"ಇಂಡಿಯನ್-2 ಸಿನಿಮಾ ಫ್ಲಾಪ್ ಆಗಿದ್ದಕ್ಕೆ ನಿಜಕ್ಕೂ ಸಂತೋಷವಾಗ್ತಿದೆ"; ರೇಣು ದೇಸಾಯಿ

ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟಿಸಿದ 'ಇಂಡಿಯನ್-2' ಸಿನಿಮಾ ಹೀನಾಯವಾಗಿ ಸೋತಿದೆ. ಓಟಿಟಿಯಲ್ಲಿ ಕೂಡ ಸಿನಿಮಾ ಸದ್ದು ಮಾಡಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಸೀಕ್ವೆಲ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಶಂಕರ್ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ 'ಇಂಡಿಯನ್-2' ಚಿತ್ರ ನಿರ್ಮಿಸಿತ್ತು. ಚಿತ್ರೀಕರಣ ಆರಂಭಿಸಿದ ದಿನದಿಂದಲೂ ಈ ಸಿನಿಮಾ ಒಂದಿಲ್ಲೊಂದು ಸಮಸ್ಯೆ ಎದುರಿಸಿತ್ತು. ಚಿತ್ರೀಕರಣದ ವೇಳೆ ದೊಡ್ಡ ಕ್ರೇನ್ ಕುಸಿದು ಬಿದ್ದು ಮೂವರು ಪ್ರಾಣ ಬಿಟ್ಟಿದ್ದರು. ಬಳಿಕ ಸಿನಿಮಾ ಶೂಟಿಂಗ್ ನಿಂತು ಹೋಗಿತ್ತು. ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಏನೇನೋ ಮಾಡಿ ಚಿತ್ರೀಕರಣ ಮುಗಿಸಿದ್ದರು.

actress Renu desai slams Kamal haasan starrer Indian-2 dialogues

28 ವರ್ಷಗಳ ಹಿಂದೆ ಬಂದಿದ್ದ 'ಇಂಡಿಯನ್' ಸಿನಿಮಾ ದಾಖಲೆ ಬರೆದಿತ್ತು. ಭ್ರಷ್ಟಾಚಾರದ ವಿರುದ್ಧ ಸೇನಾಪತಿ ಹೋರಾಟ ಹುಬ್ಬೇರಿಸಿತ್ತು. ಕಮಲ್ ಹಾಸನ್ ಅದ್ಭುತ ನಟನೆಯಿಂದ ಮೋಡಿ ಮಾಡಿದ್ದರು. ಸತತ ಸೋಲುಗಳಿಂದ ಕಂಗೆಟ್ಟ ಕಮಲ್- ಶಂಕರ್ ಜೋಡಿ ಇದೇ ಚಿತ್ರದ ಸೀಕ್ವೆಲ್ ಮಾಡಿ ಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸದ್ಯ ಈ ಸಿನಿಮಾ ಸೋಲಿನ ಬಗ್ಗೆ ತೆಲುಗು ನಟಿ ರೇಣು ದೇಸಾಯಿ ಪ್ರತಿಕ್ರಿಯಿಸಿದ್ದಾರೆ.

ಇದ್ದಕ್ಕಿದ್ದಂತೆ ಕಮಲ್ 'ಇಂಡಿಯನ್-2' ಸಿನಿಮಾ ಮೇಲೆ ಪವನ್ ಕಲ್ಯಾಣ್ ಮಾಜಿ ಪತ್ನಿ ಗರಂ ಆಗಿದ್ದಾರೆ. ಇಂತಹ ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಪೆಟ್ ಲವರ್ಸ್‌ಗೆ 'ಇಂಡಿಯನ್-2' ಸಿನಿಮಾ ಬೇಸರ ತರಿಸಿದೆ. ಅದೇ ಕಾರಣಕ್ಕೆ ಚಿತ್ರದ ಕೆಲ ಸಂಭಾಷಣೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

actress Renu desai slams Kamal haasan starrer Indian-2 dialogues

ನಟಿ ರೇಣು ದೇಸಾಯಿ ಕೂಡ ಪೆಟ್ ಲವರ್. ಆಕೆಗೆ ಪ್ರಾಣಿಗಳ ಬಗ್ಗೆ ಅಪಾರ ಕಾಳಜಿಯಿದೆ. ಬೀದಿ ನಾಯಿಗಳ ಆರೈಕೆ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಪ್ರಾಣಿಗಳ ಸಹಾಯಕ್ಕಾಗಿ ದೇಣಿಗೆ ನೀಡುವಂತೆ ಕೇಳಿದ್ದರು. ಸದ್ಯ 'ಇಂಡಿಯನ್-2' ಚಿತ್ರದ ಡೈಲಾಗ್ ವೀಡಿಯೋವೊಂದನ್ನು ನೋಡಿ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ವಿಲನ್ ನೋಡಿ ಕಮಲ್ ಹಾಸನ್ 'ಯು ಡರ್ಟಿ ಸ್ಟ್ರೀಟ್ ಡಾಗ್' ಎಂದು ಹೇಳುವ ಡೈಲಾಗ್ ಇದೆ. ಇನ್ನೊಂದು ಸನ್ನಿವೇಶದಲ್ಲಿ ಆ ನಾಯಿಯನ್ನು ಹೊಡೆದು ಓಡಿಸಿ ಎನ್ನುವ ಸಾಲುಗಳಿವೆ. ಇದರ ಬಗ್ಗೆಯೇ ಕೆಲ ಪ್ರಾಣಿಪ್ರೇಮಿಗಳು ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ರೇಣು ದೇಸಾಯಿ ಕಾಮೆಂಟ್ ಮಾಡಿ "ಇಂತಹ ಸಿನಿಮಾ ಫ್ಲಾಪ್‌ ಆಗಿದ್ದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ಈ ದಡ್ಡ ಬರಹಗಾರರಿಗೆ ಏನಾಗಿದೆ?" ಎಂದು ಬರೆದುಕೊಂಡಿದ್ದಾರೆ.

ಸೂಪರ್ ಹಿಟ್ 'ಇಂಡಿಯನ್' ಚಿತ್ರಕ್ಕೆ ಒಂದಲ್ಲ ಎರಡೂ ಸೀಕ್ವೆಲ್ ಮಾಡಲಾಗಿದೆ. ಇಂಡಿಯನ್-2 ಜೊತೆಗೆ ಪಾರ್ಟ್‌-3 ಚಿತ್ರೀಕರಣ ಕೂಡ ನಡೆದಿದೆ. ಮುಂದಿನ ವರ್ಷ 3ನೇ ಭಾಗ ತೆರೆಗೆ ಬರಲಿದೆ. ಪಾರ್ಟ್-2 ಇಷ್ಟು ಹೀನಾಯವಾಗಿ ಸೋತಿರುವುದು ನೋಡಿ ಮತ್ತೊಂದು ಪಾರ್ಟ್-3 ಯಾರು ನೋಡ್ತಾರೆ ಎನ್ನಲಾಗ್ತಿದೆ. ಇನ್ನು ಮುಂದಿನ ಭಾಗದಲ್ಲಿ ಕಾಜಲ್ ಅಗರ್‌ವಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಇಂಡಿಯನ್-2' ಚಿತ್ರದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿತ್ತು. ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದರಿಂದ ದೊಡ್ಡ ಮೊತ್ತಕ್ಕೆ ಓಟಿಟಿ ಡೀಲ್ ಕುದುರಿಸಲಾಗಿತ್ತು. ಪಾರ್ಟ್-3 ರೈಟ್ಸ್ ಕೂಡ ಸೇರಿಸಿ ಮಾರಾಟ ಮಾಡಲಾಗಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದ್ದರಿಂದ ನೆಟ್‌ಫ್ಲಿಕ್ಸ್ ಸಂಸ್ಥೆ ನಷ್ಟವಾಗುತ್ತದೆ ಎಂದು ಕ್ಯಾತೆ ತೆಗೆದಿತ್ತು. ಬಳಿಕ ಒಪ್ಪಂದದ ಮೊತ್ತವನ್ನು ಕಮ್ಮಿ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು.

More from Filmibeat

English summary
Renu desai shocking comments on kamal haasan indian-2 flop;
Read more about: kamal haasan renu desai telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X