ಜ್ಯೋತಿ ರೈ ಇನ್‌ಸ್ಟಾಗ್ರಾಂ ಬೋಲ್ಡ್ ಫೋಟೊಗಳನ್ನು ಹಾಕೋದ್ಯಾಕೆ? ನಟಿ ಕೊಡುವ ಉತ್ತರವೇನು?

ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿರ ಇರುತ್ತಾರೆ. ಇನ್‌ಸ್ಟಾಗ್ರಾಂ ಬೋಲ್ಡ್ ಫೋಟೊಗಳನ್ನು ಹಾಕುವ ನಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ವಿವಾದ ಅವರನ್ನು ಸುತ್ತಿಕೊಳ್ಳುತ್ತೆ. ಇತ್ತೀಚೆಗೆ ಜ್ಯೋತಿ ರೈ ಅವರ ಖಾಸಗಿ ಫೋಟೊಗಳು ಎನ್ನಲಾದ ಫೋಟೊಗಳನ್ನು ರಿಲೀಸ್ ಮಾಡುವುದಾಗಿ ಅದೇ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಪೋಸ್ಟ್ ಹಾಕಿದ್ದ.

ಈ ಬೆಳವಣಿಗೆ ಬಳಿಕ ಜ್ಯೋತಿ ರೈ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರನ್ನು ದಾಖಲಿಸಿದ್ದರು. ಇದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಳಿಕ ಯಾರೋ ಕಿಡಿಗೇಡಿ ಜ್ಯೋತಿ ರೈ ಫೋಟೊಗಳನ್ನು ಡೀಪ್‌ಫೇಕ್ ಮಾಡಿದ್ದ ಎಂಬ ಸುದ್ದಿನೂ ಹರಿದಾಡಿತ್ತು. ಈ ಸುದ್ದಿ ತಣ್ಣಗಾಗುವುದರಲ್ಲಿ ಹೊಸ ಪ್ರಾಜೆಕ್ಟ್ ಹೊತ್ತು ಜ್ಯೋತಿ ರೈ ಬಂದಿದ್ದಾರೆ.

Actress Jyothi Rai reacted to her Instagram post and bad comments

ಜ್ಯೋತಿ ರೈ ಇತ್ತೀಚೆಗೆ ತನ್ನ ಹೊಸ ಪ್ರಾಜೆಕ್ಟ್ 'ಎ ಮಾಸ್ಟರ್ ಪೀಸ್' ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ನಟಿಗೆ ಸೀರಿಯಲ್‌ನಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೇ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದ್ಯಾಕೆ ಅಂತ ಪ್ರಶ್ನೆ ಮಾಡಲಾಗಿತ್ತು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಟ್ಟ ಕಾಮೆಂಟ್‌ಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಜ್ಯೋತಿ ರೈ ಉತ್ತರ ಹೀಗಿತ್ತು.

ಜ್ಯೋತಿ ರೈ ಬಹುತೇಕ ಟಾಲಿವುಡ್‌ನಲ್ಲಿಯೇ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮದುವೆ ಕೂಡ ಆಗಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ಚೆನ್ನಾಗಿಯೇ ನಡೆಯುತ್ತಿದೆ. ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಈ ವೇಳೆ ಟ್ರೆಡಿಷನಲ್ ಲುಕ್ ಹಾಗೂ ಮಾಡರ್ನ್ ಲುಕ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

"ಇದು ನಮ್ಮ ವೃತ್ತಿ. ನಾವೇನು ಮಾಡುತ್ತೇವೆ. ಮಾಡರ್ನ್ ರೋಲ್ ಇದ್ದರೆ, ಮಾಡರ್ನ್ ರೋಲ್ ಮಾಡುತ್ತೇವೆ. ಟ್ರೆಡಿಷನಲ್ ರೋಲ್ ಇದ್ದರೆ, ಟ್ರೆಡಿಷನಲ್ ರೋಲ್ ಮಾಡುತ್ತೇವೆ. ಅದು ಸಿನಿಮಾ ಇದ್ದರೂ ನಾವು ನಟನೆ ಮಾಡಬೇಕು. ಸೀರಿಯಲ್ ಇದ್ದರೂ ನಾವು ನಟನೆ ಮಾಡಬೇಕು. ಇದು ಸೀರಿಯಲ್ ನಾನು ಕಡಿಮೆ ನಟನೆ ಮಾಡುತ್ತೇನೆ. ಇದು ಸಿನಿಮಾ ಕಡಿಮೆ ನಟನೆ ಮಾಡುತ್ತೇನೆ ಅಂತ ಹೇಳುವುದಕ್ಕೆ ಆಗುವುದಿಲ್ಲ." ಎಂದು ಹೇಳಿದ್ದಾರೆ.

Actress Jyothi Rai reacted to her Instagram post and bad comments

ಹಾಗೇ ಜ್ಯೋತಿ ರೈ ಬ್ಯಾಡ್ ಕಾಮೆಂಟ್ ಮಾಡುವ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಜನರು ಏನು ಕಾಮೆಂಟ್ ಮಾಡುತ್ತಾರೋ ಅದು ಅವರ ಮನಸ್ಥಿತಿ, ವ್ಯಕ್ತಿತ್ವ. ಅವರು ಕಾಮೆಂಟ್ ಮಾಡುತ್ತಾರೆ ಅಂತ ನಾನು ಮಾಡುವುದಿಲ್ಲ. ಈ ಹಿಂದೆ ನಾನು ಸೋಶಿಯಲ್ ಮೀಡಿಯಾದಲ್ಲಿ ಇರಲಿಲ್ಲ. ಈಗ ಎಲ್ಲವೂ ಸೋಶಿಯಲ್ ಮೀಡಿಯಾದಲ್ಲಿಯೇ ನಡೆಯುತ್ತಿದೆ. ಸಿನಿಮಾ, ಪ್ರಮೋಷನ್ ಏನೇ ಇದ್ದರೂ ನೀವು ಟ್ರೆಂಡ್ ಮೂಲಕವೇ ಹೋಗಬೇಕು" ಎಂದಿದ್ದಾರೆ.

ಜ್ಯೋತಿ ಮಾಡರ್ನ್ ಡ್ರೆಸ್‌ನಲ್ಲಿ ಕನ್ನಡ ಶೋಗಳನ್ನು ನಿರೂಪಣೆ ಮಾಡಿದ್ದನ್ನೂ ಹೇಳಿಕೊಂಡಿದ್ದಾರೆ. "ಇಲ್ಲಿ ಜಗತಿ ಕ್ಯಾರೆಕ್ಟರ್‌ನಲ್ಲಿ ನನ್ನನ್ನು ನೋಡಿದ್ದಾರೆ. ಅದೇ ಕ್ಯಾರೆಕ್ಟರ್ ಅಂತ ಅಂದುಕೊಂಡಿದ್ದಾರೆ. ನೀವು ಕನ್ನಡದಲ್ಲಿ ನೋಡಿದರೆ, ಅದೇ ಮಾಡರ್ನ್ ಡ್ರೆಸ್‌ನಲ್ಲಿ 68 ಎಪಿಸೋಡ್‌ನ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದೇನೆ. ಜಗತಿ ಪಾತ್ರಕ್ಕೆ ಎಂತಹ ಜನಪ್ರಿಯತೆ ಸಿಕ್ಕಿದೆ. ಜನರು ಆಶೀರ್ವಾದ ಮಾಡಿದ್ದಾರೆ. ಅದಕ್ಕಿಂತ ಇನ್ನೇನು ಬೇಕು. ಈ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ." ಎಂದಿದ್ದಾರೆ.

More from Filmibeat

English summary
Jyothi Rai reaction on bad comments:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X