ಟಾಲಿವುಡ್‌ ಲೆಜೆಂಡ್ ಬಾಲಕೃಷ್ಣಗೆ ಕೊರೊನಾ: ಗೃಹಬಂಧದಲ್ಲಿ ಬಾಲಯ್ಯ!

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಮೂರನೇ ದಿನ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಇದೇ ರೀತಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದ್ದರೆ ಆತಂಕ ಎದುರಾಗುವ ಸಾಧ್ಯತೆಯಿದೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಿದ್ದರಿಂದ ಸಿನಿಮಾ ಮಂದಿಯಲ್ಲೂ ಆತಂಕ ಹೆಚ್ಚಾಗಿದೆ. ಇದೇ ವೇಳೆ ಟಾಲಿವುಡ್ ಲೆಜೆಂಟ್ ಬಾಲಕೃಷ್ಣಗೆ ಕೊರೊನಾ ಸೋಂಕು ತಗುಲಿದ್ದು, ತೆಲುಗಿ ಮಂದಿಯಲ್ಲಿ ಆತಂಕ ಹೆಚ್ಚಾಗಿದೆ.

ಬಾಲಕೃಷ್ಣಗೆ ಕೊರೊನಾ

ಬಾಲಕೃಷ್ಣಗೆ ಕೊರೊನಾ

ಟಾಲಿವುಡ್‌ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಕೃಷ್ಣಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲವು ದಿನಗಳಿಂದ ಬಾಲಯ್ಯ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಬಾಲಯ್ಯ ಕೊರೊನಾ ಟೆಸ್ಟ್‌ಗೆ ಒಳಗಾಗಿದ್ದರು. ಈ ಕೊರೊನಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಈ ಕಾರಣಕ್ಕೆ ನಂದಮೂರಿ ಬಾಲಕೃಷ್ಣ ಗೃಹಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದು ಬಾಲಕೃಷ್ಣ ಅಭಿಮಾನಿಗಳಿಗೆ ಆತಂಕ ತಂದಿದೆ.

ನಂದಮೂರಿ ಬಾಲಕೃಷ್ಣ ಮನವಿ

ನಂದಮೂರಿ ಬಾಲಕೃಷ್ಣ ಮನವಿ

ನಂದಮೂರಿ ಬಾಲಕೃಷ್ಣ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಿದ್ದರಿಂದ ಇಷ್ಟು ದಿನ ಅವರ ಸಂಪರ್ಕಕ್ಕೆ ಬಂದಿದ್ದರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಬಾಲಕೃಷ್ಣ ಸಂಪರ್ಕಕ್ಕೆ ಬಂದವರಿಗೆ ಕೋವಿಡ್ ಟೆಸ್ಟ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆಯೂ ಹೇಳಿದ್ದಾರೆ. ಬಾಲಕೃಷ್ಣ ಸಿನಿಮಾ ನಟನಷ್ಟೇ ಅಲ್ಲದೆ ಹಿಂದೂಪುರ ಎಂಎಲ್‌ಎ ಕೂಡ ಆಗಿರುವುದರಿಂದ ಕ್ಷೇತ್ರದ ಜನರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.

107ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ

107ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ

ಬಾಲಕೃಷ್ಣ ಸದ್ಯ ತಮ್ಮ 107ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣಗೆ ಕೊರೊನಾ ಬಂದಿದ್ದರಿಂದ ಸಿನಿಮಾದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

'ಅಖಂಡ' ಯಶಸ್ಸಿನ ಅಲೆಯಲ್ಲಿ ಬಾಲಕೃಷ್ಣ

'ಅಖಂಡ' ಯಶಸ್ಸಿನ ಅಲೆಯಲ್ಲಿ ಬಾಲಕೃಷ್ಣ

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಾಲಕೃಷ್ಣಗೆ 'ಅಖಂಡ' ಸಿನಿಮಾ ಸೂಪರ್‌ ಸಕ್ಸಸ್ ತಂದುಕೊಟ್ಟಿತ್ತು. ಇಲ್ಲಿಂದ ಟಾಲಿವುಡ್‌ನಲ್ಲಿ ಬಾಲಯ್ಯ ರೇಂಜ್ ಬದಲಾಗಿದೆ. ಲೆಜೆಂಡ್ ಬಾಲಕೃಷ್ಣಗೆ ಬೇಡಿಕೆ ಹೆಚ್ಚಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕು ತಗುಲಿದ್ದರಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಬೇಕ್ ಹಾಕಿದ್ದಾರೆ.

More from Filmibeat

English summary
Actor Turned Politician Nandamuri Balakrishna Tested Covid Positive, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X