ಬಾಲಕೃಷ್ಣ ನಟಿಯನ್ನು ತಳ್ಳಿದ ಪ್ರಕರಣ; "ಬಾಲಯ್ಯ ನಾನು ಗ್ರೇಟ್ ಫ್ರೆಂಡ್ಸ್" ಎಂದ ಅಂಜಲಿ
ಕೆಲವು ದಿನಗಳ ಹಿಂದೆ ಬಾಲಕೃಷ್ಣ ವರ್ತನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತೆಲುಗು ಸಿನಿಮಾ 'ಗ್ಯಾಂಗ್ಸ್ ಆಫ್ ಗೋದಾವರಿ' ಪ್ರಿ-ರಿಲೀಸ್ ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಬಂದಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ 'ರಣವಿಕ್ರಮ' ನಟಿ ಅಂಜಲಿಯನ್ನು ತಳ್ಳಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿತ್ತು.
ಬಾಲಕೃಷ್ಣ ಈ ಹಿಂದೆ ಕೂಡ ಅಭಿಮಾನಿಗಳೊಂದಿಗೆ, ಕಲಾವಿದರೊಂದಿಗೆ ವರ್ತಿಸಿದ್ದಾರೆ. ಈಗ ದಕ್ಷಿಣ ಭಾರತದ ನಟಿ ಅಂಜಲಿಯನ್ನು ವೇದಿಕೆ ಮೇಲೆ ತಳ್ಳಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇಷ್ಟೆಲ್ಲ ಆದ್ಮೇಲೆ ನಟಿ ಅಂಜಲಿ, ಬಾಲಕೃಷ್ಣ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬಾಲಕೃಷ್ಣ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದ ಪ್ರಿ- ರಿಲೀಸ್ ಇವೆಂಟ್‌ನಲ್ಲಿ ಭಾಗಿಯಾಗಿದ್ದಕ್ಕೆ ಅಂಜಲಿ ಧನ್ಯವಾದಗಳನ್ನು ಹೇಳಿದ್ದಾರೆ. ತನ್ನ ಎಕ್ಸ್ ಖಾತೆಯಲ್ಲಿ ಬಾಲಕೃಷ್ಣ ಒಳ್ಳೆಯ ವ್ಯಕ್ತಿ ಎಂದೂ ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ, ನಟಿಯ ಹೇಳಿಕೆ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಅಸಲಿಗೆ ಅಂಜಲಿ ಎಕ್ಸ್ ಖಾತೆಯಲ್ಲಿ ಏನೆಲ್ಲ ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ..
ಅಷ್ಟಕ್ಕೂ ನಡೆದ ಘಟನೆ ಏನಂದ್ರೆ, 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಪ್ರಿ ರಿಲೀಸ್ ಈವೆಂಟ್ ಇತ್ತು. ಇಡೀ ತಂಡ ವೇದಿಕೆ ಮೇಲೆ ಇದ್ದಾಗ, ಬಾಲಕೃಷ್ಣ ನಟಿ ಅಂಜಲಿಯನ್ನು ಪಕ್ಕಕ್ಕೆ ಸರಿಯಲು ಹೇಳಿದ್ದರು. ಇನ್ನೇನು ಸ್ವಲ್ಪ ಹಿಂದಕ್ಕೆ ಹೀಗಬೇಕು ಅನ್ನುವಾಗಲೇ ಬಾಲಯ್ಯ ನಟಿಯನ್ನು ಜೋರಾಗಿ ತಳ್ಳಿದ್ದರು. ಆಗ ಅಂಜಲಿ ಒಂದು ಕ್ಷಣ ಶಾಕ್ ಆದರೂ, ತಕ್ಷಣವೇ ಪರಿಸ್ಥಿತಿಯನ್ನು ತಿಳಿಗೊಳಿಸಲು ನಗಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಯ್ಯ ವಿವಾದಕ್ಕೆ ಗುರಿಯಾಗಿದ್ದರು. ಅದರ ಜೊತೆಗೆ ಆ ಸಂದರ್ಭದಲ್ಲಿ ಅಂಜಲಿ ನಗಾಡಿದ್ದೂ ಟೀಕೆಗಳು ಕೇಳಿ ಬರುತ್ತಿದೆ.
ಈ ಘಟನೆಯ ಬಳಿಕ ನಟಿ ಅಂಜಲಿ, ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. " ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾ ಪ್ರಿ ರಿಲೀಸ್ ಇವೆಂಟ್‌ಗೆ ಆಗಮಿಸಿದ್ದಕ್ಕೆ ನಾನು ಬಾಲಕೃಷ್ಣ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ಸಂದರ್ಭದಲ್ಲಿ ನನ್ನ ಹಾಗೂ ಬಾಲಕೃಷ್ಣ ನಡುವೆ ಬಹಳ ದಿನಗಳಿಂದ ಒಂದೊಳ್ಳೆ ಬಾಂಧವ್ಯವಿದೆ. ಒಳ್ಳೆಯ ಸ್ನೇಹವಿದೆ. ಅವರೊಂದಿಗೆ ಮತ್ತೆ ನಾನು ವೇದಿಕೆಯನ್ನು ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ" ಎಂದು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದರು.
ಅಂಜಲಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಂತೆ, ನೆಟ್ಟಿಗರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. " ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದಾರೆ", "ಅವರ ಪರ ತಡವಾಗಿ ನಿಲ್ಲುತ್ತಿದ್ದೀರಾ", " ನೀವು ಸುಳ್ಳು ಹೇಳುತ್ತಿದ್ದೀರ ಅಂತ ಅನಿಸುತ್ತಿದೆ", "ಒತ್ತಾಯ ಪೂರ್ವಕವಾಗಿ ಟ್ವೀಟ್ ಮಾಡಿರುವ ಹಾಗಿದೆ. ಅದು ನಿಮ್ಮ ಆಯ್ಕೆ. ಆದರೆ, ಒಳಗಡೆ ಏನಾಗಿದೆ ಅನ್ನೋದಿ ನಿಮಗಷ್ಟೇ ಗೊತ್ತು" ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ನಿರೀಕ್ಷೆಯಂತೆ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ನಾಯಕ ವಿಶ್ವಕ್ ಸೇನ್, ನಿರ್ಮಾಪಕ ನಾಗ ವಂಶಿ ಕೂಡ ಬಾಲಕೃಷ್ಣ ಪರ ನಿಂತಿದ್ದಾರೆ. ಬಾಲಕೃಷ್ಣ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ನಟಿ ಅಂಜಲಿ ಬಳ ದಿನಗಳ ಬಳಿಕ ತೆಲುಗು ಸಿನಿಮಾಗೆ ಕಮ್ಯಾ ಬ್ಯಾಕ್ ಮಾಡಿದ್ದು, ವಿವಾದದಲ್ಲಿ ಸಿಕ್ಕಿಕೊಳ್ಳದೆ ಇರಲು ನಿರ್ಧರಿಸಿರಬಹುದೆಂಬ ಟೀಕೆಗಳು ವ್ಯಕ್ತವಾಗುತ್ತಿವೆ.


Click it and Unblock the Notifications











