"ಹುಡುಗಿಯರು ತಮಗೆ ಮುತ್ತು ನೀಡಬೇಕೇ? ಇಲ್ಲ ಅಪ್ಪಿಕೊಳ್ಳಬೇಕೆ?" ಬಾಲಕೃಷ್ಣ ವಿರುದ್ಧ ಸಿಡಿದೆದ್ದ ರೋಜಾ
ಜಗನ್ ಪಕ್ಷಕ್ಕೂ ಚಂದ್ರಬಾಬು ನಾಯ್ಡು ಪಕ್ಷಕ್ಕೂ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಎರಡೂ ಪಕ್ಷಗಳ ಮುಖಂಡರು ಪರಸ್ಪರ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಒಬ್ಬರ ಮೇಲೊಬ್ಬರು ಪರಿಸ್ಪರ ಕೆಸರು ಎರಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ನಟಿ ಹಾಗೂ ಮಾಜಿ ಸಚಿವೆ ರೋಜಾ ಹಾಗೂ ಟಿಡಿಪಿ ಮುಖಂಡರ ವಿರುದ್ಧ ಕಿತ್ತಾಟ ನಡೆಯುತ್ತಲೇ ಇರುತ್ತೆ. ಈಗ ಕೂಡ ಬಾಲಕೃಷ್ಣ, ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ಅಂತಹ ನಾಯಕರ ವಿರುದ್ಧ ರೋಜಾ ತಿರುಗಿಬಿದ್ದಿದ್ದಾರೆ.
ಇತ್ತೀಚೆಗೆ ತೆಲುಗಿನ ಹಿರಿಯ ಪತ್ರಕರ್ತರಾದ ಕೊಮ್ಮಿನೇನಿ ಶ್ರೀನಿವಾಸ ರಾವ್ ಎಂಬುವವರನ್ನು ಬಂಧಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದಿರುವ ನಟಿ ರೋಜಾ ಅವರನ್ನು ರಾಜಕೀಯ ಲಾಭಕ್ಕಾಗಿ ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಬಾಲಕೃಷ್ಣ, ಲೋಕೇಶ್ ಹಾಗೂ ಚಂದ್ರಬಾಬು ನಾಯ್ಡು ಅಂತಹ ದಿಗ್ಗಜರು ಅವರಿಗಿಂತ ಹೆಚ್ಚು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಮೊದಲು ಅವರು ಕ್ಷಮೆಯನ್ನು ಕೇಳಬೇಕು ಎಂದು ಕಿಡಿಕಾರಿದ್ದಾರೆ.

ಅಷ್ಟಕ್ಕೂ ಹಿರಿಯ ಪತ್ರಕರ್ತ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಈ ವೇಳೆ ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ಅವರನ್ನು ರೋಜಾ ಟೀಕೆ ಮಾಡಿದ್ದು ಯಾಕೆ? ಅವರು ಅದೆಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ? ಯಾಕೆ ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ಇಬ್ಬರನ್ನು ನಟಿ ರೋಜಾ ಟೀಕೆ ಮಾಡಿದ್ದಾರೆ ಎಂದು ನೋಡುವುದಾರೇ..
ಟಾಲಿವುಡ್ ಪವರ್‌ಸ್ಟಾರ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ರಾಜ್ಯದಲ್ಲಿ ಮಹಿಳೆಯರಿಗೆ ಅನ್ಯಾಯವಾದರೆ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಮಾತು ಕೊಟ್ಟಿದ್ದರು. ಆದರೆ, ಅವರು ಉಪಮುಖ್ಯಮಂತ್ರಿ ಆಗುತ್ತಿದ್ದಂತೆ ಮಹಿಳೆಯ ಮೇಲೆ ಅನ್ಯಾಯ ಹಾಗೂ ದೌರ್ಜನ್ಯ ಆಗುತ್ತಿದ್ದರೂ ಅವರು ಮಾತಾಡುತ್ತಿಲ್ಲ. ಅಂತಹವರನ್ನು ಶಿಕ್ಷಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿಲ್ಲ. ಪಿಠಾಪುರಂ, ಅನಂತಪುರ, ತಿರುಪತಿಯಲ್ಲಿ ಅನ್ಯಾಯ ನಡೆದರೂ ಪವನ್ ಕಲ್ಯಾಣ್ ಏನೂ ಮಾತಾಡಿಲ್ಲ ಎಂದು ನಟಿ ರೋಜಾ ಹೇಳಿದ್ದಾರೆ.

ಸಂಬಂಧವಿಲ್ಲ ಪ್ರಕರಣದಲ್ಲಿ ಪತ್ರಕರ್ತ ಶ್ರೀನಿವಾಸ ರಾವ್ ಅವರನ್ನು ಹೈದರಾಬಾದ್‌ನಿಂದ ವಿಜಯವಾಡಕ್ಕೆ ಕರೆತಂದ ರೀತಿಯನ್ನು ಎಲ್ಲರೂ ಗಮನಿಸಿದ್ದಾರೆ. ಸಂಬಂಧವಿಲ್ಲ ಪ್ರಕರಣಕ್ಕೆ ಪತ್ರಕರ್ತನನ್ನು ಹೊಣೆಗಾರನನ್ನಾಗಿಸಿ ಬಂಧಿಸುವುದು ಎಷ್ಟು ಸರಿ? ಮಹಿಳೆಯರನ್ನು ಅವಮಾನಿಸಿದ ಚಂದ್ರಬಾಬು ಬಾಯ್ಡು ಕ್ಷಮೆಯಾಚಿಸಬೇಕು ಎಂದು ರೋಜಾ ಒತ್ತಾಯಿಸಿದ್ದಾರೆ. ಹಾಗೇ ಬಾಲಕೃಷ್ಣ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.
"ಹುಡುಗಿಯರು ತಮ್ಮನ್ನು ನೋಡಿದಾಗ ಮುತ್ತು ನೀಡಬೇಕೆ ಅಥವಾ ಅಪ್ಪಿಕೊಳ್ಳಬೇಕೆ?" ಎಂದು ಬಾಲಕೃಷ್ಣ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಆಕ್ಷೇಪಾರ್ಹವಲ್ಲವೇ? ಅದಕ್ಕೆ ನಂದಮೂರು ಬಾಲಕೃಷ್ಣ ಕ್ಷಮೆಯನ್ನು ಕೇಳಬೇಕು ಎಂದು ಈ ಪ್ರಕರಣದಲ್ಲಿ ಬಾಲಕೃಷ್ಣ ಅವರನ್ನು ಎಳೆದು ತಂದಿದ್ದಾರೆ. ಬಾಲಯ್ಯ ವಿರುದ್ಧ ನಟಿ ರೋಜಾ ಕಿಡಿಕಾರಿದ್ದು, ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಹಾಗೇ ಜಗನ್ ತನ್ನ ಮಗಳನ್ನು ನೋಡಲು ಲಂಡನ್‌ಗೆ ಹೋದಾಗ ಅಸಭ್ಯ ಮತ್ತು ಕೆಟ್ಟ ಹೇಳಿಕೆಗಳನ್ನು ಕೊಟ್ಟ ನಾರಾ ಲೋಕೇಶ್ ಕ್ಷಮೆಯಾಚಿಸಬೇಕು ಎಂದು ರೋಜಾ ಕಿಡಿಕಾರಿದ್ದಾರೆ.
ಮಾಜಿ ಸಚಿವೆ ಹಾಗೂ ನಟಿ ರೋಜಾ ಇಲ್ಲಿಗೆ ಸುಮ್ಮನಾಗಲಿಲ್ಲ. ಜನಪ್ರಿಯ ಚಾನೆಲ್‌ಗಳಲ್ಲಿ ಕೂತು ಅನಿತಾ, ವೈಎಸ್ ಭಾರತಿ ಹಾಗೂ ವೈಎಸ್ ವಿಜಯಮ್ಮ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದರು. ಇದನ್ನು ಎಲ್ಲರೂ ಗಮನಿಸಿದ್ದಾರೆ. ಹಾಗೇ ಬಂಡಾರು ಸತ್ಯನಾರಾಯಣ ಅವರು ನನ್ನನ್ನೂ ಅವಮಾನಿಸಿದ್ದರು. ಅದನ್ನೂ ಎಲ್ಲರೂ ನೋಡಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ಹಾಗೂ ಲೋಕೇಶ್ ಕ್ಷಮೆ ಕೇಳಲೇಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಹಿರಿಯ ಪತ್ರಕರ್ತರನ್ನು ಬಂಧಿಸಿದ ಪ್ರಕರಣದಲ್ಲಿ ರೋಜಾ, ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ಅವರನ್ನು ಎಳೆದು ತಂದಿದ್ದು ಅವರ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.


Click it and Unblock the Notifications











