ತನ್ನ ರಕ್ತ ಮಾರಿ ನಟಿ ಅನಸೂಯಾಗೆ ಉಡುಗೊರೆ ಖರೀದಿಸಿದ್ದ ತಂದೆ: ಅಪ್ಪನ ನೆನೆದು ಕಣ್ಣೀರು

ಟಾಲಿವುಡ್‌ನ ಸ್ಟಾರ್ ನಿರೂಪಕಿ, ನಟಿ ಅನಸೂಯಾ ಭಾರದ್ವಾಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಳೆದೊಂದು ವಾರದಿಂದ ನಾನಾ ಕಾರಣಕ್ಕೆ ಈಕೆಯ ಹೆಸರು ಮಾಧ್ಯಮಗಳಲ್ಲಿ ಹರಿದಾಡುತ್ತಿಲೇ ಇದೆ. ಒಮ್ಮೆ ಗ್ಲಾಮರಸ್ ಫೋಟೊಗಳಿಗೆ, ಮತ್ತೊಮ್ಮೆ ಬಿಕಿನಿ ತೊಟ್ಟಿದ್ದಕ್ಕೆ ಹೀಗೆ ಸುದ್ದಿಯಾಗುತ್ತಲೇ ಇದ್ದಾರೆ.

ಅನಸೂಯಾ ಭಾರದ್ವಾಜ್ ನಟಿಸಿರೋ ಹೊಚ್ಚ ಹೊಸ ಸಿನಿಮಾ 'ವಿಮಾನಂ' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಹೆಚ್ಚೆಚ್ಚು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ಭಾವನಾತ್ಮಕ ಸನ್ನಿವೇಶವೊಂದು ಎದುರಾಗಿದೆ. ನಟಿ ಅನಸೂಯಾ ಉಡುಗೊರೆ ಕೇಳಿದ್ದಕ್ಕೆ ತನ್ನ ರಕ್ತವನ್ನೇ ಮಾಡಿ ತಂದಿದ್ದ ಘಟನೆ ರಿವಿಲ್ ಆಗಿದೆ.

Actress Anasuya Bharadwaj father sold his blood to purchase gift for her

ತಂದೆ-ಮಗನ ಭಾವನಾತ್ಮಕ ಕಥೆ

ಬಹುತೇಕ ಸಿನಿಮಾಗಳಲ್ಲಿ ತಾಯಿ,ಮಗನ ಕಥೆಯನ್ನೇ ಹೇಳಲಾಗುತ್ತೆ. ಆದರೆ, 'ವಿಮಾನಂ' ಸಿನಿಮಾದಲ್ಲಿ ತಂದೆ ಹಾಗೂ ಮಗನ ಭಾವನಾತ್ಮಕ ಕಥೆಯನ್ನು ಹೇಳಲಾಗಿದೆ. ಇದರಲ್ಲಿ ಇವರಿಬ್ಬರ ನಡುವೆ ಸಾಕಷ್ಟು ಎಮೋಷನಲ್ ಸನ್ನಿವೇಶಗಳಿವೆ.

ತಮಿಳಿನ ಜನಪ್ರಿಯ ನಟ ಸಮುದ್ರಖನಿ 'ವಿಮಾನಂ' ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿಸ ನಟಿಸಿದ್ದಾರೆ. ಹಾಗೇ ಮಾಸ್ಟರ್ ಧ್ರುವನ್ ಮಗನಾಗಿ ನಟಿಸಿದ್ದಾರೆ. ಮಗನ ಕನಸಿಗಾಗಿ ವಿಶೇಷ ಚೇತನ ತಂದೆ ಪಡುವ ಪಾಡೇ ಈ ಸಿನಿಮಾದ ಪ್ರಮುಖ ಕಥಾವಸ್ತು. ಈ ಸಿನಿಮಾದ ಪ್ರಚಾರ ವೇಳೆ ನಿರ್ದೇಶಕರು ಅನಸೂಯಾ ತಂದೆಯ ಸಂಗತಿಯನ್ನು ವಿವರಿಸಿದ್ದಾರೆ.

ಮಗಳಿಗೆ ಗಿಫ್ಟ್ ಖರೀದಿಸಲು ರಕ್ತ ಮಾರಿದ್ದ ತಂದೆ

ತಂದೆ, ಮಗನ ಬಾಂಧವ್ಯದ ಬಗ್ಗೆ ನಿರ್ದೇಶಕ ಶಿವಪ್ರಸಾದ್ ಭಾವುಕರಾಗಿ ಮಾತಾಡುತ್ತಿದ್ದರು. ಈ ವೇಳೆ, ಅನಸೂಯಾ ತಂದೆಯ ಮಗಳಿಗೆ ಉಡುಗೊರೆ ಕೊಡಲು ರಕ್ತ ಮಾರಿದ ಬಗ್ಗೆ ಹೇಳುತ್ತಿದ್ದಂತೆ ಭಾವುಕರಾಗಿದ್ದರು.

Actress Anasuya Bharadwaj father sold his blood to purchase gift for her

"ಅಂದು ಅನಸೂಯಾ ಹುಟ್ಟುಹಬ್ಬ. ಆ ದಿನ ತನ್ನ ತಂದೆ ಉಡುಗೊರೆಯನ್ನು ಕೇಳಿದ್ದರು. ಅಂದು ಅವರ ತಂದೆ ತನ್ನ ರಕ್ತವನ್ನು ಮಾರು ಉಡುಗೊರೆಯನ್ನು ತಂದಿದ್ದರು. ಆ ವಿಷಯ ಕೇಳಿ ನಾನು ಬೆಚ್ಚಿಬಿದ್ದಿದ್ದೆ." ಎಂದು ಆ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಈ ವೇಳೆ ಅನಸೂಯಾ ಭಾವುಕರಾದರು.

'ವಿಮಾನಂ' ಟ್ರೈಲರ್‌ಗೆ ಮೆಚ್ಚುಗೆ

"ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗಾಗಿ ಏನನ್ನಾದರೂ ತ್ಯಾಗ ಮಾಡುತ್ತಲೇ ಇರುತ್ತಾನೆ. ತಂದೆಯ ಪ್ರೀತಿ, ತ್ಯಾಗದಿಂದ ಬರುತ್ತದೆ. ನನ್ನ ತಂದೆ ನನ್ನ ಜೀವನದಲ್ಲಿ ಹೀರೊ" ಎಂದು ನಿರ್ದೇಶಕ ಶಿವಪ್ರಸಾದ್ ರಿವೀಲ್ ಮಾಡಿದ್ದಾರೆ. 'ವಿಮಾನಂ' ಸಿನಿಮಾ ಕೂಡ ಇದನ್ನೇ ಹೇಳುತ್ತದೆ.

'ವಿಮಾನಂ' ಸಿನಿಮಾದ ಟ್ರೈಲರ್ ವೈರಲ್ ಆಗಿದೆ. ಈ ಟ್ರೈಲರ್‌ನಲ್ಲಿ ಮಗನನ್ನು ಹೇಗಾದರೂ ಮಾಡಿ ವಿಮಾನ ಹತ್ತಿಸಲು, ತಂದೆ ತನ್ನ ಸೈಕಲ್ ಅನ್ನೆ 10 ಸಾವಿರಕ್ಕೆ ಮಾರುವ ದೃಶ್ಯವಿದೆ. ಅನಸೂಯಾ ತಂದೆ ಬಗ್ಗೆ ಆಡಿದ ಮಾತಿನ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Vimanam interview: Actress Anasuya Bharadwaj father sold his blood to purchase gift for her, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X