ಹೈದರಾಬಾದ್ ಡ್ರಗ್ಸ್ ಕೇಸ್: ರಕುಲ್ ಪ್ರೀತ್ ಸಿಂಗ್ ಸಹೋದರ ಬಂಧನ
ಹೈದರಾಬಾದ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಜನಪ್ರಿಯ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್‌ರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಅಮನ್ ಪ್ರೀತ್ ಸಿಂಗ್‌ರನ್ನು ಬಂಧಿಸಿದ್ದಾರೆ.
ತೆಲಂಗಾಣ ಆಂಟಿ ನಾರ್ಕೋಟಿಕ್ಸ್ ಬ್ಯೂರೋ, ಸೈಬರಾಬಾದ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಹಾಗೂ ರಾಜೇಂದ್ರ ನಗರ ಪೊಲೀಸರು ಐದು ಮಂದಿ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದರು. ಅದರಲ್ಲಿ ಇಬ್ಬರು ನೈಜೀರಿಯಾದವರು ಸೇರಿದ್ದಾರೆ. ನಗರದಲ್ಲಿರುವ ಹೈ ಪ್ರೋಫೈಲ್ ಕಸ್ಟಮರ್‌ಗಳಿಗೆ ಇವರು ಕೊಕೇನ್ ಅನ್ನು ಸಪ್ಲೈ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೇಸ್ 13 ಮಂದಿಯ ಡ್ರಗ್ ಸೇವನೆ ಮಾಡಿದವರನ್ನೂ ಬಂಧಿಸಲಾಗಿದೆ. ಅವರಲ್ಲಿ ಒಬ್ಬರು ನಟಿ ರಕುಲ್ ಪ್ರೀತ್ ಸಿಂಗ್ ಅವರ ಸಹೋದರ. ಅಮನ್ ಪ್ರೀತ್ ಸಿಂಗ್ ಡ್ರಗ್ ಸೇವನೆ ಮಾಡಿರುವುದು ಖಚಿತವಾದ ಬೆನ್ನಲ್ಲೇ ಬಂದಿಸಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಹೈದರಾಬಾದ್ ಪೊಲೀಸರು ಸುಮಾರು 35 ಲಕ್ಷ ರೂಪಾಯಿ ಬೆಲೆಯ 199 ಗ್ರಾಂ ಮಾದಕ ವಸ್ತು, 2 ಬೈಕ್, 2 ಪಾಸ್ಪೋರ್ಟ್ ಹಾಗೂ 10 ಮೊಬೈಲ್ ಫೋನ್ಗಳನ್ನು ಬಂಧಿತರಿಂದ ವಶ ಪಡಿಸಿಕೊಂಡಿದ್ದಾರೆ.
ಅಮನ್ ಪ್ರೀತ್ ಸಿಂಗ್ ಜೊತೆಗೆ ಅನಿಕೇತ್ ರೆಡ್ಡಿ, ಪ್ರಸಾದ್, ಮಧುಸೂಧನ್ ಮತ್ತು ನಿಖಿಲ್ ದಾಮನ್ ಈ ಐವರು ಡ್ರಗ್ಸ್ ಪೆಡ್ಲಿಂಗ್ ಕೇಸ್‌ನಲ್ಲಿ ಬಂಧಿತರಾಗಿರುವ ಪ್ರಮುಖರು. ನ್ಯಾಯಲಯಕ್ಕೆ ಒಪ್ಪಿಸಿದ ಬಳಿಕ ಇವರ ಜೊತೆಗೆ ಇನ್ನೂ ಯಾರದ್ದೆಲ್ಲ ನಂಟು ಇದೆ ಅನ್ನುವ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ. ಸದ್ಯ 30 ಮಂದಿಯನ್ನು ಈ ಡ್ರಗ್ ಕೇಸ್‌ನಲ್ಲಿ ಗುರುತಿಸಲಾಗಿದ್ದು, ಕೆಲವರು ತಲೆ ಮರೆಸಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಸಹೋದರನ ಹೆಸರು ಹೈದರಾಬಾದ್ ಡಗ್ಸ್ ಕೇಸ್‌ನಲ್ಲಿ ಕೇಳಿ ಬರುತ್ತಿದ್ದಂತೆ ತನಿಖೆ ಮತ್ತಷ್ಟು ಚುರುಕು ಗೊಂಡಿದೆ. ಇವರೊಂದಿಗೆ ಮತ್ಯಾರಾದರೂ ಪ್ರಭಾವಿ ವ್ಯಕ್ತಿಗಳು ಇದ್ದಾರಾ? ಅನ್ನೋದನ್ನು ಕೆದುಕಿ ತೆಗೆಯುವ ಸಾಧ್ಯತೆಯಿದೆ. ಸದ್ಯ ಡ್ರಗ್ಸ್ ಕೇಸ್‌ನಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

2021 ಹಾಗೂ 2022ರಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರ ಹೆಸರು ಕೂಡ ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಈ ಸಂಬಂಧ ರಕುಲ್ ಪ್ರೀತ್ ಸಿಂಗ್ ವಿಚಾರಣೆಗೂ ಹಾಜರಾಗಿದ್ದರು. ಡ್ರಗ್ಸ್ ಕೇಸ್ ವಿಚಾರವಾಗಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರುಕುಲ್ ಪ್ರೀತ್ ಸಿಂಗ್‌ರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದ್ರೀಗ ಅವರ ಸಹೋದರ ಹೆಸರು ಕೇಳಿ ಬಂದಿದೆ.
ಕಳೆದ ವರ್ಷ ಕೂಡ ತೆಲುಗು ಚಿತ್ರರಂಗದ ಜನಪ್ರಿಯರ ಕಲಾವಿದರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ರಾಣಾ ದಗ್ಗುಬಾಟಿ, ಚಾರ್ಮಿ ಕೌರ್, ನವ್‌ದೀಪ್, ರವಿತೇಜಾ ಹಾಗೂ ಪುರಿ ಜಗನ್ನಾಥ್ ಅವರನ್ನು ಕೂಡ ಪೊಲೀಸರು ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ದರು.


Click it and Unblock the Notifications











