ಡಾಲಿ ಜೊತೆ ನಟಿಸುತ್ತಿರುವ ನಟಿ ಪಾಯಲ್ ರಜಪೂತ್ ಹಾಟ್ ವಿಡಿಯೋ ಶೇರ್ ಮಾಡಿ ಡಿಲೀಟ್ ಮಾಡಿದ್ದೇಕೆ?

ಗ್ಲಾಮರ್ ಲೋಕ ಅಂದಮೇಲೆ ನಟಿಯರು ಹಾಟ್ ಆಗಿ ಕಾಣಿಸಿಕೊಳ್ಳಬೇಕು. ಚಂದ ಚಂದದ ಕಾಸ್ಟ್ಯೂಮ್ ತೊಟ್ಟು ಹುಡುಗರ ಕಣ್ಣಿಗೆ ಕುಕ್ಕಬೇಕು. ಸದಾ ಕ್ಯಾಮರಾ ಮುಂದೆ ಬರಬೇಕು. ನಾನಾ ರೀತಿ ಪೋಸ್ ಕೊಡಬೇಕು. ಇದು ಪ್ರತಿಯೊಬ್ಬ ನಟಿಯರು ತಮ್ಮದೇ ಸ್ಟೈಲ್‌ನಲ್ಲಿ ಆಗಾಗ ಮಾಡುತ್ತಲೇ ಇರುತ್ತಾರೆ. ಆದರೆ, ಕೆಲವೊಮ್ಮೆ ಹಾಟ್ ಲುಕ್ ಕೊಡಲು ಹೋಗಿ ಪೇಚಿಗೆ ಸಿಕ್ಕಿಕೊಂಡ ಉದಾಹರಣೆಗಳೂ ಇವೆ. ಇಂತಹ ನಟಿಯರಲ್ಲಿ ಪಂಜಾಬಿ ಪಾಯಲ್ ರಜಪೂತ್ ಕೂಡ ಒಬ್ಬರು.

ಪಂಜಾಬಿ ಬೆಡಗಿ ಪಾಯಲ್ ರಜಪೂತ್ ಹಾಟ್ ಫೋಟೊ ಶೂಟ್ ಮಾಡಿಸುವುದರಲ್ಲಿ ಫೇಮಸ್. ಹಾಗಂತ ಕೇವಲ ಫೋಟೊ ಶೂಟ್ ಅಷ್ಟೇ ಅಲ್ಲ. ಸಿನಿಮಾಗಳಲ್ಲೂ ಬೋಲ್ಡ್ ಅವತಾರಗಳಲ್ಲಿ ಕಂಡಿದ್ದಾರೆ. ತೆಲುಗಿನ ಆರ್‌ಎಕ್ಸ್ 100 ಸಿನಿಮಾ ನೋಡಿದವರಿಗೆ ಪಾಯಲ್ ರಜಪೂತ್ ಬೋಲ್ಡ್ ಲುಕ್ ಹೇಗಿದೆ ಅನ್ನುವುದು ಗೊತ್ತಿರುತ್ತೆ. ಇದೇ ನಟಿಯೀಗ ಕನ್ನಡ ಸಿನಿಮಾದಲ್ಲಿ ಡಾಲಿ ಜೊತೆ ನಟಿಸುತ್ತಿದ್ದಾರೆ. ಈಗ್ಯಾಕೆ ಇವರ ಬಗ್ಗೆ ಮಾತು ಅಂದರೆ, ಪಾಯಲ್ ರಜಪೂತ್ ಒಂದು ಹಾಟ್ ವಿಡಿಯೋ ಶೇರ್ ದಿಢೀರನೇ ಡಿಲೀಟ್ ಮಾಡಿದ್ದಾರೆ. ಅದ್ಯಾಕೆ ಅಂತ ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.

ಪಾಯಲ್ ಬೋಲ್ಡ್ ವಿಡಿಯೋ ಶೇರ್ ಮಾಡಿ ಡಿಲೀಟ್

ಪಾಯಲ್ ಬೋಲ್ಡ್ ವಿಡಿಯೋ ಶೇರ್ ಮಾಡಿ ಡಿಲೀಟ್

ಪಂಜಾಬಿ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ ಪಾಯಲ್ ರಜಪೂತ್ ಇಂದು(ನವೆಂಬರ್ 29) ಪೋಟೊ ಶೂಟ್ ಮಾಡಿಸಿದ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಹಳದಿ ಕೋಟ್ ತೊಟ್ಟ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಲು ಶುರುವಾಗಿತ್ತು. ನಟಿಯರ ಬೋಲ್ಡ್ ಅವತಾರಕ್ಕೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ವೈರಲ್ ಆಗುತ್ತಿದ್ದಂತೆ ಪಾಯಲ್ ರಜಪೂತ್ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕಿದ್ದರು. ಅದೇ ಯಾಕೆ ತೆಗೆದು ಹಾಕಿದ್ದರು ಅನ್ನುವುದು ಈಗ ಚರ್ಚೆಯಾಗುತ್ತಿದೆ.

ಹಳದಿ ಬ್ಲೇಜರ್ ಶಾರ್ಟ್ಸ್ ಬಿಟ್ಟರೆ ಬೇರೆನೂ ಹಾಕಿರಲಿಲ್ಲ ಪಾಯಲ್

ಹಳದಿ ಬ್ಲೇಜರ್ ಶಾರ್ಟ್ಸ್ ಬಿಟ್ಟರೆ ಬೇರೆನೂ ಹಾಕಿರಲಿಲ್ಲ ಪಾಯಲ್

ಹೌದು.. ಪಾಯಲ್ ರಜಪೂತ್ ಫೋಟೊಶೂಟ್ ವೇಳೆ ಹಳದಿ ಬ್ಲೇಜರ್ ಹಾಗೂ ಶಾರ್ಟ್ಸ್ ತೊಟ್ಟಿದ್ದರು. ದೇಹದ ಮೇಲ್ಬಾಗ ಕೇವಲ ಬ್ಲೇಜರ್ ತೊಟ್ಟು ಕ್ಯಾಮರಾಗೆ ಹಾಟ್ ಲುಕ್ ಕೊಟ್ಟಿದ್ದ ನಟಿ, ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದರು. ಆದರೆ, ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಗೆದು ಹಾಕಿದ್ದಾರೆ. ಈ ಹಾಟ್ ವಿಡಿಯೋ ಮುಂದೆ ಟ್ರೋಲ್ ಆಗಹುದು ಅನ್ನುವ ಕಾರಣಕ್ಕೆ ತಕ್ಷಣವೇ ತೆಗೆದು ಹಾಕಿದ್ದಾರೆ ಎನ್ನುತ್ತಿದೆ ಟಾಲಿವುಡ್.

ಡಿಲೀಟ್ ಮಾಡುವ ಮುನ್ನವೇ ವಿಡಿಯೋ ವೈರಲ್

ಪಾಯಲ್ ರಜಪೂತ್ ಅದೆಷ್ಟೇ ಬೇಗ ವಿಡಿಯೋ ಡಿಲೀಟ್ ಮಾಡಿದ್ದರೂ, ಬೇರೆ ಪೇಜ್‌ಗಳಲ್ಲಿ ಶೇರ್ ಆಗುವುದನ್ನು ತಡೆಯೋಕೆ ಸಾಧ್ಯವಾಗಿಲ್ಲ. ಡಿಲೀಟ್ ಮಾಡುವುದರೊಳಗಾಗಿ ಸಾಕಷ್ಟು ಪೇಜ್‌ಗಳಲ್ಲಿ ಶೇರ್ ಆಗಿತ್ತು. ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್ ಸೌರವ್ ಡಿಂಗ್ರಾ ಜೊತೆ ಹಾಟ್ ಅವತಾರದಲ್ಲಿ ಫೋಟೊಶೂಟ್ ಮಾಡಿಸಿದ್ದರು. ಸೌರಬ್ ತನ್ನ ನಟಿ ಪಾಯಲ್ ಬಟ್ಟೆಯೊಳಗೆ ಕೈ ಹಾಕಿದ ಫೋಟೊ ಕಂಡು ನೆಟ್ಟಿಗರು ಚಿತ್ರವಿಚಿತ್ರ ಕಮೆಂಟ್ ಮಾಡಿದ್ದರು. ಹೀಗಾಗಿ ಬೆದರಿದ ಪಾಯಲ್ ತಕ್ಷಣವೇ ಈ ವಿಡಿಯೋ ತೆಗೆದು ಹಾಕಿದ್ದಾರೆ.

ಹೆಡ್ ಬುಶ್ ಸಿನಿಮಾದಲ್ಲಿ ಪಾಯಲ್

ಹೆಡ್ ಬುಶ್ ಸಿನಿಮಾದಲ್ಲಿ ಪಾಯಲ್

ಪಾಯಲ್ ಡಾಲಿ ಧನಂಜಯ್ ನಟಿಸುತ್ತಿರುವ ಹೆಡ್ ಬುಶ್ ಸಿನಿಮಾದಲ್ಲಿ ನಟಿಸುತ್ತಿದ್ದು, ಪಂಜಾಬಿ, ತೆಲುಗು, ತಮಿಳು ಬಳಿಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹೆಡ್ ಬುಶ್ ಸಿನಿಮಾ ಈ ಹಾಟ್ ನಟಿಯ ಅವತಾರ ಹೇಗಿರುತ್ತೆ ಅನ್ನುವುದನ್ನು ನೋಡಲು ಪಡ್ಡೆ ಹುಡುಗರು ಕಾದು ಕೂತಿದ್ದಾರೆ.

More from Filmibeat

English summary
Actress Payal Rajput created a flutter when she posted a video this morning. The video went viral within minutes. And she quickly removed it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X