ಹೋಳಿ ಹಬ್ಬಕ್ಕೂ ಮುನ್ನ ದಕ್ಷಿಣಕ್ಕೆ ಕಾಲಿಟ್ಟ ಜೂ.ಅತಿಲೋಕ ಸುಂದರಿ: ಅಮ್ಮನಂತೆ ಗೆಲ್ತಾಳಾ ಮಗಳು?
ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಶ್ರೀದೇವಿ ಸಿಕ್ಕ ಸಕ್ಸಸ್ ಮತ್ಯಾರಿಗೂ ಸಿಕ್ಕಂತಿಲ್ಲ. ಭಾರತೀಯ ಚಿತ್ರರಂಗ ಕಂಡ ಅಸಲಿ ಲೇಡಿ ಇವರೇನೇ. ಆದರೆ, ಶ್ರೀದೇವಿಯಂತೆ ಮಗಳಿಗೆ ಅಂತಹ ಸಕ್ಸಸ್ ಇನ್ನೂ ಸಿಕ್ಕಿಲ್ಲ.
ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ಅಂತಹ ಜನಪ್ರಿಯ ನಿರ್ಮಾಪಕ ಸಂಸ್ಥೆಯಿಂದ ಲಾಂಚ್ ಆಗಿದ್ದರೂ, ಜಾಹ್ನವಿ ಕಪೂರ್‌ಗೆ ಬ್ಲಾಕ್‌ಬಸ್ಟರ್ ಸಿನಿಮಾ ಕೊಡುವಲ್ಲಿ ಸೋತಿದ್ದಾರೆ. ಈ ಬೆನ್ನಲ್ಲೇ ದಕ್ಷಿಣ ಭಾರತಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾಹ್ನವಿ ಕಪೂರ್ ಟಾಲಿವುಡ್‌ಗೆ ಬರುತ್ತಾರೆ ಅನ್ನೋ ಸುದ್ದಿ ಓಡಾಡುತ್ತಲೇ ಇತ್ತು. ಆದ್ರೀಗ ಅದು ಅಧಿಕೃತವಾಗಿ ಅನೌನ್ಸ್ ಆಗಿದೆ.

'NTR 30' ಸಿನಿಮಾಗೆ ಜಾಹ್ನವಿ ಕಪೂರ್ ಫಿಕ್ಸ್
ಇಂದು(ಮಾರ್ಚ್ 6) ಜಾಹ್ನವಿ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ 'ಚಾಂದಿನಿ'ಯ ಪುತ್ರಿ 26ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ಊಹಾಪೋಹಗಳನ್ನು ನಿಜವೆಂದು ಸಾಬೀತು ಮಾಡಿದ್ದಾರೆ. ತಮ್ಮದೇ ಇನ್‌ಸ್ಟಾಗ್ರಾಂನಲ್ಲಿ 'ಎನ್‌ಟಿಆರ್ 30' (NTR 30)ಯ ಫಸ್ಟ್ ಲುಕ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಪತ್ರಿ ಜಾಹ್ನವಿ ಕಪೂರ್ ಟಾಲಿವುಡ್ ಎಂಟ್ರಿ ಅಧಿಕೃತವಾಗಿದೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಈ ಆಕ್ಷನ್ ಡ್ರಾಮ ನೋಡಲು ಸಿನಿಪ್ರಿಯರು ಕಾತುರರಾಗಿದ್ದಾರೆ. ಬಹಳ ದಿನಗಳ ಬಳಿಕ ಈ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದು, ಜಾಹ್ನವಿ ಕಪೂರ್ ಅನ್ನು ಅಧಿಕೃತವಾಗಿ ಟಾಲಿವುಡ್‌ಗೆ ಬರಮಾಡಿಕೊಂಡಿದ್ದಾರೆ.

ಬಿರುಗಾಳಿ ಎದ್ದಗಲೂ ಶಾಂತವಾಗಿರುತ್ತಾಳೆ
ಜಾಹ್ನವಿ ಕಪೂರ್ ಫಸ್ಟ್ ಲುಕ್ ರಿಲೀಸ್ ಮಾಡಿದ ಬಳಿಕ ಚಿತ್ರತಂಡ ಟಾಲಿವುಡ್‌ಗೆ ಸ್ವಾಗತಿಸಿದೆ. "#NTR30ಯ ಉಗ್ರ ಪ್ರಪಂಚದಲ್ಲಿ ಬಿರುಗಾಳಿ ಎದ್ದಗಲೂ ಈಕೆ ಶಾಂತವಾಗಿರುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಸ್ವಾಗತ." ಎಂದು ಜಾಹ್ನವಿ ಕಪೂರ್ ಅನ್ನು ವೆಲ್‌ಕಮ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಶೇರ್ ಮಾಡಲಾಗಿದೆ.
ಇತ್ತ ಜಾಹ್ನವಿ ಕಪೂರ್ ಕೂಡ " ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿದೆ. ನನ್ನ ನೆಚ್ಚಿನ ನಟ #ಎನ್‌ಟಿಆರ್30 ನೊಂದಿಗೆ ಪ್ರಯಾಣ ಮಾಡಲು ಕಾಯುತ್ತಿದ್ದೇನೆ." ಎಂದು ಬರೆದು ಫಸ್ಟ್ ಲುಕ್ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.ಇದನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾಹ್ನವಿ ಕಪೂರ ಲುಕ್ ನೋಡಿ ಥ್ರಿಲ್ ಆಗಿದ್ದಾರೆ.
'ಎನ್‌ಟಿಆರ್ 30' ರಿಲೀಸ್ ಯಾವಾಗ?
ಟಾಲಿವುಡ್ ಸಿನಿ ಪ್ರಿಯರು ಈ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ. "ಸಂದರ್ಶನವೊಂದು ಅವರು ಜೂ.ಎನ್‌ಟಿಆರ್ ಜೊತೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದರಂತೆ ಅವರಿಗೀಗ ಆ ಅವಕಾಶ ಸಿಕ್ಕಿದೆ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, " ಕಾಯುವುದಕ್ಕೆ ಆಗುತ್ತಿಲ್ಲ" ಎಂದು ಬರೆದಿದ್ದರೆ, ಮತ್ತೊಬ್ಬರು "ಈ ಫಸ್ಟ್ ಲುಕ್ ಸಖತ್ ಆಗಿದೆ" ಎಂದು ಕೆಮಂಟ್ ಮಾಡಿದ್ದಾರೆ.
'ಎನ್‌ಟಿಆರ್ 30' ಸಿನಿಮಾ ಶೂಟಿಂಗ್ ಶೀಘ್ರದಲ್ಲಿಯೇ ಆರಂಭ ಆಗಿಲಿದೆ. ಮುಂದಿನ ವರ್ಷ, ಅಂದ್ರೆ, 2024ರಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. RRR ಸಿನಿಮಾ ಬಳಿಕ ಜೂ.ಎನ್‌ಟಿಆರ್‌ಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯರಾಗಿದ್ದಾರೆ. ಈ ಬೆನ್ನಲ್ಲೇ ಸಾಕಷ್ಟು ಸಮಯ ತೆಗೆದುಕೊಂಡು ಕೊರಟಾಲ ಶಿವ ನಿರ್ದೇಶಿಸುತ್ತಿರುವ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುದ್ದರು. ಅಲ್ಲಿಂದ ಸಾಕಷ್ಟು ಬಾರಿ ಸ್ಕ್ರಿಪ್ಟ್ ಬದಲಾಗಿದ್ದು, ಕೊನೆಗೂ ಸಿನಿಮಾ ಸೆಟ್ಟೇರುತ್ತಿದೆ.


Click it and Unblock the Notifications











