"ಎರಡು ದಿನಗಳ ಹಿಂದೆನೂ ಕಮಿಟ್‌ಮೆಂಟ್ ಕೇಳಿದ್ರು"; ಬಹುಭಾಷಾ ನಟಿಯಿಂದ ಗಂಭೀರ ಆರೋಪ
ಸಿನಿಮಾ ಇಂಡಸ್ಟ್ರೀ ಹೆಣ್ಣು ಮಕ್ಕಳಿಗೆ ಸುರಕ್ಷಿತವೇ? ಈ ಪ್ರಶ್ನೆಗೆ ಉತ್ತರ ಒಬ್ಬೊಬ್ಬರದ್ದು ಒಂದೊಂದು ಉತ್ತರ. ಒಬ್ಬೊಬ್ಬರಿಗೆ ಒಂದೊಂದು ಅನುಭವ ಆಗಿದೆ. ಮೀಟೂ ಅಭಿಯಾನ ಆರಂಭ ಆದಾಗ ನಟಿಯರು ಮುಂದು ಬಂದು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರಿಂದ ಚಿತ್ರರಂಗದಲ್ಲಿ ದೊಡ್ಡ ಹೆಸರುಗಳು ಹೊರ ಬಂದಿದ್ದವು. ಅವರು ಇಂದಿಗೂ ಚಿತ್ರರಂಗದಲ್ಲಿ ಕಮ್ ಬ್ಯಾಕ್ ಮಾಡುವುದಕ್ಕೆ ಪರದಾಡುತ್ತಿದ್ದಾರೆ.
ಯಾವುದೇ ಚಿತ್ರರಂಗಕ್ಕೆ ಹೋದರೂ ಕಾಸ್ಟಿಂಗ್ ಕೌಚ್ ಪ್ರಕರಣಗಳು ಇವೆ. ಇದು ಮೀಟೂ ಅಭಿಯಾನದ ವೇಳೆನೇ ಹೊರ ಬಂದಿದೆ. ಆದರೆ, ಈ ಆರೋಪಗಳು ಇಲ್ಲಿಗೆ ಮುಗಿದಿಲ್ಲ. ಇಂದಿಗೂ ಮುಂದುವರೆದಿದೆ. ನಟಿಯರು ಇಂದಿಗೂ ತಮಗಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲವರ ಕರಾಳ ಮುಖವನ್ನು ತೆರೆದಿಡುತ್ತಿದ್ದಾರೆ.

ಚಿತ್ರರಂಗದಲ್ಲಿ ಅವಕಾಶ ವಂಚಿತರಾದವರಿಂದ ಹಿಡಿದು ಹೊಸಬರು ಹಾಗೂ ಅನುಭವಿ ನಟಿಯರವರೆಗೂ ಕೆಲವರು 'ಕಮಿಟ್‌ಮೆಂಟ್' ಮತ್ತು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಪವರ್‌ಫುಲ್ ಆಗಿದ್ದವರು ತಮ್ಮ ಸ್ಥಾನಮಾನ ದುರುಪಯೋಗಪಡಿಸಿಕೊಂಡು ಹೆಣ್ಣುಮಕ್ಕಳ ಜೀವನ ಹಾಳುಮಾಡುತ್ತಿದ್ದಾರೆ. ಈ ಆರೋಪ ಹಲವು ವರ್ಷಗಳಿಂದ ಹೇಳಿ ಬರುತ್ತಿದೆ. ಇತ್ತೀಚೆಗೆ ನಟಿಯೊಬ್ಬರು ಸಂದರ್ಶನವೊಂದರಲ್ಲಿ ಎರಡು ದಿನಗಳ ಹಿಂದಷ್ಟೇ 'ಕಮಿಟ್‌ಮೆಂಟ್' ಕಾಲ್ ಬಂದಿತ್ತೆಂದು ಹೇಳಿದ್ದಾರೆ. ಆ ನಟಿ ಯಾರು? ಕಾಸ್ಟಿಂಗ್ ಕೌಚ್ ಬಗ್ಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ನಟಿಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿರುವ ಮತ್ತೊಬ್ಬ ನಟಿ ಹಿರಿಯ ನಟಿ ಎಸ್ತರ್ ನೊರೋನ್ಹಾ. ತೆಲುಗು, ಕನ್ನಡ ಸೇರಿದಂತೆ ಹಲವು ಚಿತ್ರರಂಗದಲ್ಲಿ ನಟಿಸಿರುವ ಎಸ್ತರ್ ನೊರೋನ್ಹಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಇದರಲ್ಲಿ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಇಂದಿಗೂ 'ಕಮಿಟ್‌ಮೆಂಟ್' ಕೇಳಲಾಗುತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಇವರ ಹೇಳಿಕೆಗಳು ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
ಎಸ್ತರ್ ನೊರೋನ್ಹಾ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ನಾಯಕಿಯಾಗಿ, ಐಟಂ ಸಾಂಗ್‌ಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಮ್ಮೆ ಹಸಿ ಬಿಸಿ ದೃಶ್ಯಗಳಲ್ಲಿಯೂ ನಟಿಸಿ ಸುದ್ದಿಯಾಗಿದ್ದೂ ಇದೆ. ಎಸ್ತರ್ ನೊರೋನ್ಹಾ ನಟಿಸಿರುವ ಹೊಚ್ಚ ಹೊಸ ಸಿನಿಮಾ 'ಅಮರಾವತಿ ಕಿ ಆಹ್ವಾನಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರೋ ನಟಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ಈ ಸಂದರ್ಶನದಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಎಸ್ತರ್ ನೊರೋನ್ಹಾ ಕೊಟ್ಟ ಹೇಳಿಕೆಗಳು ಸದ್ದು ಮಾಡುತ್ತಿವೆ. ತನ್ನ ವೃತ್ತಿಜೀವನದ ಆರಂಭ ಆದಲ್ಲಿಂದಲೂ ಪರೋಕ್ಷವಾಗಿ 'ಕಮಿಟ್‌ಮೆಂಟ್'ಗಳಿಗೆ ಬೇಡಿಕೆಗಳಿದ್ದವು. ಈ ಕಿರುಕುಳ ಈಗಲೂ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿವೆ. ಎರಡು ದಿನಗಳ ಹಿಂದೆಯೂ ಕರೆ ಬಂದಿರೋದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಜನರು ತನ್ನ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದು, ತನ್ನ ಸಿನಿಮಾ ಜರ್ನಿಯನ್ನು ಗಮನಿಸುವುದಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. "ನನ್ನನ್ನು ಜನರು ತುಂಬಾ ಪ್ರೀತಿಸುತ್ತಾರೆ. ಮಾಧ್ಯಮಗಳು ಕೂಡ ಬೆಂಬಲ ನೀಡುತ್ತಿವೆ. ಹಲವರೊಂದಿಗೆ ಕೆಲಸ ಮಾಡಿದ್ದು, ಯಾವುದೇ ಸಮಸ್ಯೆಗಳಿಲ್ಲ. ಹೀಗಿದ್ದರೂ ಆ ಕೆಟ್ಟ ಗುಂಪಿನಲ್ಲಿ ತನ್ನನ್ನು ಯಾಕೆ ಸೇರಿಸುತ್ತಾರೋ ಗೊತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇಷ್ಟೆಲ್ಲಾ ವರ್ಷಗಳ ನಂತರವೂ ಕೆಲವರು 'ಕಮಿಟ್‌ಮೆಂಟ್' ನಿರೀಕ್ಷೆಯಲ್ಲಿದ್ದಾರೆ. ಅವಕಾಶಕ್ಕಾಗಿ ಈಗಲಾದರೂ ರಾಜಿ ಮಾಡಿಕೊಳ್ಳಬಹುದು ಎಂದು ಆಶಿಸುತ್ತಿದ್ದಾರೆ. ಆದರೆ, ಈ ಪ್ರಯತ್ನಗಳು ಎಂದಿಗೂ ಸಫಲ ಆಗುವುದಿಲ್ಲವೆಂದು ಹೇಳಿದ್ದಾರೆ.


Click it and Unblock the Notifications











