"45 ವರ್ಷಗಳ ಬಳಿಕ ಹಾಗೆನೇ.. ಅದಕ್ಕೆ 20ರ ಹರೆಯದಲ್ಲೇ ಶುರು ಮಾಡ್ಬೇಕು": ನಟಿ ಮೀನಾ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನಾಯಕಿಯರಲ್ಲಿ ಮೀನಾ ಕೂಡ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೆರೆದ ನಟಿಯೀಕೆ. ಬಾಲನಟಿಯಾಗಿ ಮೀನಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮಾಡಿದ ಸಾಧನೆಗಳ ಪಟ್ಟಿ ದೊಡ್ಡದೇ ಇದೆ.

ನಟಿ ಮೀನಾ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರೋ ನಟಿಯ ಇಂದಿಗೂ ಚಿತ್ರರಂಗದ ಬೇಡಿಕೆಯ ನಟಿಯಲ್ಲಿ ಒಬ್ಬರು. ತಮ್ಮ ಸೌಂದರ್ಯ ಹಾಗೂ ನಗುವಿನಿಂದಲೇ ಅಭಿಮಾನಿಗಳ ನಿದ್ದೆ ಕೆಡಿಸುವ ನಟಿ, ತಮ್ಮ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Actress Meena said if want to become hero at 45 you star at the age of 20 post is trending

ಮೀನಾ ಅವರ ಪತಿ ನಿಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಸಿಲುಕಿದ ನಟಿ ಕೂಡ ಇವರೇ. ಎರಡನೇ ಮದುವೆ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಚರ್ಚೆ ಮಾಡಿದ್ದರು. ಈಗ ಮೀನಾ ಅದೇ ಸೋಶಿಯ್ ಮೀಡಿಯಾದಲ್ಲಿ ಯುವಕರಿಗಾಗಿ ಒಂದು ಪೋಸ್ಟ್ ಮಾಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗುವುದಕ್ಕೆ ಶುರುವಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರಿಗೆ ಆರು ವರ್ಷವಿದ್ದಾಗಲೇ ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್ ಅವರ 'ನೆಂಜಾಂಗಲ್' ಸಿನಿಮಾಗೆ ಬಣ್ಣ ಹಚ್ಚಿದರು. ಇದು ಮೀನಾ ಅವರ ಮೊದಲ ಸಿನಿಮಾ. ಇಲ್ಲಿಂದ 45 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ ಬಳಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಮತ್ತೆ ತಿರುಗಿ ನೋಡುವ ಗೋಜಿಗೆ ಹೋಗಲಿಲ್ಲ.

2009ರಲ್ಲಿ ಮೀನಾ, ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಆದರೆ, 2022ರಲ್ಲಿ ಅನಾರೋಗ್ಯದ ಕಾರಣದಿಂದ ಪತಿ ವಿದ್ಯಾಸಾಗರ್ ಹಠಾತ್ ನಿಧನರಾದರು. ಬಳಿಕ ಇವರ ಎರಡನೇ ಮದುವೆಯ ಬಗ್ಗೆ ಹಲವಾರು ಬಾರಿ ವದಂತಿಗಳು ಹಬ್ಬಿದ್ದವು. ಆದರೆ, ಮೀನಾ 2ನೇ ಮದುವೆ ಆಸಕ್ತಿ ತೋರಿಸಿಲ್ಲ. ಸದ್ಯ ಮಲಯಾಳಂನ 'ದೃಶ್ಯಂ 3' ಹಾಗೂ ತಮಿಳಿನ 'ರೌಡಿ ಬೇಬಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮೀನಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿವರಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಾರೆ. ತಮ್ಮ 50ನೇ ವಯಸ್ಸಿನಲ್ಲೂ ಯುವ ನಾಯಕಿಯರಿಗೆ ಸ್ಪರ್ಧೆ ನೀಡುತ್ತಿರುವ ಮೀನಾ ಇತ್ತೀಚೆಗೆ ಯುವಜನರಿಗೆ ಜೀವನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂದೇಶ ನೀಡಿದ್ದಾರೆ.

ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ಶ್ರೀರಾಮನವಮಿ ಶುಭಾಶಯ ಕೋರಿರೋ ಮೀನಾ ಯುವಜನರಿಗೆ ಜೀವನ ಸೂತ್ರಗಳನ್ನು ನೀಡಿದ್ದಾರೆ. "ನೀವು 45 ವರ್ಷ ವಯಸ್ಸಿನಲ್ಲಿ ನಾಯಕಿಯಾಗಬೇಕೆಂದರೆ, ಅದಕ್ಕೆ ತಯಾರಿಯನ್ನು 20ರ ಹರೆಯದಲ್ಲೇ ಪ್ರಾರಂಭಿಸಬೇಕು. 45ನೇ ವಯಸ್ಸಿನಲ್ಲೂ ಆರೋಗ್ಯವಾಗಿರಬೇಕೆಂದರೆ, 25ನೇ ವರ್ಷದಲ್ಲೇ ಶುರು ಮಾಡಬೇಕು. 45ನೇ ವಯಸ್ಸಿಗೆ ಹುಟ್ಟಿಕೊಳ್ಳುವ ಪಶ್ಚಾತ್ತಾಪ 20ನೇ ವಯಸ್ಸಿನಲ್ಲಿಯೇ ಶುರುವಾಗುತ್ತದೆ. 45ನೇ ವಯಸ್ಸಿನಲ್ಲಿ ದಿವಾಳಿಯಾಗುವುದು 25ನೇ ವಯಸ್ಸಿನಲ್ಲಿಯೇ ಆರಂಭವಾಗುತ್ತದೆ. ನಿಮ್ಮ ಭವಿಷ್ಯವು ಆ ನಂತರ ರೂಪುಗೊಳ್ಳುವುದಿಲ್ಲ. ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಆಯ್ಕೆಗಳೇ ನಿಮ್ಮ ಭವಿಷ್ಯವನ್ನು ನಿರ್ಮಿಸುತ್ತವೆ." ಎಂದು ನಟಿ ಮೀನಾ ಸಂದೇಶ ನೀಡಿದ್ದಾರೆ.

ನಟಿ ಮೀನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನೀಡಿದ ಈ ಸಂದೇಶವನ್ನು ಸದ್ಯಕ್ಕೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ. ನೆಟಿಜನ್ಸ್ ಈ ಕುರಿತು ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

More from Filmibeat

English summary
Actress Meena said if want to become hero at 45 you star at the age of 20 post is trending.
Read more about: meena actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X