ವೇದಿಕೆ ಮೇಲೆ ಗಂಡಸರಿಗೆ ಕ್ಷಮೆ ಕೇಳಿದ ಪ್ರಿಯಾಮಣಿ; ಅಷ್ಟಕ್ಕೂ ಸಾರಿ ಕೇಳುವಂತಹದ್ದೇನಾಯ್ತು?
ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ಬಳಿಕ ಸುಮ್ಮನೆ ಕೂತಿಲ್ಲ. ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 'ಫ್ಯಾಮಿಲಿ ಮ್ಯಾನ್' ಸೀರಿಸ್ ಬಳಿಕ ಓಟಿಟಿಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ವೆಬ್ ಸೀರಿಸ್‌ಗಳಲ್ಲಿ ಪ್ರತ್ಯಕ್ಷ ಆಗುತ್ತಾರೆ. ಇಲ್ಲವೇ ನಟಿಸಿದ ಸಿನಿಮಾಗಳು ಓಟಿಟಿಯಲ್ಲಿ ಸಿಗುತ್ತವೆ. ಸದ್ಯಕ್ಕಂತೂ ಪ್ರಿಯಾಮಣಿ ಸೆಕೆಂಡ್ ಇನ್ನಿಂಗ್ಸ್ ಸಖತ್ ಆಗಿದೆ ಅಂತಲೇ ಹೇಳಬಹುದು.
ಇತ್ತೀಚೆಗೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಆಫರ್‌ಗಳು ಪ್ರಿಯಾಮಣಿಯನ್ನು ಹುಡುಕಿಕೊಂಡು ಬರುತ್ತಿವೆ. 2022ರಲ್ಲಿ ತೆರೆಕಂಡಿದ್ದ ಪ್ರಿಯಾಮಣಿಯ 'ಭಾಮಾಕಲಾಪಂ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈಗ ಈ ಸಿನಿಮಾದ ಸೀಕ್ವೆಲ್ 'ಭಾಮಾಕಲಾಪಂ 2' ರಿಲೀಸ್‌ಗೆ ರೆಡಿಯಾಗಿದೆ.

'ಭಾಮಾ ಕಲಾಪಂ 2' ಸಿನಿಮಾದ ಟ್ರೈಲರ್ ಅನ್ನು ಇತ್ತೀಚೆಗೆ ರಿಲೀಸ್ ಮಾಡಲಾಗಿದೆ. ಈ ವೇಳೆ ವೇದಿಕೆ ಮೇಲೆ ಬಹಳ ದಿನಗಳ ಬಳಿಕ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಅಭಿಮನ್ಯು ನಿರ್ದೇಶಿಸಿದ 'ಭಾಮಾ ಕಲಾಪಂ 2' ಟ್ರೈಲರ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಆದರೆ, ಖುಷಿ ಖುಷಿಯಾಗಿದ್ದ ಪ್ರಿಯಾಮಣಿ ಮೈಕ್ ಹಿಡಿದು ನಿಂತಾಗ, ಎಲ್ಲಾ ಗಂಡಸರಿಗೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದು, ಅಚ್ಚರಿ ಹುಟ್ಟಿಸಿತ್ತು.
ನಟಿ ಪ್ರಿಯಾಮಣಿ ವೇದಿಕೆ ಮೇಲೆ ಹತ್ತುತ್ತಿದ್ದಂತೆ ನಿರೂಪಕಿ 'ಗೋಲಿಮಾರ್' ಸಿನಿಮಾದ "ಮಗಲ್ಲು ಉತ್ತಿ ಮಾಯಗಳಲ್ಲೇ" ಹಾಡನ್ನು ಹಾಡುವಂತೆ ಬೇಡಿಕೆ ಇಟ್ಟಿದ್ದರು. ತಕ್ಷಣವೇ ಪ್ರಿಯಾಮಣಿ ಎಲ್ಲಾ ಪುರುಷರಿಗೂ ಕ್ಷಮೆ ಕೇಳಿ, ಬೇಡಿಕೆ ಹೆಚ್ಚಿದ್ದರಿಂದ ಈ ಹಾಡನ್ನು ಹಾಡುತ್ತಿದ್ದೇನೆ ಎಂದು ಹೇಳಿತ್ತಾ ಹಾಡಿದ್ದರು. ಅಷ್ಟಕ್ಕೂ ಪ್ರಿಯಾಮಣಿ ಯಾಕೆ ಕ್ಷಮೆ ಹೇಳಿದ್ರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..

ಗೋಪಿಚಂದ್ ಹಾಗೂ ಪ್ರಿಯಾಮಣಿ ನಟಿಸಿದ 'ಗೋಲಿಮಾರ್' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಈ ಹಾಡು ತುಂಬಾನೇ ಫೇಮಸ್ ಆಗಿತ್ತು. ಪ್ರಿಯಾಮಣಿ ನೋಡಿದಾಗಲೆಲ್ಲಾ ತೆಲುಗು ಮಂದಿಗೆ ಈ ಹಾಡು ನೆನೆಪಾಗುತ್ತೆ. ಈ ಸಾಂಗ್‌ನಲ್ಲಿ ನಟಿ ಗಂಡಸರೆಲ್ಲರೂ ಮೋಸಗಾರರು ಎಂದು ಹಾಡಿದ್ದರು. ಅದಕ್ಕೆ ಹಾಡು ಹಾಡುವುದಕ್ಕೂ ಮುನ್ನ ಪ್ರಿಯಾಮಣಿ ಎಲ್ಲಾ ಗಂಡಸರಿಗೆ ಕ್ಷಮೆ ಕೇಳಿ ಆಮೇಲೆ ಹಾಡಿದ್ದಾರೆ.
ಇನ್ನು ಪ್ರಿಯಾಮಣಿಯ ಹೊಸ ಸಿನಿಮಾ 'ಭಾಮಾ ಕಲಾಪಂ 2' ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ಸಿನಿಮಾಗಳನ್ನು ಎಕ್ಸ್‌ಕ್ಲೂಸಿವ್ ಆಗಿ ರಿಲೀಸ್ ಮಾಡುವ 'ಆಹಾ'ದಲ್ಲಿ ಈ ಸಿನಿಮಾ ಫೆಬ್ರವರಿ 16ರಂದು ಸ್ಟ್ರೀಮಿಂಗ್ ಆಗಲಿದೆ. ಕ್ರೈಂ ಸ್ಟೋರಿಗೆ ಹಾಸ್ಯದ ಟಚ್ ಕೊಟ್ಟು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಮೊದಲ ಚಾಪ್ಟರ್ ಗೆದ್ದಂತೆ, ಎರಡನೇ ಚಾಪ್ಟರ್ ಕೂಡ ವೀಕ್ಷಕರ ಮನಸ್ಸು ಗೆಲ್ಲಬಹುದೆಂಬ ನಿರೀಕ್ಷೆಯಿದೆ.
'ಭಾಮಾ ಕಲಾಪಂ 2'ನಲ್ಲಿ ಪ್ರಿಯಾಮಣಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಗಾಸಿಪ್ ಪ್ರಿಯೆಯಾಗಿರುವ ಅನುಪಮಾ (ಪ್ರಿಯಾಮಣಿ) ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಬೀಳುತ್ತಾರೆ. ಅದರಿಂದ ಅವರು ಹೇಗೆ ಹೊರಬರುತ್ತಾರೆ ಅನ್ನೋದೇ ಕಥೆ. ಸೀರತ್ ಕಪೂರ್, ಬ್ರಹ್ಮಾಜಿ, ರಘು ಮುಖರ್ಜಿ ಮುಂತಾದವರು ಪ್ರಿಯಾಮಣಿ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಶಾಂತ್ ವಿಹಾರಿ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.


Click it and Unblock the Notifications











