ಬಹುಕಾಲದ ಗೆಳತಿ ಜತೆ ನಟ ನಿತಿನ್ ನಿಶ್ಚಿತಾರ್ಥ
ಕೊರೊನಾ ವೈರಸ್ ಕಾರಣದಿಂದ ಮದುವೆ ಮುಂದೂಡುತ್ತಲೇ ಬಂದಿದ್ದ ತೆಲುಗು ಚಿತ್ರರಂಗದ ನಟ ನಿತಿನ್, ಕೊನೆಗೂ ವೈವಾಹಿಕ ಬದುಕಿನತ್ತ ಹೆಜ್ಜೆ ಇರಿಸುತ್ತಿದ್ದಾರೆ. ಬುಧವಾರ ನಡೆದ ಸಮಾರಂಭದಲ್ಲಿ ಅವರು ತಮ್ಮ ಬಹುಕಾಲದ ಗೆಳತಿ ಶಾಲಿನಿ ಕಂಡುಕುರಿ ಜತೆ ನಿಶ್ಚಿತಾರ್ಥ ಮಾಡಿಕೊಂಡರು.
Recommended Video
ಶಾಲಿನಿ ಅವರ ಕೈಗೆ ಉಂಗುರ ತೊಡಿಸುವ ಸಂಭ್ರಮದ ಗಳಿಗೆಯ ಫೋಟೊವನ್ನು ನಿತಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಜುಲೈ 26ರಂದು ನಡೆಯಲಿರುವ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಸುಮಾರು ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂದೆ ಓದಿ...

ಕೆಲವರಿಗೆ ಮಾತ್ರವೇ ಆಹ್ವಾನ
ಈ ಮದುವೆ ಏಪ್ರಿಲ್‌ನಲ್ಲಿಯೇ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕಗಳನ್ನು ಹಲವು ಬಾರಿ ಮುಂದೂಡಲಾಗಿತ್ತು. ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಕೆಲವೇ ಮಂದಿ ಮದುವೆ ಸಮಾರಂಭದಲ್ಲಿ ಭಾಗವಹಿಸಬೇಕಿದೆ. ಕುಟುಂಬದ ಅತಿ ಆಪ್ತರಿಗೆ ಮಾತ್ರವೇ ಆಹ್ವಾನ ಪತ್ರಿಕೆ ನೀಡಲಾಗಿದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ತಮ್ಮ ನೆಚ್ಚಿನ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದ ನಿತಿನ್, ಅವರಿಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ.

ಕುಟುಂಬ ಸಮಾರಂಭದ ಫೋಟೊ
ಫೆಬ್ರವರಿಯಲ್ಲಿ ಪ್ರೇಮಿಗಳ ದಿನಾಚರಣೆಯ ಬಳಿಕ ನಿತಿನ್ ಮನೆಯಲ್ಲಿ ನಡೆದ ಸಮಾರಂಭದ ಫೋಟೊಗಳನ್ನು ಹಂಚಿಕೊಂಡಿದ್ದರು. ಪೆಲ್ಲಿ ಪನುಲು ಶುರುವಾಯ್ತು. ಮ್ಯೂಸಿಕ್ ಶುರುವಾಯ್ತು. ನಿಮ್ಮ ಆಶೀರ್ವಾದ ಬೇಕು ಎಂದು ಕಾರ್ಯಕ್ರಮದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಇದನ್ನು ನಿಶ್ಚಿತಾರ್ಥ ಎಂದೇ ಆಗ ಭಾವಿಸಲಾಗಿತ್ತು.

ದುಬೈನಲ್ಲಿ ಮದುವೆ ನಡೆಯಬೇಕಿತ್ತು
ಏಪ್ರಿಲ್ 16ರಂದು ದುಬೈನಲ್ಲಿ ನಡೆಯಬೇಕಿದ್ದ ಅದ್ದೂರಿ ಸಮಾರಂಭದಲ್ಲಿ ಇಬ್ಬರೂ ಹಸೆಮಣೆ ಏರಲು ಸಿದ್ಧತೆ ನಡೆಸಲಾಗಿತ್ತು. ಮದುವೆ ಸಮಾರಂಭದ ಕಾರ್ಯಗಳು ಮುಗಿದ ಬಳಿಕ ಚಿತ್ರರಂಗದ ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ವಿಶೇಷ ಸಮಾರಂಭ ಏರ್ಪಡಿಸಿ ರಿಸೆಪ್ಷನ್ ಮಾಡಲು ಬಯಸಿದ್ದರು. ಆದರೆ ಅವರ ಉದ್ದೇಶವೆಲ್ಲ ತಲೆಕೆಳಗಾಗಿತ್ತು.

ಲಂಡನ್‌ನಲ್ಲಿ ಎಂಬಿಎ ಪದವಿ
36 ವರ್ಷದ ನಿತಿನ್ ಮತ್ತು ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಶಾಲಿನಿ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಮದುವೆಯ ಹಂತಕ್ಕೆ ಬಂದ ಬಳಿಕ ಮನೆಯಲ್ಲಿ ಮಾತುಕತೆ ನಡೆಸಿ ಬಹಿರಂಗಪಡಿಸಿದ್ದರು.


Click it and Unblock the Notifications











