ದುಲ್ಖರ್ ಸಲ್ಮಾನ್ ಸಿನಿಮಾಗೆ ಬುಟ್ಟಬೊಮ್ಮ ಎಂಟ್ರಿ; ಟಾಲಿವುಡ್‌ಗೆ ಮತ್ತೆ ಬಂದ ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಬಾಲಿವುಡ್ ಕಡೆಗೆ ಪಯಣ ಬೆಳೆಸಿದ್ದರು. ಅಲ್ಲಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಸುಲ್ಮಾನ್ ಖಾನ್‌ರಿಂದ ಹಿಡಿದು ಸೂಪರ್‌ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಹೀಗಾಗಿ ದಕ್ಷಿಣ ಭಾರತದ ಸಿನಿಮಾಗಳಿಂದ ಸ್ವಲ್ಪ ದೂರವಿದ್ದರು.
ಈಗ ಮತ್ತೆ ತೆಲುಗು ಚಿತ್ರರಂಗದ ಕಡೆಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ್ದ 'ಕೂಲಿ' ಸಿನಿಮಾದ ಮೋನಿಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ಸೂಪರ್ ಹಿಟ್ ಆಗಿತ್ತು. ಪೂಜಾ ಹೆಗ್ಡೆ ಸ್ಟೆಪ್ಸ್‌ಗೆ ಅಭಿಮಾನಿಗಳು ಕರಗಿ ನೀರಾಗಿದ್ದರು. ಇದರ ಬೆನ್ನಲ್ಲೇ ಪೂಜಾ ಹೆಗ್ಡೆ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದು ತೆಲುಗು ಸಿನಿಮಾ ಅನ್ನೋದು ವಿಶೇಷ.

SLV ಸಿನಿಮಾಸ್ ತಮ್ಮ ಮುಂದಿನ ಸಿನಿಮಾವನ್ನು ಮಲಯಾಳಂ ನಟ ದುಲ್ಖರ್ ಸಲ್ಮಾನ್‌ಗೆ ನಿರ್ಮಾಣ ಮಾಡುತ್ತಿದೆ. ತನ್ನ ಎಕ್ಸ್ ಖಾತೆಯಲ್ಲಿ DQ41 ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. SLV ಸಿನಿಮಾಸ್ ತಮ್ಮ X ಖಾತೆಯಲ್ಲಿ ಒಂದು ಮೇಕಿಂಗ್ ವಿಡಿಯೋವನ್ನು ಶೇರ್ ಮಾಡಿದ್ದು ಪೂಜಾ ಹೆಗ್ಡೆಗೆ ಸ್ವಾಗತ ಕೋರಿದೆ.
ಈ ಮೇಕಿಂಗ್ ವಿಡಿಯೋದಲ್ಲಿ ದುಲ್ಖರ್ ಸಲ್ಮಾನ್, ಪೂಜಾ ಹೆಗ್ಡೆ ಹಾಗೂ ಚಿತ್ರತಂಡ ಕೆಲವು ದೃಶ್ಯಗಳನ್ನು ಶೂಟಿಂಗ್ ಮಾಡುತ್ತಿರುವ ಝಲಕ್ ಅನ್ನು ತೋರಿಸಲಾಗಿದ್ದು, ಪೂಜಾ ಹೆಗ್ಡೆ DQ41 ಸಿನಿಮಾದ ನಾಯಕಿಯೆಂದು ಚಿತ್ರತಂಡ ಕನ್ಫರ್ಮ್ ಮಾಡಿದೆ.
'ಎಕ್ಸ್' ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, "DQ41 ಚಿತ್ರಕ್ಕೆ ಪೂಜಾ ಹೆಗ್ಡೆಯವರನ್ನು ಸ್ವಾಗತಿಸುತ್ತಿದ್ದೇವೆ. ದುಲ್ಕರ್ ಮತ್ತು ಪೂಜಾ ಹೆಗ್ಡೆ ಕೆಮಿಸ್ಟ್ರಿ ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲಿದೆ. #SLVC10 ರಲ್ಲಿ ದುಲ್ಕರ್ ಸಲ್ಮಾನ್ ನಟಿಸುತ್ತಿದ್ದು, ರವಿ ನೆಲಕುಡಿಟಿ ನಿರ್ದೇಶಿಸಲಿದ್ದಾರೆ. ಸುಧಾಕರ್ ಚೆರುಕುರಿ ಅವರು SLV ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. GV ಪ್ರಕಾಶ್ ಸಂಗೀತ ನೀಡಿದ್ದು, ಅನಯ್ ಓಂ ಗೋಸ್ವಾಮಿ ಛಾಯಾಗ್ರಹಣವಿದೆ. ಅಲ್ಲದೆ, ಕೊಲ್ಲಾ ಚಿತ್ರದ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ." ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಮಲಯಾಳಂ ನಟ ದುಲ್ಖರ್ ಸಲ್ಮಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ DQ41 ಪ್ರಾಜೆಕ್ಟ್ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇತ್ತೀಚೆಗೆ ಪೂಜಾ ಹೆಗ್ಡೆ ನಡಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ ನಿರಂತರವಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಸಿನಿಮಾ ಪೂಜಾಗೆ ಮತ್ತೊಮ್ಮೆ ಗೆಲುವಿನ ದಡ ಸೇರಿಸುತ್ತಾ? ಅನ್ನೋದನ್ನು ನೋಡಬೇಕಿದೆ.
ಪೂಜಾ ಹೆಗ್ಡೆ ಈ ಟೀಕೆಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುನ್ನುಗುತ್ತಿದ್ದಾರೆ. ಇತ್ತ ದುಲ್ಖರ್ ಸಲ್ಮಾನ್ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ತೆಲುಗಿನ್ಲಲೇ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಸಿಕ್ಕಿವೆ. ಇತ್ತೀಚೆಗೆ ತಮಿಳಿನಲ್ಲಿ 'ಕಾಂತ' ಸಿನಿಮಾ ರಿಲೀಸ್ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೂ ಮುನ್ನ ತೆಲುಗಿನಲ್ಲಿ ರಿಲೀಸ್ ಆಗಿದ್ದ 'ಲಕ್ಕಿ ಭಾಸ್ಕರ್' ಸೂಪರ್ ಹಿಟ್ ಆಗಿತ್ತು. ಈ ಇನ್ನೂ ಹೆಸರಿಡದ DQ41 ಸೆಟ್ಟೇರಿದೆ.


Click it and Unblock the Notifications











