ಹೃದ್ರೋಗ, ಉಸಿರಾಡಲು ಆಗ್ತಿಲ್ಲ ಅಂದ್ರೂ ಕೇಳಲಿಲ್ಲ; ಈ ಟಿವಿ ಮುಖ್ಯಸ್ಥರಿಗೆ ಆಸ್ಪತ್ರೆಯಲ್ಲಿ ಪೊಲೀಸರಿಂದ ಹಿಂಸೆ?

ದಕ್ಷಿಣ ಭಾರತದ ಜನಪ್ರಿಯ ಉದ್ಯಮಿ ರಾಮೋಜಿ ರಾವ್ ಇಂದು (ಜೂನ್ 8) ನಿಧನರಾಗಿದ್ದಾರೆ. 87 ವರ್ಷದ ರಾಮೋಜಿ ರಾವ್ ಹೃದಯ ಹಾಗೂ ವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ಬೆಳಗಿನ ಜಾವ 3.45ಕ್ಕೆ ಕೊನೆಯುಸಿರೆಳೆದಿದ್ದಾರೆ.

ಮಾಧ್ಯಮ ಲೋಕದ ದಿಗ್ಗಜರಾಗಿದ್ದ ರಾಮೋಜಿ ರಾವ್ ನಿಧನದಿಂದ ತೆಲುಗು ಮಂದಿಯನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಈ ಮೂಲಕ ಮಾಧ್ಯಮದ ಯುಗವೊಂದು ಅಂತ್ಯಗೊಂಡಿದೆ. ಹಿರಿಯ ಉದ್ಯಮಿಯ ನಿಧನದ ಸುದ್ದಿ ಹೊರಬಿದ್ದ ಕೂಡ ತಾರೆಯರು ಅಂತಿಮ ದರ್ಶನ ಮಾಡುತ್ತಿದ್ದಾರೆ.

A video capturing police investigating Ramoji Rao during his hospital stay has gone viral

ಇದೇ ವೇಳೆ ರಾಮೋಜಿ ರಾವ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ, ಕೆಲವು ಅಧಿಕಾರಿಗಳು ಅವರನ್ನು ತನಿಖೆ ಮಾಡುತ್ತಿರುವ ಹಾಗೆ ಆ ವಿಡಿಯೋದಲ್ಲಿ ಕಾಣಿಸುತ್ತಿದೆ. ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ಹೇಳುತ್ತಿದ್ದರೂ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೈಎಸ್ ಜಗನ್ ಸರ್ಕಾರ ಕೊಟ್ಟ ಹಿಂಸಾಚಾರದಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು. ಈ ಕಾರಣದಿಂದಲೇ ಗಂಭೀರ ಸಮಸ್ಯೆಗಳು ಎದುರಾದವು ಎಂದು ಹಲವು ಸಿನಿಮಾ ತಾರೆಯರು ಹೇಳಿದ್ದೂ ಇದೆ. ಇದೇ ವೇಳೆ ಈ ವಿಡಿಯೋವನ್ನು ಶೇರ್ ಮಾಡಿ ಇದು ಜಗನ್ ಮಾಡಿದ ಹಿಂಸೆ ಎಂದು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.

ಕೆಲವು ವರ್ಷಗಳಿಂದ ವೈ.ಎಸ್.ರಾಜಶೇಖರ್ ರೆಡ್ಡಿ ಹಾಗೂ ವೈ.ಎಸ್.ಜಗನ್ಮೋಹನ್ ರೆಡ್ಡಿ ಸರ್ಕಾರಗಳು ಇವರನ್ನು ಟಾರ್ಗೆಟ್ ಮಾಡಿದ್ದು ಗೊತ್ತೇ ಇದೆ. ಮಾರ್ಗದರ್ಶಿ ಚಿಟ್ ಫಂಡ್ ವಿಷಯಕ್ಕೆ ಸಂಬಂಧಿಸಿದಂತೆ ರಾಮೋಜಿ ರಾವ್ ಮೇಲೆ ಗಂಭೀರ ಆರೋಪ ಮಾಡಲಾಗಿತ್ತು. ಈ ಮೂಲಕ ಅವರ ಹೆಸರು ಹಾಗೂ ಕುಟುಂಬದ ಘನತೆಗೆ ಹಾನಿ ಮಾಡಲು ಮುಂದಾಗಿದ್ದಾರೆಂದು ವರದಿಗಳಾಗಿವೆ.

87 ವರ್ಷದ ಉದ್ಯಮಿ ರಾಮೋಜಿ ರಾವ್ ಇದರ ವಿರುದ್ಧ ಹೋರಾಡುತ್ತಲೇ ಇದ್ದರು. ಆದರೆ, ಇತ್ತೀಚೆಗೆ ಅವರಿಗೆ ವಯೋಸಹಜ ಕಾಯಿಲೆಗಳು ಎದುರಾಗಿದ್ದವು. ಹೃದಯ ಸಂಬಂಧಿ ಹಾಗೂ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿದ್ದರು. ಈ ವೇಳೆ ಕೆಲವು ಅಧಿಕಾರಿಗಳು ಅವರಿದ್ದ ಹಾಸಿಗೆ ಬಳಿಗೆ ತೆರಳಿ ವಿಚಾರಣೆ ನೆಡೆಸಿದ್ದರು ಎನ್ನಲಾಗಿದೆ. ಈ ವಿಡಿಯೋದಲ್ಲಿ ರಾಮೋಜಿ ರಾವ್ ಹೃದ್ರೋಗವಿದೆ ಎಂದರೂ ಅಧಿಕಾರಿಗಳು ಕೇಳಿರಲಿಲ್ಲ. ಈ ವಿಡಿಯೋ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದಂತೆ ನೆಟ್ಟಿಗರು ಜಗನ್ ವಿರುದ್ಧ ಕಿಡಿಕಾರಿದ್ದಾರೆ. "ರಾಮೋಜಿ ರಾವ್ ಗೆ ಹೇಗೆ ಟಾರ್ಚರ್ ಕೊಟ್ಟಿದ್ದಾರೆ ನೋಡಿ", "ನನಗೆ ಹಾರ್ಟ್ ಪ್ರಾಬ್ಲಂ ಇದೆ ಅಂದರೂ ಬಿಡಲಿಲ್ಲ." ಎಂದು ನೆಟ್ಟಿಗರು ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ. ಹೀಗಾಗಿ ನೆಟ್ಟಿಗರು ವೈಎಸ್‌ ಜಗನ್‌ ವಿರುದ್ಧ ಹರಿಹಾಯ್ದಿದ್ದಾರೆ.

More from Filmibeat

English summary
Viral Video Shows Police Investigating Ramoji Rao in Hospital:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X