"ನನ್ನ ಸಾವನ್ನು ನೋಡಲು ಹೆಂಡ್ತಿಯನ್ನು ಸಜ್ಜುಗೊಳಿಸಿದ್ದೇನೆ": ಆತಂಕದ ಹೇಳಿಕೆ ಕೊಟ್ಟ ತೆಲುಗು ಹಾಸ್ಯ ನಟ!
ತೆಲುಗು ಚಿತ್ರರಂಗದ ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ ತನ್ನ ವಿವಾದಾತ್ಮಕ ಹೇಳಿಕೆಗಳಿಗೆ ಫೇಮಸ್. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡೋ ನಟ ಹಲವು ಬಾರಿ ಇದೇ ಕಾರಣಕ್ಕೆ ವಿವಾದಕ್ಕೆ ಸಿಕ್ಕಿಕೊಂಡಿದ್ದೂ ಇದೆ. ಅದರಲ್ಲೂ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಈ ಹೇಳಿಕೆಗಳನ್ನು ಮತ್ತಷ್ಟು ಹೆಚ್ಚಾಗಿವೆ.
ಇತ್ತೀಚೆಗೆ ನಟ ಕಮ್ ರಾಜಕಾರಣಿ ಪೊಸಾನಿ ಕೃಷ್ಣ ಮುರಳಿ ಸಂದರ್ಶನವೊಂದನ್ನು ನೀಡಿದ್ದರು. ಈ ವೇಳೆ ಮಾತಾಡುವಾಗ ತನ್ನ ಅಭಿಮಾನಿಗಳಿಗೆ ಆತಂಕ ಹುಟ್ಟಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಫಯರ್ ಬ್ರ್ಯಾಂಡ್ ಪೊಲಿಟಿಷಿಯನ್ ತನ್ನ ಸಾವಿನ ಬಗ್ಗೆ ಓಪನ್ ಆಗಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ತನ್ನ ಸಾವನ್ನು ಎದುರಿಸಲು ಪತ್ನಿಯನ್ನು ಸಿದ್ಧಗೊಳಿಸಿದ್ದಾಗಿ ಸಂದರ್ಶನದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲ್ಲದೆ ಮೃತ ದೇಹಕ್ಕೆ ಸಿಂಪತಿಯನ್ನು ತೋರಿಸಬೇಕಿಲ್ಲ ಎಂದೂ ಹೇಳಿದ್ದಾರೆ. ಇದು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನನ್ನ ಸಾವಿಗೆ ನನ್ನ ಹೆಂಡತಿಯನ್ನು ಸಿದ್ಧಪಡಿಸಿದ್ದೇನೆ
ತೆಲುಗಿನ ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ ಹೀಗೆ ಉಲ್ಟಾ ಸೀದಾ ಮಾತಾಡೋದು ಹೊಸತೇನಲ್ಲ. ಆದರೆ, ಹೀಗೆ ಸಾವಿನ ಬಗ್ಗೆ ಮಾತಾಡಿದ್ದಿಲ್ಲ. ಆದ್ರೀಗ ಸಂದರ್ಶನದಲ್ಲಿ ಹೆಂಡತಿಯನ್ನು ತನ್ನ ಸಾವನ್ನು ನೋಡಲು ಸಿದ್ಧಪಡಿಸಿದ್ದೇನೆ ಎಂಬ ಹೇಳಿಕೆ ವೈರಲ್ ಆಗಿದೆ. "ನನ್ನ ಸಾವಿಗೆ ನಾನು ಈಗಾಗಲೇ ನನ್ನ ಹೆಂಡತಿಯನ್ನು ಸಿದ್ಧಪಡಿಸಿದ್ದೇನೆ. ಜನರು ಅಳುವುದು ಮತ್ತು ನನ್ನ ಬಗ್ಗೆ ಸಹಾನುಭೂತಿ ತೋರಿಸುವುದು ನನಗೆ ಇಷ್ಟವಿಲ್ಲ. ನನ್ನ ಮೃತದೇಹ ಮುಂದೆ ಅಳಬೇಡ ಎಂದು ಹೇಳಿದ್ದೇನೆ. ಇಷ್ಟೇ ಅಲ್ಲ ನನ್ನ ಮೃತದೇಹವನ್ನು ಚಿತ್ರರಂಗದ ಮಂದಿಗೆ ತೋರಿಸಬೇಡ ಅಂತಲೂ ಹೇಳಿದ್ದೇನೆ" ಎಂದು ಹೇಳಿಕೆ ಕೊಟ್ಟಿದ್ದಾರೆ.

"ಹೆಂಡ್ತಿ ಹೆಸರಲ್ಲಿ 50 ಕೋಟಿ ರೂ. ಇಟ್ಟಿದ್ದೇನೆ"
ಇದೇ ವೇಳೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಕುಟುಂಬ ಪಾಲನೆಗಾಗಿ ಪತ್ನಿಯ ಹೆಸರಲ್ಲಿ 50 ಕೋಟಿ ರೂ. ಎತ್ತಿಟ್ಟಿದ್ದೇನೆ ಎಂದು ಹೇಳಿದ್ದಾರೆ. "ನಾನು ಸತ್ತರೆ, ನನ್ನ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುವುದಿಲ್ಲ. ಕೇವಲ ಬಾಡಿಗೆಯಿಂದಲೇ ಪ್ರತಿ ತಿಂಗಳು 8 ಲಕ್ಷ ರೂ. ಹಣ ಬರುವಂತೆ ಮಾಡಿದ್ದೇನೆ" ಎಂದು ಓಪನ್ ಆಗಿ ಹೇಳಿದ್ದಾರೆ.
ಅಭಿಮಾನಿಗಳಲ್ಲಿ ಆತಂಕ
ಪೊಸಾನಿ ಕೃಷ್ಣ ಮುರಳಿ ಸಂದರ್ಶನ ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ಅಭಿಮಾನಿಗಳನ್ನು ಹೊಂದಿರೋ ಪೊನಾನಿಯ ಹೀಗ್ಯಾಕೆ ಮಾತಾಡಿದ್ರು ಅಂತ ತಲೆಕೆಡಿಸಿಕೊಂಡಿದ್ದಾರೆ. ಸದ್ಯ ಪೊಸಾನಿ ಆಂಧ್ರ ಪ್ರದೇಶ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೋರೇಷನ್ ಚೇರ್‌ಮನ್ ಆಗಿದ್ದಾರೆ. ವೈಎಸ್‌ಆರ್‌ಸಿಪಿಯ ಸರ್ಕಾರದಲ್ಲಿ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ವಿವಾದಗಳಿಂದಲೇ ಫೇಮಸ್
ಪೊಸಾನಿ ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದರು. ಇತ್ತೀಚೆಗೆ ರಜನಿಕಾಂತ್ ಸೀನಿಯರ್ ಎನ್‌ಟಿಆರ್ ಅವರ 100ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಹೊಗಳಿದ್ದಕ್ಕೆ ಪೊಸಾನಿ ಕಿಡಿಕಾರಿದ್ದರು." ರಜನಿಕಾಂತ್ ನಮ್ಮ ಸೂಪರ್ ಸ್ಟಾರ್ ಅಲ್ವೇ ಅಲ್ಲ. ಮೆಗಾಸ್ಟಾರ್ ಚಿರಂಜೀವಿ ನಮಗೆ ಸೂಪರ್ ಸ್ಟಾರ್" ಎಂದು ಪೊಸಾನಿ ಕೃಷ್ಣ ಮುರಳಿ ಹೇಳಿ ವಿವಾದ ಸೃಷ್ಟಿಸಿದ್ದರು.


Click it and Unblock the Notifications











