಾ ನಟನೆಯ 'ಮಾ ಇಂಟಿಕಿ ಬಂಗಾರಂ' ಇತ್ತೀಚೆಗೆ ರಿಲೀಸ್ ಆಗುತ್ತಿದ್ದು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೆ, ಕೆಲ ಸಿನಿಮಾಗಳು ನಿರೀಕ್ಷೆಯನ್ನು ಹುಸಿಯಾಗಿತ್ತು.

ದಿ ರಾಜಾಸಾಬ್: ಪ್ರಭಾಸ್ ಹಾಗೂ ನಿರ್ದೇಶಕ ಮಾರುತಿ ಕಾಂಬಿನೇಷನ್‌ನ ಹಾರರ್-ಕಾಮಿಡಿ ಸಿನಿಮಾ ಅಭಿಮಾನಿಗಳಲ್ಲಿ ಆಕಾಶದೆತ್ತರದ ನಿರೀಕ್ಷೆಯಿತ್ತು. ಸಂಕ್ರಾಂತಿಗೆ ಬಿಡುಗಡೆಯಾದ ಈ ಸಿನಿಮಾ ಗ್ಲೋಬಲಿ ಕಲೆಕ್ಷನ್ ಆಗಿದ್ದು ಬರೀ ₹208.38 ಕೋಟಿ. ಸ್ಕ್ರೀನ್ ಪ್ಲೇ ಮತ್ತು ಬೋರಿಂಗ್ ಸ್ಟೋರಿಯಿಂದ ಪ್ರಭಾಸ್ ಇಮೇಜ್ ಅನ್ನೂ ಮೀರಿಸಿ ಯಶಸ್ಸನ್ನು ಗಳಿಸಲು ಸಾಧ್ಯವಾಗಿಲ್ಲ.

ಭರ್ತ ಮಹಾಶಯುಲಕು ವಿಜ್ಞಪ್ತಿ: ಮಾಸ್ ಮಹಾರಾಜ ರವಿತೇಜ ಹಾಗೂ ಕಿಶೋರ್ ತಿರುಮಲ ಕಾಂಬಿನೇಷನ್ ಸಿನಿಮಾ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಹಳೆಯ ಶೈಲಿಯ ರೊಟೀನ್ ಕಥೆಯನ್ನು ಹೊಂದಿದ್ದರಿಂದ ಪ್ರೇಕ್ಷಕರಿಗೆ ಇಷ್ಟ ಆಗಕಿಲ್ಲ.

ನಾರಿ ನಾರಿ ನಡುಮ ಮುರಾರಿ: ಶರ್ವಾನಂದ್ ನಟನೆಯ ಈ ಕಾಮಿಡಿ ಸಿನಿಮಾ ಗಳಿಸಿದ್ದು ₹36 ಕೋಟಿ ಅಷ್ಟೇ.

English summary
2026 Half Year Report: Peddi to Ustaad Bhagat Singh Top 5 Telugu movies Box Office Success Details.
Read more about: film industry report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X