ನರೇಶ್-ಪವಿತ್ರಾ ಲೋಕೇಶ್ ಒಟ್ಟಿಗಿದ್ದಾರೆ: 'ನರೇಶ್ ಒಬ್ಬ ಹೆಣ್ಣುಬಾಕ' 3ನೇ ಪತ್ನಿ ರಮ್ಯಾ ಸ್ಟೋಟಕ ಹೇಳಿಕೆ!

ಕಳೆದೊಂದು ವಾರದಿಂದ ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ವಿಚಾರವಾಗಿ ಚರ್ಚೆಯಾಗುತ್ತಿದೆ. ಆದರೆ, ಪ್ರಕರಣದ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಈ ಬಗ್ಗೆ ಇನ್ನೂ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ. ಅಷ್ಟರಲ್ಲೇ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ಬಗ್ಗೆ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಈಗಾಗಲೇ ಮದುವೆಯಾಗಿದ್ದಾರೆ ಎನ್ನುವ ಮಾತು ಟಾಲಿವುಡ್‌ನಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಕಳೆದೊಂದು ವಾರದಿಂದ ತೆಲುಗು ಮಾಧ್ಯಮಗಳಲ್ಲಿ ಈ ವಿಚಾರವಾಗಿಯೇ ಚರ್ಚೆಯಾಗುತ್ತಿದೆ. ಇನ್ನೂ ಮೂರನೇ ಪತ್ನಿಗೆ ವಿಚ್ಛೇದನ ನೀಡದೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಸ್ವತ: ನರೇಶ್ ಮೂರನೇ ಪತ್ನಿ ರಮ್ಯಾ ಪತಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಅಷ್ಟಕ್ಕೂ ಬೆಂಗಳೂರಿನ ಮಹಿಳೆಯನ್ನೇ ತೆಲುಗು ನಟ ನರೇಶ್ ಮೂರನೇ ಮದುವೆಯಾಗಿದ್ದರು. ಅವರೇ ರಮ್ಯಾ ರಘುಪತಿ. ಕನ್ನಡ ನ್ಯೂಸ್‌ ಚಾನೆಲ್‌ ಪವರ್‌ ಟಿವಿ ಸಂದರ್ಶನದಲ್ಲಿ ರಮ್ಯಾ ರಘುಪತಿ ತಮ್ಮ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆ ತಮ್ಮ ಪತಿ ನಟ ನರೇಶ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪತಿ ನರೇಶ್ ಬಗ್ಗೆ ರಮ್ಯಾ ರಘುಪತಿ ಏನು ಹೇಳಿದ್ದಾರೆ? ಅನ್ನುವುದರ ಆಯ್ದ ಭಾಗ ಇಲ್ಲಿದೆ.

'ನರೇಶ್ ಹೆಣ್ಣು ಬಾಕ' ಎಂದ ರಮ್ಯಾ

'ನರೇಶ್ ಹೆಣ್ಣು ಬಾಕ' ಎಂದ ರಮ್ಯಾ

ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆ ಮ್ಯಾಟರ್ ಕಿಚ್ಚು ಹಚ್ಚುತ್ತಿದ್ದಂತೆ ಮೂರನೇ ಪತ್ನಿ ರೆಬೆಲ್ ಆಗಿದ್ದಾರೆ. ತನ್ನ ಪತಿ ನರೇಶ್ ಬಗ್ಗೆ ಸ್ಟೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. " ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ಒಳ್ಳೆ ಮಾತಿನಲ್ಲಿ ಹೇಳಿದ್ದು ಆಯ್ತು. ಅತ್ತು ಹೇಳಿದ್ದಾಯ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಅವರು ಹೇಳಿದ್ದರು. ಬಳಿಕ ಅದೆಲ್ಲಾ ಹೊರಟು ಹೋಯ್ತು." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ನರೇಶ್ ಅಫೇರ್‌ಗಳ ಬಗ್ಗೆ ಪತ್ನಿ ಬೇಸರ

ನರೇಶ್ ಅಫೇರ್‌ಗಳ ಬಗ್ಗೆ ಪತ್ನಿ ಬೇಸರ

ತೆಲುಗು ನಟ ನರೇಶ್ ಅವರನ್ನು ರಮ್ಯಾ ರಘುಪತಿ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧ ನಡುವೆಯೂ ವಿವಾಹವಾಗಿದ್ದರು. ಆದರೂ, ನರೇಶ್ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಇದೇ ಸಂದರ್ಶನದಲ್ಲಿ ಮಹಿಳೆಯೊಂದಿಗಿನ ಅಫೇರ್‌ನಿಂದ ಬೇಸತ್ತು ಹೋಗಿದ್ದೇನೆ ಎಂದು ಹೇಳಿದ್ದಾರೆ. " ನನಗೆ ಬೇಜಾರು ಆಗಿತ್ತು. ಸೆಂಚುರಿ ಆಯ್ತಾ ಅಂತ ಕೇಳಿದ್ದೆ. " ಎಂದು ಪತಿಯ ಹೆಣುಬಾಕ ತನವನ್ನು ಬಿಚ್ಚಿಟ್ಟಿದ್ದಾರೆ.

ಪವಿತ್ರ ಲೋಕೇಶ್ ಹಾಗೂ ನರೇಶ್ ಲಿವ್ ಇನ್‌ನಲಿದ್ದಾರೆ

ಪವಿತ್ರ ಲೋಕೇಶ್ ಹಾಗೂ ನರೇಶ್ ಲಿವ್ ಇನ್‌ನಲಿದ್ದಾರೆ

ಇದೇ ವೇಳೆ ರಮ್ಯಾ ರಘುಪತಿ ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ ಪತಿ ನರೇಶ್ ಬಗ್ಗೆನೂ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ. " ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ. ಈಗ ಅವರು ಮದುವೆ ಆಗಲು ಹೊರಟಿದ್ದಾರೆ. ನನಗೆ ಜನವರಿಯಲ್ಲಿ ನೋಟಿಸ್‌ ಕಳುಹಿಸಿದ್ದರು. ಮಗುವನ್ನು ತನ್ನ ಕಸ್ಟಗೆ ಕೇಳಿದ್ದಾರೆ. ನರೇಶ್ ಮದುವೆ ಆದಲ್ಲಿಂದ ನನ್ನನ್ನು ನಾನು ಕಳೆದುಕೊಂಡಿದ್ದೇನೆ. ಸ್ನೇಹಿತರು, ಉದ್ಯಮ, ಪತ್ನಿ ಅನ್ನುವ ಪಟ್ಟ, ಈಗ ಮಗನನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ." ಎಂದು ರಮ್ಯಾ ಆರೋಪ ಮಾಡಿದ್ದಾರೆ.

ಮೂರು ರಾಜ್ಯಗಳಲ್ಲೂ ಮದುವೆ

ಮೂರು ರಾಜ್ಯಗಳಲ್ಲೂ ಮದುವೆ

ಟಾಲಿವುಡ್ ಖ್ಯಾತ ನಟ ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದು, ನಾಲ್ಕನೇ ಮದುವೆ ತಯಾರಿ ನಡೆಸಿದ್ದಾರೆ ಎಂಬುದು ಮೂರನೇ ಪತ್ನಿ ರಮ್ಯಾ ಆರೋಪ. ಅಂದ್ಹಾಗೆ ಮೊದಲ ಪತ್ನಿ ಆಂಧ್ರ ಮೂಲದವರು. ಇವರಿಗೆ ಒಬ್ಬ ಮಗನಿದ್ದಾನೆ. ಎರಡನೇ ಪತ್ನಿಯ ಮೂಲ ತಮಿಳುನಾಡು. ಇವರಿಗೂ ಒಬ್ಬ ಪುತ್ರನಿದ್ದಾನೆ. ಮೂರನೇ ಪತ್ನಿ ರಮ್ಯಾ ರಘುಪತಿ. ಇವರು ಕರ್ನಾಟಕ ಮೂಲದವರು. ಇವರಿಗೂ ಒಬ್ಬ 8 ವರ್ಷ ಒಬ್ಬ ಪುತ್ರನಿದ್ದಾನೆ. ಈಗ ಪವಿತ್ರಾ ಲೋಕೇಶ್ ಅವರನ್ನು ನಾಲ್ಕನೇ ಮದುವೆ ಆಗಲಿದ್ದಾರೆ ಎಂದು ರಮ್ಯಾ ಆರೋಪ ಬಹಿರಂಗ ಆರೋಪ ಮಾಡಿದ್ದಾರೆ.

More from Filmibeat

English summary
Telugu Actor Naresh 3rd Wife Ramya Raghupathi opens about her Husband 4th Marriage with Pavithra Lokesh. Know what she said. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X