ಹೋಮ ಮಾಡುವಾಗ ಅಗ್ನಿಯಲ್ಲಿ ಹನುಮಂತನ ದರ್ಶನ? ಫೋಟೋ ನೋಡಿ ಅನಸೂಯಾ ಭಾರದ್ವಾಜ್ ಭಾವುಕ

ತೆಲುಗು ನಟಿ ಅನಸೂಯಾ ಭಾರದ್ವಾಜ್ ಯಾರಿಗೆ ಗೊತ್ತಿಲ್ಲ. ನಿರೂಪಣೆಯಿಂದ ತೆಲುಗು ಮಂದಿಯ ಮನಗೆದ್ದಿದ್ದ ನಟಿಯೀಗ ಸಿನಿಮಾದಿಂದಲೂ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ಪುಷ್ಪ 2'ನಲ್ಲೂ ಪ್ರಮುಖ ಪಾತ್ರದಲ್ಲಿ ಅನಸೂಯಾ ಭಾರದ್ವಾಜ್ ನಟಿಸಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಇತ್ತೀಚೆಗೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು.

ಆಂಜನೇಯ ಸ್ವಾಮಿಯ ಭಕ್ತೆಯಾಗಿರುವ ಅನಸೂಯಾ ಭಾರದ್ವಾಜ್ ತಮ್ಮ ಹೊಸ ಮನೆಗೆ 'ಶ್ರೀರಾಮ ಸಂಜೀವಿನಿ' ಎಂದು ಹೆಸರು ಇಟ್ಟಿದ್ದಾರೆ. ತಮ್ಮ ಕನಸಿನ ಮನೆಗೆ ಪ್ರವೇಶ ಮಾಡುವುದಕ್ಕಿಂತ ಮುನ್ನ ಪತಿ, ಪುತ್ರ ಹಾಗೂ ಕುಟುಂಬಸ್ಥರ ಜೊತೆ ಹೋಮ ಹವನಗಳನ್ನು ಮಾಡಿದ್ದರು. ಈ ವೇಳೆ ಅನಸೂಯಾ ಭಾರದ್ವಾಜ್ ಅವರಿಗೆ ವಿಶಿಷ್ಠ ಅನುಭವಗಳು ಆಗಿವೆ.

Actress Anasuya Bharadwaj witnessed Lord Hanuman s image while doing homam for her house warming ceremony

ಅನಸೂಯಾ ಭಾರದ್ವಾಜ್ ಹೊಸ ಮನೆಯ ಗೃಹ ಪ್ರವೇಶದ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ಕೃಪೆ, ನಮ್ಮ ಹೆತ್ತವರ ಆಶೀರ್ವಾದ ಮತ್ತು ನಿಮ್ಮ ಪ್ರೀತಿಯಿಂದ ನಮ್ಮ ಬದುಕಿನ ಮತ್ತೊಂದು ಅಧ್ಯಾಯ ಆರಂಭ ಆಗಿದೆ. ನಮ್ಮ ಮನೆಗೆ ಶ್ರೀರಾಮ ಸಂಜೀವಿನಿ ಎಂದು ಹೆಸರು ಇಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಹೋಮ ಮಾಡಿಸುವಾಗ ನನ್ನ ದೇವರು ಆಂಜನೇಯ ಕಾಣಿಸಿಕೊಂಡಿದ್ದಾನೆಂದು ಭಾವುಕರಾಗಿದ್ದಾರೆ. ಅಸಲಿಗೆ ಹೊಸ ಮನೆಯ ಗೃಹ ಪ್ರವೇಶದ ವೇಳೆ ಏನು ನಡೀತು?

ತೆಲುಗಿನ ಜನಪ್ರಿಯ ನಟಿ ಹಾಗೂ ನಿರೂಪಕಿ ಅನಸೂಯಾ ಭಾರದ್ವಾಜ್ ಇದೇ ಮೇ 3ರಂದು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು. ಈ ಮನೆಯಲ್ಲಿ ಹೋಮ, ಪೂಜೆ, ಸತ್ಯನಾರಾಯಣ ವ್ರತದ ಜೊತೆಗೆ ರುದ್ರಾಭಿಷೇಕವನ್ನು ಮಾಡಿಸಿದ್ದರು. ಈ ವೇಳೆ ಹೋಮ ಮಾಡುವಾಗ ಅವರು ಆರಾಧಿಸುವ ಆಂಜನೇಯ ಅಗ್ನಿಯ ರೂಪದಲ್ಲಿ ತಮ್ಮ ಹೊಸ ಮನೆಗೆ ಬಂದು ಆಶೀರ್ವಾದ ಮಾಡಿ ಹೋಗಿದ್ದಾರೆಂದು ಭಾವುಕರಾಗಿದ್ದರು.

ಹೋಮ ಮಾಡುವ ವೇಳೆ ಪೋಟೋಗಳನ್ನು ಕ್ಲಿಕ್ಕಿಸಲಾಗಿತ್ತು. ಈ ಸಂದರ್ಭದಲ್ಲಿ ಆಂಜನೇಯನ ಆಕಾರವನ್ನು ಹೋಲುವ ರೀತಿಯ ಆ ಫೋಟೋದಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಹೋಮ ನೆರವೇರಿಸಲು ಬಂದಿದ್ದ ಗುರುಗಳು ಅನಸೂಯಾ ಅವರಿಗೆ ತೋರಿಸಿದ್ದಾರೆ. ಈ ಫೋಟೋವನ್ನು ನೋಡಿ ಅನಸೂಯಾ ಭಾರದ್ವಾಜ್ ಖುಷಿಯಿಂದ ಭಾವುಕರಾಗಿದ್ದಾರೆ. ತಾನು ಮನಸಾರೆ ಆರಾಧಿಸುವ ಆಂಜನೇಯನೇ ಮನೆಗೆ ಬಂದಿದ್ದಾನೆಂದು ಖುಷಿ ಪಟ್ಟಿದ್ದಾರೆ.

ಇದೇ ವೇಳೆ ಭಾವುಕರಾಗಿದ್ದ ಅನಸೂಯಾ ಭಾರದ್ವಾಜ್ ಆಂಜನೇಯನ ಎಷ್ಟು ಆರಾಧಿಸುತ್ತಾರೆಂದು ಹೇಳಿಕೊಂಡಿದ್ದಾರೆ. ತನ್ನ ತಂದೆಯನ್ನು ಬಿಟ್ಟರೆ, ಆಂಜನೇಯನನ್ನೇ ತನ್ನ ಆತ್ಮೀಯ ಸ್ನೇಹಿತನೆಂದು ಮನಸಾರೆ ಒಪ್ಪಿಕೊಂಡಿದ್ದೇನೆ. ಇದು ತನ್ನನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ತಿಳಿದಿದೆ. ಈ ಕಾರಣಕ್ಕೆ ತಮ್ಮ ಹಿರಿಯ ಮಗನಿಗೆ 'ಶೌರ್ಯ' ಎಂದು ಹೆಸರು ಇಟ್ಟಿರುವುದಾಗಿ ಹೇಳಿಕೊಂಡಿದ್ದರು.

ಇನ್ನು ಆದ್ಯಾತ್ಮದಲ್ಲಿ ಅಗ್ನಿದೇವನನ್ನು ತ್ರಿಮೂರ್ತಿಗಳ ಸಂದೇಶ ನೀಡುವವನೆಂದು ಪರಿಗಣಿಸಲಾಗುತ್ತೆ. ಅದಕ್ಕೆ ಹೋಮ ಮಾಡುವ ವೇಳೆ ಸಂಬಂಧ ಪಟ್ಟ ದೇವರಿಗೆ ಸಂದೇಶವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಅದನ್ನೇ ಮಂತ್ರಗಳು, ಹೋಮ ಈ ಪ್ರಕಾರವಾಗಿ ಹೇಳಲಾಗುತ್ತೆ ಎಂದೂ ಅನಸೂಯ ಹೇಳಿದ್ದಾರೆ. ಇದೇ ಎಲ್ಲರೂ ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವುದಿಲ್ಲ. ಆದರೂ, ತಾನು ದೇವರ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಈ ಪೋಸ್ಟ್ ಮಾಡುತ್ತಿದ್ದೇನೆ. ಜೈ ಹನುಮಾನ್ ಎಂದು ಯೋಚಿಸದೆ ತಾನು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಈ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಹೊಸ ಮನೆಗೆ ಪ್ರವೇಶ ಮಾಡಿದ ವೇಳೆ ತಮ್ಮ ಕುಟುಂಬದೊಂದಿಗೆ, ಮಕ್ಕಳೊಂದಿಗೆ ಆತ್ಮೀಯವಾಗಿ ಕಾಲ ಕಳೆದಿದ್ದಾರೆ. ಅವರ ಅಭಿಮಾನಿಗಳು ಕೂಡ ನಟಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

More from Filmibeat

English summary
Actress Anasuya Bharadwaj witnessed Lord Hanuman's image while doing homam for her house warming ceremony.
Read more about: hanuman actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X