"ಆತ ವಿವಾಹಿತ ನಟ.. ಬೋಲ್ಡ್ ಸೀನ್‌ನಲ್ಲಿ ನಟಿಸಿದ್ದು ಭಾವನೆಗಳನ್ನು ಹುಟ್ಟಿಸಲಿಲ್ಲ"; 'ಆ ದಿನಗಳು' ನಟಿ ಅರ್ಚನಾ
ಕನ್ನಡ ಚಿತ್ರರಂಗದ ಬಂದ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಆ ದಿನಗಳು' ಕೂಡ ಒಂದು. ಭೂಗತ ಲೋಕದ ಹಿನ್ನೆಲೆ ಇದ್ದರೂ, ಲವ್ ಸ್ಟೋರಿಯಿಂದ ಸಿನಿಮಾ ಗಮನ ಸೆಳೆದಿತ್ತು. 'ಆ ದಿನಗಳು' ರಿಲೀಸ್ ಆದಾಗ ಈ ಸಿನಿಮಾದ ನಾಯಕಿ ಕೂಡ ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗಿದ್ದರು. ತೆಲುಗು ಮೂಲದ ನಟಿಯಾಗಿದ್ದರೂ, ಅಪ್ಪಟ ಕನ್ನಡತಿಯಂತೆ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದರು.
ಅರ್ಚನಾ ಕನ್ನಡದಲ್ಲಿ ನಟಿಸಿದ ಸಿನಿಮಾಗಳಲ್ಲಿ ಗ್ಲಾಮರ್ ಕಮ್ಮಿಯಿತ್ತು. ಬೋಲ್ಡ್ ಸೀನ್‌ಗಳಲ್ಲಿ ಹೆಚ್ಚಾಗಿ ನಟಿಸಿಲ್ಲ. ಆದರೆ, ತೆಲುಗು ಸಿನಿಮಾಗಳಲ್ಲಿ ಗ್ಲಾಮರಸ್ ರೋಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ತೆಲುಗು ಚಿತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಅರ್ಚನಾ ವಿವಾಹದ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆಗಾಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಪೋಸ್ಟ್ ಮಾಡುತ್ತಾರೆ. ಪತಿಯೊಂದಿಗೆ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ನಟಿ ತೆಲುಗಿನ ಬೋಲ್ಡ್ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಪಾತ್ರದ ಬಗ್ಗೆ ತೆಲುಗು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಓಪನ್ ಆಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಆ ಸಂದರ್ಶನ ಈಗ ಮತ್ತೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ವಿಡಿಯೋ ವೈರಲ್ ಆಗುವುದಕ್ಕೆ ಕಾರಣವಿದೆ. 'ಕಮಲತೋ ನಾ ಪ್ರಯಾಣಂ' ಅನ್ನುವ ಸಿನಿಮಾದಲ್ಲಿ ನಟಿ ಅರ್ಚನಾ ಲೈಂಗಿಕ ಕಾರ್ಯಕರ್ತೆಯ ಪಾತ್ರ ಮಾಡಿದ್ದರು. ಈ ಪಾತ್ರ ಅವರ ವೃತ್ತಿ ಬದುಕಿನ ಚಾಲೆಂಜಿಂಗ್ ರೋಲ್ ಆಗಿತ್ತು. ಸಂದರ್ಶನದ ವೇಳೆ ಅರ್ಚನಾಗೆ ನಿರೂಪಕರು ಬೋಲ್ಡ್ ದೃಶ್ಯಗಳಲ್ಲಿ ನಟಿಸುವಾಗ ಫೀಲಿಂಗ್ ಏನೂ ಬರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಅರ್ಚನಾ ಕೊಟ್ಟ ಉತ್ತರ ಮತ್ತೆ ವೈರಲ್ ಆಗಿದೆ.
"ಬೋಲ್ಡ್ ಸೀನ್‌ಗಳಲ್ಲಿ ನಟಿಸುವಾಗ ನಮಗೆ ಏನೂ ಅನಿಸುವುದಿಲ್ಲ. ನಾನೂ ಕೆಲವು ಸಿನಿಮಾಗಳಲ್ಲಿ ಬೋಲ್ಡ್ ಸೀನ್‌ಗಳನ್ನು ಮಾಡಿದ್ದೇನೆ. ನಿಜಕ್ಕೂ ಅಲ್ಲಿ ಕಂಫರ್ಟ್ ಇಲ್ಲ ಅಂತ ಅನಿಸುತ್ತೆ. ಯಾಕಂದ್ರೆ, ನಾಚಿಕೆ ಅನ್ನೋದು ಬಂದೇ ಬರುತ್ತೆ. ಯಾರೋ ನಿಮ್ಮನ್ನು ಅಪ್ಪಿಕೊಂಡಾಗ ಏನೋ ಫೀಲಿಂಗ್ಸ್ ಬಂತು ಅನ್ನೋದು ಏನಿಲ್ಲ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

'ಕಮಲತೋ ನಾ ಪ್ರಯಾಣಂ' ಸಿನಿಮಾದ ನಾಯಕ ನಟ ಶಿವಾಜಿಯೊಂದಿಗೆ ಬೋಲ್ಡ್ ಸೀನ್‌ನಲ್ಲಿ ನಟಿಸುವಾಗ ಒಂದೇ ಟೇಕ್‌ನಲ್ಲಿ ಓಕೆ ಆಗಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. "ಶಿವಾಜಿ ಅವರೊಂದಿಗೆ ನಾನು ಕೆಲಸ ಮಾಡುವಾಗ ನಾವಿಬ್ಬರೂ ಸೀನ್ ಅನ್ನು ಕಂಪೋಸ್ ಮಾಡುತ್ತಿದ್ದೆವು. ಯಾಕಂದ್ರೆ ಒಂದೇ ಶಾಟ್‌ನಲ್ಲಿ ಓಕೆ ಆಗಬೇಕು. ಯಾಕೆ ಅಂದರೆ, ಓಪನ್ ಏರಿಯಾದಲ್ಲಿ ಬೋಲ್ಡ್ ಸೀನ್ ಅನ್ನು ಮಾಡಬೇಕು. ಅದೊಂದು ವೇಶ್ಯೆಯ ಪಾತ್ರ. ಹೀಗಾಗಿ ಟ್ರೆಡಿಷನಲ್ ಪಾತ್ರ ಮಾಡಬೇಕು ಅಂದರೆ, ಅದು ನಡೆಯೋದಿಲ್ಲ. ಈ ಪಾತ್ರ ಬೋಲ್ಡ್ ಆಗಿರಬೇಕು. ಆದರೆ, ಅಸಹ್ಯ ಅಂತ ಅನಿಸಬಾರದು." ಎಂದು ತಮ್ಮ ಅಭಿಪ್ರಾಯ ಹೇಳಿದ್ದರು.
ಹಾಗೇ "ಕಮಲತೋ ನಾ ಪ್ರಯಾಣಂ ಸಿನಿಮಾದ ಪ್ರತಿಯೊಂದು ಬೋಲ್ಡ್ ಸೀನ್ ಕೂಡ ಸಿಂಗಲ್ ಟೇಕ್‌ನಲ್ಲಿ ಓಕೆ ಆಗಿತ್ತು. ಇಂತಹ ಬೋಲ್ಡ್ ಸೀನ್ ಮಾಡುವಾಗ ಫೀಲಿಂಗ್ ಬರುತ್ತಾ ಅಂದ್ರೆ, ನಟಿಯರ ಮೇಲೆ ಡಿಪೆಂಡ್ ಆಗುತ್ತೆ. ನನಗೆ ಅಂತಹ ಏನೂ ಫೀಲಿಂಗ್ ಬಂದಿಲ್ಲ." ಎಂದು ಆ ಸಿನಿಮಾ ಮಾಡುವಾಗ ಆದ ಅನುಭವವನ್ನು ಹಂಚಿಕೊಂಡಿದ್ದರು.
ಇಷ್ಟೇ ಅಲ್ಲದೆ, ಬೋಲ್ಡ್ ದೃಶ್ಯಗಳಲ್ಲಿ ನಟಿಸುವಾಗ ಏನೂ ಫೀಲ್ ಆಗದೆ ಇರುವುದಕ್ಕೆ ಕಾರಣವಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಶಿವಾಜಿ ವಿವಾಹಿತ ನಟನಾಗಿದ್ದರಿಂದ ಅವರು ನನ್ನವನಲ್ಲ ಎಂಬ ಭಾವನೆ ಬಂದಿತ್ತು ಎಂದಿದ್ದರು. "ಯಾಕಂದ್ರೆ, ಶಿವಾಜಿ ವಿವಾಹಿತ ನಟ. ನಾನು ಯಾರನ್ನಾದರೂ ಇಷ್ಟ ಪಟ್ಟು ರೊಮ್ಯಾಂಟಿಕ್ ಸೀನ್ ಮಾಡಿದರೆ, ನನಗೆ ಏನಾದರೂ ಫೀಲ್ ಆಗಬಹುದು. ಏನೇ ಇದ್ದರೂ ಮೊದಲ ಭಾವನಾತ್ಮಕವಾಗಿ ಕನೆಕ್ಟ್ ಆಗಬೇಕಲ್ವಾ? ಅವರು ಮದುವೆ ಆಗಿದ್ದ ಹೀರೋ. ಅವರು ನನ್ನವನಾಗಲು ಸಾಧ್ಯವಿಲ್ಲ." ಎಂದು ಹೇಳಿದ್ದರು. ಅರ್ಚನಾ ಈಗ ವಿವಾಹವಾಗಿ ಪತಿಯೊಂದು ಖುಷಿಯಾಗಿದ್ದಾರೆ.


Click it and Unblock the Notifications











