ಆ ನಟಿ ನನ್ನಿಂದಾಗಿ ಮೂರು ಬಾರಿ ಗರ್ಭಿಣಿಯಾಗಿದ್ದಳು ಎಂದ ನಟ

ತೆಲುಗಿನ ಮನಂ, ಅರ್ಜುನ್ ಸುರವರಂ, ಮಿಸ್ಟರ್, ಯುದ್ಧಮ್ ಸರಣಮ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಲಾವಣ್ಯ ತ್ರಿಪಾಠಿ, ಸ್ವಯಂ ಘೋಷಿತ ನಟನೊಬ್ಬನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್‌ನ ಸೈಬರ್ ಕ್ರೈಂ ಘಟಕಕ್ಕೆ ಇ-ಮೇಲ್ ಮೂಲಕ ಅವರು ದೂರು ರವಾನಿಸಿದ್ದಾರೆ.

Recommended Video

ಮದುವೆ ಮೂಡ್ ನಲ್ಲಿದ್ದರೂ ನಿಖಿಲ್ ಬ್ಯುಸಿ | Nikhil weds Revathi | Kumarswamy | AP Arjun

ಸುನಿಸಿತ್ ಎಂಬ ನಟ ತಮ್ಮ ವಿರುದ್ಧ ನೀಡಿರುವ ಆಘಾತಕಾರಿ ಹೇಳಿಕೆಗಳಿಂದ ನೊಂದಿರುವ ಲಾವಣ್ಯ ತ್ರಿಪಾಠಿ, ಆತನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ತೆಲುಗು ಮಾಧ್ಯಮದ ವರದಿ ಪ್ರಕಾರ, ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನವೊಂದರಲ್ಲಿ ಸುನಿಸಿತ್, ಲಾವಣ್ಯ ತ್ರಿಪಾಠಿ, ತಮನ್ನಾ ಭಾಟಿಯಾ ಸೇರಿದಂತೆ ಅನೇಕ ನಟಿಯರ ಜತೆಗೆ ತಮಗೆ ಅಫೇರ್ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ.

ಮೂರು ಬಾರಿ ಗರ್ಭಿಣಿಯಾಗಿದ್ದರು

ಮೂರು ಬಾರಿ ಗರ್ಭಿಣಿಯಾಗಿದ್ದರು

ತಮ್ಮ ಜತೆಗೆ ಸಂಬಂಧ ಇಟ್ಟುಕೊಂಡಿದ್ದ ವೇಳೆ ಲಾವಣ್ಯ ತ್ರಿಪಾಠಿ ಮೂರು ಬಾರಿ ಗರ್ಭಿಣಿಯಾಗಿದ್ದರು ಎಂದು ಸುನಿಸಿತ್ ಹೇಳಿದ್ದಾರೆ. ವಿವಾದಗಳಿಂದಲೇ ಸುದ್ದಿಯಲ್ಲಿರುವ ಸುನಿಸಿತ್, ನೀಡಿರುವ ಹೇಳಿಕೆಗೆ ಲಾವಣ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಲಾವಣ್ಯ ತನ್ನೊಂದಿಗೆ ಮದುವೆ ಕೂಡ ಆಗಿದ್ದರು. ಬಳಿಕ ಅದು ಮುರಿದು ಹೋಯಿತು. ಮೂರು ಬಾರಿ ಗರ್ಭಿಣಿಯಾಗಿದ್ದ ಲಾವಣ್ಯ, ಮೂರೂ ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಸುನಿಸಿತ್‌ಗಾಗಿ ಹುಡುಕಾಟ

ಸುನಿಸಿತ್‌ಗಾಗಿ ಹುಡುಕಾಟ

ಈ ಆಘಾತಕಾರಿ ಮತ್ತು ನಿಂದನೆಯ ಹೇಳಿಕೆಗಳ ಬಗ್ಗೆ ತಿಳಿದ ಲಾವಣ್ಯ, ಹೈದರಾಬಾದ್ ಸೈಬರ್ ಅಪರಾಧ ಘಟಕದ ಪೊಲೀಸರಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ. ಶ್ರೀ ರಾಮೋಜ್ ಸುನಿಸಿತ್ ಎಂಬ ಹೆಸರಿನ ವ್ಯಕ್ತಿ ತನ್ನನ್ನು ಮದುವೆಯಾಗಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈಗ ಪೊಲೀಸರು ಸುನಿಸಿತ್‌ಗೆ ಹುಟುಕಾಟ ಆರಂಭಿಸಿದ್ದಾರೆ.

ಆಫರ್ ಕಿತ್ತುಕೊಂಡು ಬೆಳೆದರು

ಆಫರ್ ಕಿತ್ತುಕೊಂಡು ಬೆಳೆದರು

ಸಂದರ್ಶನದಲ್ಲಿ ಸುನಿಸಿತ್, ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಮಹೇಶ್ ಬಾಬು ಅವರಂತಹ ಟಾಲಿವುಡ್‌ನ ದೊಡ್ಡ ಸ್ಟಾರ್‌ ನಟರ ವೃತ್ತಿ ಜೀವನವನ್ನು ರೂಪಿಸಿದ್ದೇ ತಾನು ಎಂದು ಹೇಳಿಕೊಂಡಿದ್ದಾರೆ. ಕೆಲವು ಜನರು ತಮಗೆ ಮೋಸ ಮಾಡಿದರು, ತಮಗಿದ್ದ ಆಫರ್‌ಗಳನ್ನು ಕಿತ್ತುಕೊಂಡು ಸ್ಟಾರ್‌ಗಳಾಗಿ ಬೆಳೆದರು ಎಂದು ಆರೋಪಿಸಿದ್ದಾರೆ.

ಸಿನಿಮಾ ನೀಡುವಂತೆ ಮಹೇಶ್ ಬಾಬು ಮನವಿ

ಸಿನಿಮಾ ನೀಡುವಂತೆ ಮಹೇಶ್ ಬಾಬು ಮನವಿ

ಇಷ್ಟೇ ಅಲ್ಲದೆ, ಸುನಿಸಿತ್, ನಿರ್ದೇಶಕ ಸುಕುಮಾರ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ವಾಸ್ತವವಾಗಿ 1-ನೆನೊಕ್ಕಡಿನೆ ಚಿತ್ರದಲ್ಲಿ ಸುನಿಸಿತ್ ನಟಿಸಬೇಕಿತ್ತಂತೆ. ಆದರೆ ಸುಕುಮಾರ್ ತಮ್ಮ ಜಾಗಕ್ಕೆ ಮಹೇಶ್ ಬಾಬು ಅವರಿಗೆ ಅವಕಾಶ ನೀಡಿದರು. ಮಹೇಶ್ ಬಾಬು ಕೂಡ ಆ ಸಿನಿಮಾವನ್ನು ತಮಗೆ ಬಿಟ್ಟುಕೊಡುವಂತೆ ಕೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

ತಮನ್ನಾ ಏನು ಮಾಡ್ತಾರೆ?

ತಮನ್ನಾ ಏನು ಮಾಡ್ತಾರೆ?

ಸುನಿಸಿತ್ ನೀಡಿರುವ ಹೇಳಿಕೆಗಳು ಟಾಲಿವುಡ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ನಟಿಯರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಲಾವಣ್ಯ ತ್ರಿಪಾಠಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮನ್ನಾ ಭಾಟಿಯಾ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
Tollywood actress Lavanya Tripathi has filed a complaint against Sunisith who claimed she got pregnant thrice as he had an affair with her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X