ಕೆಂಪು ಬಣ್ಣದ ತುಂಡು ಉಡುಗೆಯಲ್ಲಿ ಹುಡುಗರ ಹೃದಯ ಗೆದ್ದ ಜ್ಯೋತಿ ರೈ; ಆದರೆ ನೆಟ್ಟಿಗರ ಏನಂದ್ರು?

ಕನ್ನಡ ಹಾಗೂ ತೆಲುಗು ಎರಡೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ಮಿಂಚಿದವರು ಜ್ಯೋತಿ ರೈ. ಇತ್ತೀಚೆಗೆ ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿಯೇ ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಗ್ಲಾಮರಸ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ನಿದ್ದೆ ಕೆಡಿಸುತ್ತಿದ್ದಾರೆ. ಈ ನಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹೊಚ್ಚ ಹೊಸ ಪೋಸ್ಟ್‌ಗಳನ್ನು ಯಾವಾಗ ಹಾಕುತ್ತಾರೋ ಕಾದು ಕೂರುವ ಮಂದಿಗೇನು ಕಮ್ಮಿಯಿಲ್ಲ.

ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಹತ್ತಿರ 7.30 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ತನ್ನ ಗ್ಲಾಮರಸ್ ಫೋಟೋಗಳಿಂದ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಅನ್ನು ಸಂಪಾದಿಸಿದ್ದಾರೆ. ಈಗ ಕೆಂಪು ಬಣ್ಣದ ತುಂಡು ಉಡುಗೆಯಲ್ಲಿ ನಾಲ್ಕು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅವರು ಪೋಸ್ಟ್ ಮಾಡುತ್ತಿದ್ದಂತೆ ಅದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

Actress Jyoti Poorvaj Rai shared new photo with short red dress went viral

ಶಾರ್ಟ್ ಮಾಡರ್ನ್ ರೆಡ್ ಡ್ರೆಸ್‌ನಲ್ಲಿ ಜ್ಯೋತಿ ರೈ ಹುಡುಗರ ಕಣ್ಣು ಕುಕ್ಕಿದ್ದಾರೆ. ಈ ಫೋಟೊಗಳನ್ನು ಪಡ್ಡೆ ಹೈಕಳು ಕಣ್ತುಂಬಿ ಕೊಳ್ಳುತ್ತಿದ್ದಂತೆ ಕಮೆಂಟ್‌ಗಳ ಮೇಲೆ ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಈಗಾಗಲೇ ಈ ಫೋಟೋಗಳಿಗೆ 14 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಏನೆಲ್ಲ ಕಮೆಂಟ್ ಮಾಡಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಜ್ಯೋತಿ ರೈ ಮೂಲತ: ಕನ್ನಡದವರು. ಇಲ್ಲಿನ ಕಿರುತೆರೆಯಲ್ಲಿ ಮಿಂಚಿದ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ತೆಲುಗು ಮಂದಿ ಇವರ ಸೌಂದರ್ಯಕ್ಕೆ ಹಾಗೂ ನಟನೆಗೆ ಫಿದಾ ಆಗಿಬಿಟ್ಟರು. ಹೆಚ್ಚೆಚ್ಚು ಅವಕಾಶಗಳು ಸಿಕ್ಕಿದ್ದರಿಂದ ತೆಲುಗಿನಲ್ಲಿಯೇ ಸೆಟಲ್ ಆದರು. ಇವರು ತೆಲುಗಿನಲ್ಲಿ ನಟಿಸಿದ 'ಗುಪ್ಪೆಡಂತ ಮನಸು' ಧಾರಾವಾಹಿಯ ಪಾತ್ರ ಇವರನ್ನು ಫೇಮಸ್ ಮಾಡಿತ್ತು. ಇಲ್ಲಿಂದ ಇವರು ತೆಲುಗಿನಲ್ಲಿ ತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಇವರು ತೆಲುಗು ರಾಜ್ಯಗಳಲ್ಲಿ 'ಜಗತಿ ಮೇಡಂ' ಎಂದೇ ಫೇಮಸ್.

ಕೊಡಗಿನ ಮಡಿಕೇರಿ ಕಡೆಯವರಾದ ಜ್ಯೋತಿ ಕನ್ನಡದಲ್ಲಿ 'ದಿಯಾ', 'ಸಪ್ಲೈಯರ್ ಶಂಕರ', 'ಜರ್ಸಿ ನಂಬರ್ 10' ಸೇರಿದಂತೆ ಹಲವು ಕನ್ನಡ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಬಳಿಕ ತೆಲುಗಿನಲ್ಲಿ 'ಕನ್ಯಾದಾನಂ' ಧಾರಾವಾಹಿಯ ಮೂಲಕ ಅಲ್ಲಿನ ವೀಕ್ಷಕರಿಗೆ ಪರಿಚಯವಾದರು. ಆದರೆ, 'ಗುಪ್ಪೆಡಂತ ಮನಸು' ಧಾರಾವಾಹಿ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತ್ತು.

ಸದ್ಯಕ್ಕೀಗ ಜ್ಯೋತಿ ರೈ ಕಿರುತೆರೆಗಿಂತ ಹೆಚ್ಚಾಗಿ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ಕನ್ನಡದಲ್ಲೂ ಆಗಾಗ ನಟಿಸುತ್ತಿರುತ್ತಾರೆ. ಇವುಗಳ ಮಧ್ಯೆ ಜ್ಯೋತಿ ಹಂಚಿಕೊಳ್ಳುವ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಹಲ್‌ಚಲ್ ಎಬ್ಬಿಸುತ್ತವೆ. ಈಗ ರೆಡ್ ಶಾರ್ಟ್‌ ಡ್ರೆಸ್‌ನಲ್ಲಿ ಹುಡುಗರಿಗೆ ಹುಚ್ಚು ಹಿಡಿಯುವಂತೆ ಮಾಡಿದ್ದಾರೆ. ಚಿಕ್ಕ ಗೌನ್ ಧರಿಸಿ, ಮೈಮೇಲಿನ ಟ್ಯಾಟೂ ತೋರಿಸಿ ಪೋಸ್ ನೀಡಿದ್ದ ಜ್ಯೋತಿ ರಾಯ್ ಫೋಟೋಗಳಿಗೆ ನೆಟ್ಟಿಗರು ಕಮೆಂಟ್‌ ಕೂಡ ಮಜವಾಗಿವೆ.

ನೆಟ್ಟಿಗರೊಬ್ಬರು "ನಿಮ್ಮ ಅಂದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಪರ್ಫೆಕ್ಟ್ ಲುಕ್ ಡಿಯರ್. ಶೇಪ್ ಕೂಡ ಚೆನ್ನಾಗಿದೆ" ಎಂದು ಸೌಂದರ್ಯವನ್ನು ಹೊಗಳಿದ್ದಾರೆ. ಇನ್ನೊಬ್ಬರು "ರೆಡ್ ಹಾಟ್ ಜ್ಯೋತಿ ಅಮೇಜಿಂಗ್ ಗರ್ಲ್" ಎಂದು ಹೇಳಿದ್ದಾರೆ. ಹಾಗೇ ಕೆಲವರು ಹಾರ್ಟ್, ಚಿಟ್ಟೆ ಎಮೋಜಿಗಳನ್ನು ಹಂಚಿಕೊಂಡು ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actress Jyoti Poorvaj Rai shared new photo with short red dress went viral.
Read more about: actress photoshoot tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X