5 ವರ್ಷಗಳಲ್ಲಿ ನಟಿಸಿದ್ದು 11 ಚಿತ್ರಗಳಲ್ಲಿ ನಟನೆ; ಪ್ರೀತಿಗಾಗಿ 22 ವರ್ಷಕ್ಕೆ ಪ್ರಾಣ ಬಿಟ್ಟ ಈ ನಾಯಕಿ ಯಾರು?

ಚಿತ್ರರಂಗವೇ ಹಾಗೇ, ಇಲ್ಲಿಗೆ ದೊಡ್ಡ ಕನಸುಗಳನ್ನು ಹೊತ್ತು ಬಂದವರು ಕೊನೆಯಲ್ಲಿ ದುರಂತ ಅಂತ್ಯ ಕಂಡ ಸಾಕಷ್ಟು ಉದಾಹರಣೆಗಳಿವೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಸಾಕಷ್ಟು ನಿದರ್ಶನಗಳಿವೆ. ಅದರಲ್ಲೂ ಹೀರೋಯಿನ್‌ಗಳಾಗಿ ಮಿಂಚಿ ಇನ್ನೇನು ಸ್ಟಾರ್ ಪಟ್ಟಕ್ಕೆ ಏರಬೇಕು ಎನ್ನುವಷ್ಟರಲ್ಲಿ ಅವರ ಬಾಳಿನಲ್ಲಿ ದುರಂತ ನಡೆದು ಹೋಗಿದೆ. ಅವರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದು ಇದೆ.

ಈ ಹೇಳುವುದಕ್ಕೆ ಹೊರಟಿರುವುದು ಇಂತಹ ಕಥೆಯನ್ನೇ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಎಲ್ಲಾ ಲಕ್ಷಣಗಳು ಇದ್ದವು. ತೆಲುಗು ಹಾಗೂ ತಮಿಳು ಎರಡು ಪ್ರಮುಖ ಚಿತ್ರರಂಗಗಳಲ್ಲಿ ಈ ನಟಿ ನಟಿಸುತ್ತಿದ್ದರು. ಇವರ ನಟನೆಗೆ ಸಿನಿಪ್ರಿಯರು ಕೂಡ ಫಿದಾ ಆಗಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟಿ ಕೇವಲ ಐದು ವರ್ಷಗಳಲ್ಲಿ ಇಹಲೋಕವನ್ನೇ ತ್ಯಜಿಸಿಬಿಟ್ಟರು.

Actress Prathyusha tragedy who did 11 movies in 5 years and died at the age of 22

ಪ್ರತ್ಯುಷಾ ತೆಲುಗು ಮೂಲದ ನಟಿ. ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ತೆಲಂಗಾಣದ ಭುವನಗಿರಿ ಮೂಲದವರಾದ ಇವರು ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದಂತೆ ಅಮ್ಮನೊಂದಿಗೆ ಹೈದರಾಬಾದ್‌ಗೆ ಬಂದು ಬಿಟ್ಟರು. ಆರಂಭದಲ್ಲಿ ಪ್ರತ್ಯುಷಾ ಟಿವಿ ಕಾರ್ಯಕ್ರಮಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಇಲ್ಲಿಂದ ಅವರಿಗೆ ಸಿನಿಮಾದಲ್ಲಿ ಬೇಡಿಕೆಗಳು ಬರುವುದಕ್ಕೆ ಶುರುವಾಗಿದ್ದವು.

ತೆಲುಗು ನಟಿ ಪ್ರತ್ಯುಷಾ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಮಿಸ್ ಲವ್ಲಿ ಸ್ಮೈಲ್ ಎಂಬ ಬಿರುದು ದೊರಕಿತ್ತು. ಇದೇ ಅವರನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡುವಂತೆ ಮಾಡಿತ್ತು. ಪ್ರತ್ಯುಷಾ 98ರಲ್ಲಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟೇ ಬಿಟ್ಟರು. ಆಗ ಅವರಿಗೆ ಕೇವಲ 18 ವರ್ಷ ವಯಸ್ಸು ಆಗಿತ್ತಷ್ಟೇ. ಮೋಹನ್‌ ಬಾಬು ನಟಿಸಿದ್ದ 'ರಾಯುಡು' ಸಿನಿಮಾ ಪ್ರತ್ಯುಷಾ ನಟಿಸಿದ ಚೊಚ್ಚಲ ಸಿನಿಮಾ. ಇದರಲ್ಲಿ ತೆಲುಗು ಚಿತ್ರರಂಗದ ದಿಗ್ಗಜ ಮೋಹನ್ ಬಾಬು ಅವರ ಮಗಳಾಗಿ ನಟಿಸಿದ್ದರು.

ಮೋಹನ್ ಬಾಬು ಮಗಳಾಗಿ ನಟಿಸಿದ್ದಕ್ಕೆ ಅವರಿಗೆ ಪ್ರಶಂಸೆ ಸಿಕ್ಕಿತ್ತು. ಅಷ್ಟೊತ್ತಿಗಾಗಲೇ ಪ್ರತ್ಯುಷಾ ಬಗ್ಗೆ ಟಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನೇನು 'ರಾಯುಡು' ರಿಲೀಸ್ ಆಗಬೇಕು. ಅಷ್ಟರಲ್ಲೇ ಇನ್ನೂ ಎರಡೂ ಸಿನಿಮಾಗಳಿಗೆ ಒಪ್ಪಿಗೆಯನ್ನು ಕೊಟ್ಟಿದ್ದರು. ಇಲ್ಲಿಂದ ಪ್ರತ್ಯುಷಾಗೆ ಅವಕಾಶ ಒಂದೊಂದಾಗೇ ಬರುವುದಕ್ಕೆ ಶುರುವಾಗಿದ್ದವು. ಐದು ವರ್ಷಗಳ ಅವರ ಸಿನಿಮಾ ಕರಿಯರ್‌ನಲ್ಲಿ 11 ಸಿನಿಮಾಗಳಲ್ಲಿ ನಟಿಸಿದ್ದರು. ನಟಿಸಿದ್ದು ಕಡಿಮೆ ಸಿನಿಮಾಗಳಾಗಿದ್ದರೂ, ಒಳ್ಳೆಯ ಹೆಸರು ಮಾಡಿದ್ದರು.

Actress Prathyusha tragedy who did 11 movies in 5 years and died at the age of 22

ಪ್ರತ್ಯುಷಾಗೆ ಸಿನಿಮಾರಂಗದಲ್ಲಿ ಒಳ್ಳೆಯ ಹೆಸರು ಬಂದಿತ್ತು. ಆದರೆ, ಅದನ್ನು ಅನುಭವಿಸುವ ಅದೃಷ್ಟವಿರಲ್ಲಿಲ್ಲ. 2002ರಲ್ಲಿ ಪ್ರತ್ಯುಷಾ ಆತ್ಮಹತ್ಯೆ ಎಂಬ ಸುದ್ದಿ ಶಾಕ್ ಕೊಟ್ಟಿತ್ತು. ವಿಷಾ ಸೇವಿಸಿ ಸಾವನ್ನಪ್ಪಿದ್ದಾರೆಂದು ಸುದ್ದಿ ಹಬ್ಬಿತ್ತು. ಸಿದ್ದಾರ್ಥ್ ರೆಡ್ಡಿ ಎಂಬುವವರನ್ನು ಪ್ರತ್ಯುಷಾ ಪ್ರೀತಿಸುತ್ತಿದ್ದರು. ಆದರೆ, ಅವರ ಮನೆಯಲ್ಲಿ ಒಪ್ಪಲಿಲ್ಲವೆಂದು ಪ್ರತ್ಯುಷಾ ಹಾಗೂ ಸಿದ್ದಾರ್ಥ್ ವಿಷ ಸೇವಿಸಿದ್ದರು ಎಂದು ವರದಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪ್ರತ್ಯುಷಾ ಬದುಕುಳಿಯಲಿಲ್ಲ. ಆಕೆಯ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಬದುಕುಳಿದಿದ್ದರು.

ಆದರೆ, ತನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪ್ರತ್ಯುಷಾ ತಾಯಿ ಸರೋಜಿನಿ ದೇವಿ ಗಂಭೀರ ಆರೋಪ ಮಾಡಿದ್ದರು. ಇನ್ನೊಂದು ಕಡೆ ಮರಣೋತ್ತರ ಪರೀಕ್ಷೆ ಮಾಡಿದ್ದ ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಮುನಿಸ್ವಾಮಿ ನೀಡಿದ ವರದಿಯಲ್ಲೂ ಲೈಂಗಿಕ ಹಿಂಸೆ ಹಾಗೂ ಕತ್ತು ಹಿಸುಕಿರುವುದರಿಂದ ಹತ್ಯೆ ನಡೆದಿದೆ ಎಂದು ಹೇಳಿದ್ದರು. ಆದರೆ, ಅವರ ವರದಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಈ ಕೇಸ್ ನಿಲ್ಲಲಿಲ್ಲ.

More from Filmibeat

English summary
Actress Prathyusha tragedy who did 11 movies in 5 years and died at the age of 22.
Read more about: actress death tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X