ಕೇವಲ 34 ದಿನಗಳಲ್ಲಿ ಬಿಗ್ ಬಾಸ್‌ನಿಂದ ಹೊರ ಬಿದ್ದ 'ಕೋದಂಡ ರಾಮ' ಹೀರೋಯಿನ್

ಬಿಗ್ ಬಾಸ್ ರಿಯಾಲಿಟಿ ಶೋ ನೋಡುವುದಕ್ಕೆ ಎಷ್ಟು ಕ್ರೇಜ್ ಇದೆಯೋ ಅಷ್ಟೇ ಕ್ರೇಜ್ ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಇದೆ. ಪ್ರತಿ ದಿನವೂ ಈ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಲೇ ಇರುತ್ತೆ. ಒಂದು ಮನೆಯೊಳಗೆ ಆತ್ಮೀಯರನ್ನು, ಮನೆ ಮಠ, ಮೊಬೈಲ್, ಟಿವಿ ಎಲ್ಲವನ್ನೂ ತೊರೆದು ಆಡಬೇಕಾದ ಮೈಂಡ್ ಗೇಮ್ ರೋಚಕವಾಗಿರುತ್ತೆ. ಭಾರತದ ಎಲ್ಲಾ ಪ್ರಮುಖ ಭಾಷೆಯಲ್ಲಿ ಈ ಶೋ ಸೂಪರ್ ಹಿಟ್ ಆಗಿದೆ.

ಕಿರುತೆರೆ ವೀಕ್ಷಕರಿಗೆ ಟಾಸ್ಕ್‌ಗಳು ಎಷ್ಟು ಕಿಕ್ ಕೊಟ್ಟಂತೆ ಈ ವಾರ ಯಾರು ಎಲಿಮಿನೇಷನ್ ಆಗುತ್ತಾರೆ ಅನ್ನೋದು ಕುತೂಹಲ ಕೆರಳಿಸುತ್ತದೆ. ಇದರಿಂದಲೇ ಈ ರಿಯಾಲಿಟಿ ಶೋ ಅನ್ನು ಹೆಚ್ಚು ಮಂದಿ ನೋಡುತ್ತಾರೆ. ಪ್ರತಿ ಸೀಸನ್ ಕೂಡ ಸೂಪರ್ ಸಕ್ಸಸ್ ಆಗುತ್ತೆ. ಎಲ್ಲಾ ಭಾಷೆಯಲ್ಲಿಯೂ ಈ ಬಾರಿ ಬಿಗ್ ಬಾಸ್ ಅನ್ನು ವಿಭಿನ್ನವಾಗಿ ವೀಕ್ಷಕರ ಮುಂದೆ ಇಡಲಾಗುತ್ತಿದೆ. ಅದರಲ್ಲೂ ಬಿಗ್ ಬಾಸ್ ತೆಲುಗು ಸೀಸನ್ 9 ಕೂಡ ಒಂದು.

Actress Flora Saini Eliminated from Bigg Boss Telugu 9 in just 34 Days here is her remuneration details

ಈ ವಾರ ಬಿಗ್ ಬಾಸ್ ತೆಲುಗು ಸೀಸನ್ 9ರಿಂದ ಯಾರೂ ಊಹಿಸದೇ ಇರುವ ಸ್ಪರ್ಧಿಯೊಬ್ಬರು ಮನೆಯಿಂದ ಹೊರ ಬಿದ್ದಿದ್ದಾರೆ. ಅವರು ಬೇರೆ ಯಾರು ಅಲ್ಲ. ಕನ್ನಡದ 'ಕೋದಂಡ ರಾಮ' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಫ್ಲೋರಾ ಸೈನಿ. ಇದು ಕಿರುತೆರೆ ವೀಕ್ಷಕರಲ್ಲಿಯೂ ಅಚ್ಚರಿಯನ್ನು ಮೂಡಿಸಿದೆ. ನಿರೀಕ್ಷೆಯೇ ಮಾಡ ಈ ಟ್ವಿಸ್ಟ್‌ಗೆ ವೀಕ್ಷಕರು ಶಾಕ್ ಆಗಿದ್ದಾರೆ.

ಫ್ಲೋರಾ ಸೈನಿ ದಕ್ಷಿಣ ಭಾರತದ ಸಿನಿ ಪ್ರೇಮಿಗಳಿಗೆ ಹೊಸಬರೇನೂ ಅಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಹಿಂದಿ ಪ್ರಾಜೆಕ್ಟ್‌ಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ 47 ವರ್ಷದ ಫ್ಲೋರಾ ಸೈನಾ ಕೂಡ ನಿಲ್ಲುತ್ತಾರೆ. ಇತ್ತೀಚೆಗೆ ಕನ್ನಡದ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಜೊತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆಗಳನ್ನೆಲ್ಲ ಹುಸಿಯಾಗಿಸಿ, ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಜನಪ್ರಿಯರ ನಟಿ ಫ್ಲೋರಾ ಸೈನಿ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದೇಕೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣ ಭಾಷೆ ಎನ್ನಲಾಗುತ್ತಿದೆ. ಫ್ಲೋರಾ ಸೈನಿಗೆ ತೆಲುಗು ಭಾಷೆಯ ಅಷ್ಟಕ್ಕಾಗಿ ಬರೋದಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಲ್ಲಿಂದ ಮೌನವಾಗಿದ್ದರು. ಇತರ ಸ್ಪರ್ಧಿಗಳೊಂದಿಗೆ ಅಂತರವನ್ನು ಕಾಯ್ಡುಕೊಂಡಿದ್ದರು. ಹೀಗಾಗಿ ಮನೆಯ ಸದಸ್ಯರೊಂದಿಗೆ ಹೆಚ್ಚಾಗಿ ಬೆರೆಯದೇ, ಕ್ಯಾಮರಾದಿಂದ ಅಂತರವನ್ನು ಕಾಯ್ದುಕೊಂಡಿದ್ದೇ ಕಾರಣ ಎನ್ನಲಾಗಿದೆ.

ಇನ್ನು ಫ್ಲೋರಾ ಸೈನಿ ಟಾಸ್ಕ್‌ಗಳಲ್ಲಿ ಆಕ್ಟಿವ್ ಆಗಿರಲಿಲ್ಲ. ಆಟ ಆಡಬೇಕಲ್ಲ ಎಂಬಂತೆ ಆಡಿದಂತೆ ಇತ್ತು. ಇವೆಲ್ಲವೂ ಫ್ಲೋರಾ ಸೈನಿಗೆ ದೊಡ್ಡ ಮೈನಸ್ ಪಾಯಿಂಟ್ ಆಯ್ತು. ವೀಕ್ಷಕರಿಗೆ ಫ್ಲೋರಾ ಸೈನಿಯಿಂದ ಹೆಚ್ಚು ಮನರಂಜನೆ ಏನೂ ಸಿಗಲಿಲ್ಲ. ಹೀಗಾಗಿ ವೀಕ್ಷಕರು ಕೂಡ ಈ ನಟಿಯನ್ನು ಬಿಗ್ ಬಾಸ್‌ನಲ್ಲಿ ಉಳಿಸಿಕೊಳ್ಳುವುದಕ್ಕೆ ನಿರಾಸಕ್ತಿ ತೋರಿದ್ದರು ಎನ್ನಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸದಸ್ಯರು ಆಕ್ಟಿವ್ ಆಗಿರಬೇಕು. ಆಟ, ಕಿತ್ತಾಟ, ಮೈಂಡ್ ಗೇಮ್‌ಗಳನ್ನು ಆಡಬೇಕು. ನಗಿಸಬೇಕು-ಅಳಬೇಕು. ಆದರೆ, ಫ್ಲೋರಾ ಸೈನಿ ಕಡೆಯಿಂದ ಇದ್ಯಾವುದೂ ಸಿಗಲೇ ಇಲ್ಲ. ಹೀಗಾಗಿ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 34 ದಿನಗಳಲ್ಲಿಯೇ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ, ಫ್ಲೋರಾ ಸೈನಿಗೆ ಒಂದು ವಾರಕ್ಕೆ ₹ 3 ಲಕ್ಷ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಐದು ವಾರಗಳ ಕಾಲ ಮನೆಯಲ್ಲಿದ್ದ ಫ್ಲೋರಾ ಬರೋಬ್ಬರಿ ₹14.5 ಲಕ್ಷದಿಂದ ₹15 ಲಕ್ಷದವರೆಗೆ ದುಡಿದಿದ್ದಾರೆ ಎನ್ನಲಾಗಿದೆ.

More from Filmibeat

English summary
Actress Flora Saini Eliminated from Bigg Boss Telugu 9 in just 34 Days here is her remuneration details.
Read more about: bigg boss elimination actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X