ಎಸ್‌ಪಿ ಬಾಲ ಸುಬ್ರಹ್ಮಣ್ಯಂ ಸಾವಿಗೆ ನಾನೂ ಒಬ್ಬ ಕಾರಣ; ಹಿರಿಯ ನಟನ ಶಾಕಿಂಗ್ ಕಾಮೆಂಟ್‌

ಭಾರತದ ಸಂಗೀತ ಲೋಕದ ಅಪ್ರತಿಮ ಗಾಯಕ, ಲೆಜೆಂಡರಿ ಸಿಂಗರ್ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಕನ್ನಡ ಸಿನಿ ರಸಿಕರಿಗೆ ಎಸ್‌ಪಿಬಿ ಅಂತಲೇ ಜನಪ್ರಿಯರಾಗಿದ್ದ ಈ ಗಾಯಕನ ಹಾಡುಗಳನ್ನು ಇಂದಿಗೂ ಮೆಲುಕು ಹಾಕುತ್ತಾರೆ. ಹೀರೊ ಯಾರೇ ಇರಲಿ. ಎಸ್‌ಪಿಬಿ ಧ್ವನಿ ಇದೆ ಅಂದರೆ, ಆ ಹಾಡು ಹಿಟ್ ಲಿಸ್ಟ್ ಸೇರಿದಂತೆಯೇ.. ಆ ಮಟ್ಟಿಗೆ ಕನ್ನಡಿಗರಿಗೆ ಇಷ್ಟವಾಗಿದ್ದ ಗಾಯಕ.

ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಹಾಡಿರೋ ಎಸ್‌ಪಿಬಿ, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಅದರಲ್ಲೂ ಹಂಸಲೇಖ, ರವಿಚಂದ್ರನ್ ಕಾಂಬಿನೇಷನ್ ಸಿನಿಮಾಗೆ ಹಾಡಿರುವ ಹಾಡುಗಳು ಸಂಗೀತ ಪ್ರಿಯರನ್ನು ಇಂದಿಗೂ ರಂಜಿಸುತ್ತಲೇ ಇದೆ. ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್‌ಪಿಬಿ 2020, ಸೆಪ್ಟೆಂಬರ್ 25ರಂದು ಇಹಲೋಕ ತ್ಯಜಿಸಿದ್ದರು.

Actor Subhalekha Sudhakar said he is the reason for sp balasubrahmanyam death

ಎಸ್‌ಪಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾದಿಂದ ಚೇತರಿಸಿಕೊಳ್ಳಲೇ ಇಲ್ಲ. ಹೀಗಾಗಿ ಲೆಜೆಂಡರಿ ಸಿಂಗರ್ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೊನೆಯುಸಿರೆಳೆದಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಪಿಬಿ ಸಾವಿಗೆ ಕಾರಣವೇನು ಅನ್ನೋದು ರಹಸ್ಯವಾಗೇನು ಉಳಿದಿರಲಿಲ್ಲ. ಆದ್ರೀಗ ತೆಲುಗಿನ ಹಿರಿಯ ನಟ ಶುಭಾಲೇಖಾ ಸುಧಾಕರ್ ಲೆಜೆಂಡರಿ ಸಿಂಗರ್ ಎಸ್‌ಪಿಬಿ ಸಾವಿಗೆ ನಾನೂ ಒಬ್ಬ ಕಾರಣವೆಂದು ಹೇಳಿದ್ದಾರೆ.

ಶುಭಾಲೇಖಾ ಸುಧಾಕರ್ ಕೊಟ್ಟ ಈ ಶಾಕಿಂಗ್ ಹೇಳಿಕೆ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಅಂದ್ಹಾಗೆ ಎಸ್‌ಪಿಬಿ ಸಹೋದರಿಯನ್ನೇ ಟಾಲಿವುಡ್‌ನ ಹಿರಿಯ ನಟ ಶುಭಾಲೇಖಾ ಸುಧಾಕರ್ ವಿವಾಹವಾಗಿದ್ದಾರೆ. ಅಷ್ಟಕ್ಕೂ ನಾಲ್ಕು ವರ್ಷಗಳ ಬಳಿಕ ಎಸ್‌ಪಿಬಿ ಸಾವಿಗೆ ನಾನೂ ಒಬ್ಬ ಕಾರಣ ಅಂತ ಯಾಕೆ ಹೇಳಿದ್ರು? ಅಂತಹದ್ದೇನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೊರೊನಾ ಸಮಯದಲ್ಲಿ ಶುಭಾಲೇಖಾ ಸುಧಾಕರ್ ತೆಲುಗು ಸಿನಿಮಾವೊಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆ ವೇಳೆ ಮೊದಲ ಅಲೆ ತಗ್ಗಿ ಎರಡನೇ ಅಲೆ ಆರಂಭ ಆಗುವ ಸಮಯ. ಈ ವೇಳೆ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಸಿನಿಮಾ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಈ ಸಮಯದಲ್ಲಿ ಶುಭಾಲೇಖಾ ಸುಧಾಕರ್ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದೇ ವೇಳೆ ಎಸ್‌ಪಿಬಿ ಇವರಿಗೆ ಫೋನ್ ಮಾಡಿದ್ದರು.

Actor Subhalekha Sudhakar said he is the reason for sp balasubrahmanyam death

ಇಂತಹ ಸಮಯದಲ್ಲಿ ಶೂಟಿಂಗ್‌ಗೆ ಹೋಗುತ್ತಿರೋದು ಯಾಕೆ? ಅಂತೆಲ್ಲ ಪ್ರಶ್ನೆ ಮಾಡಿದ್ದರು. ಆ ವೇಳೆ ಶುಭಾಲೇಖಾ ಸುಧಾಕರ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದರು. ಆ ವೇಳೆ ಎಸ್‌ಪಿಬಿ ಒಂದು ದಿನ ಶೂಟಿಂಗ್ ಸ್ಪಾಟ್‌ಗೆ ಹೋಗಿದ್ದರು. ಅಲ್ಲಿ ಶುಭಾಲೇಖಾ ಸುಧಾಕರ್ ಜೊತೆ ಕೆಲ ಹೊತ್ತು ಕೂತು ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದರು.

ಅದೇ ವೇಳೆ ಕೆಲವರು ಎಸ್‌ಪಿಬಿ ಜೊತೆ ಫೋಟೊ ತೆಗೆಸಿಕೊಳ್ಳುವುದಕ್ಕೆ ಮುಂದಾಗಿದ್ದರು. ಒಂದು ಫೋಟೊದಿಂದ ಶುರುವಾಗಿದ್ದು, ಸುಮಾರು 96 ಫೋಟೊಗಳವರೆಗೂ ಬಂದು ನಿಂತಿತ್ತು. ಇಲ್ಲಿಗೆ ಬಂದು ಮೂರು ದಿನಗಳಾದ ಬಳಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಕೊರೊನಾ ಸೋಂಕು ತಗುಲಿತ್ತು. ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾದಿಂದ ಚೇತರಿಸಿಕೊಳ್ಳಲೇ ಇಲ್ಲ. ಈ ಘಟನೆಯನ್ನು ನೆನೆದು ಶುಭಾಲೇಖಾ ಸುಧಾಕರ್ ಸಂದರ್ಶನವೊಂದರಲ್ಲಿ ಭಾವುಕರಾಗಿದ್ದಾರೆ.

More from Filmibeat

English summary
Actor Subhalekha Sudhakar said about SP Balasubrahmanyam:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X