ಇಷ್ಟೊಂದು ಹೋಲಿಕೆನಾ? ನಟಿ ರೋಜಾರನ್ನೇ ಹೋಲುವ ಪುತ್ರಿ ಅನ್ಶು; ಅಮ್ಮ-ಮಗಳ ಫೋಟೋ ವೈರಲ್

ನಟಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ದಕ್ಷಿಣ ಭಾರತದವರಿಗೆ ಚೆನ್ನಾಗಿಯೇ ಗೊತ್ತು. ಸಿನಿಮಾ ಪ್ರೇಮಿಗಳಿಗಂತೂ ರೋಜಾ ಇಂದಿಗೂ ಫೇವರಿಟ್ ನಟಿ. ರಾಜಕೀಯಕ್ಕೆ ಹೋದ ಮೇಲೆ ನಟನೆಯಿಂದ ಕೊಂಚ ದೂರು ಉಳಿದಿದ್ದಾರೆ. ಆದರೂ, ರಾಜಕೀಯ ಕ್ಷೇತ್ರದಲ್ಲೂ ಅದೇ ಚಾರ್ಮ್ ಅನ್ನು ಉಳಿಸಿಕೊಂಡಿದ್ದಾರೆ. ತಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ರೋಜಾ, ಈಗ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ.

ಸಿನಿಮಾ, ರಾಜಕೀಯ ಎಲ್ಲವಕ್ಕೂ ಸ್ವಲ್ಪ ದಿನ ಬ್ರೇಕ್ ಕೊಟ್ಟು ಕುಟುಂಬಕ್ಕೆ ಸಮಯ ಕೊಡುತ್ತಿದ್ದಾರೆ. ರೋಜಾ ಪುತ್ರಿ ಅನ್ಶು ಅಮೆರಿಕದಲ್ಲಿ ಶಿಕ್ಷಣವನ್ನು ಪಡೆದಿದ್ದರು. ಈಗ ಅವರ ಪದವಿ ಮುಗಿದಿದ್ದು, ಮಗಳ ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ರೋಜಾ ಹಾಗೂ ಅವರ ಪತ್ರಿ ಅನ್ಶು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ನೋಡಲು ಒಂದೇ ತರ ಇದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Actress Roja daughter Anushu looks like her mother recent pics Goes viral

ನಟಿ ರೋಜಾ ಹಾಗೂ ನಿರ್ದೇಶಕ ಸೆಲ್ವಮಣಿ ಅವರ ಪುತ್ರಿ ಅನ್ಶು ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು. ಅಲ್ಲಿನ ಪ್ರತಿಷ್ಠಿತ ಇಂಡಿಯಾನಾ ಯುನಿವರ್ಸಿಟಿಯಲ್ಲಿ ಪದವಿಯನ್ನು ಪಡೆದಿದ್ದಾರೆ. ಮಗಳು ಪದವಿ ಪಡೆದ ಖುಷಿಯಲ್ಲಿ ಇರುವ ನಟಿ ರೋಜಾ ಪತಿಯೊಂದಿಗೆ ಅಮೆರಿಕಗೆ ತೆರಳಿದ್ದರು. ಅಲ್ಲಿ ಮಗಳ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ರೋಜಾ ಪುತ್ರಿ ಸುಮ್ಮನೆ ಪದವಿಯನ್ನು ಪೂರೈಸಿಲ್ಲ. ಇಂಡಿಯಾನ ಯುನಿವರ್ಸಿಟಿಯಲ್ಲಿ ಹೈ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಫೋಟೊಗಳನ್ನು ನಟಿ ರೋಜಾ ಸೆಲ್ವಮಣಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮಗಳು ಯಶಸ್ವಿಯಾಗಿ ಪದವಿ ಪೂರೈಸಿ ತಮ್ಮ ಕುಟುಂಬಕ್ಕೆ ಹೆಮ್ಮ ತಂದಿದ್ದಕ್ಕೆ ರೋಜಾ ಥ್ರಿಲ್ ಆಗಿದ್ದಾರೆ. "ತಾಯಂದಿರ ದಿನಕ್ಕೆ ಇದಕ್ಕಿಂತ ದೊಡ್ಡ ಉಡುಗೊರೆ ಸಿಗಲು ಸಾಧ್ಯವೇ ಇಲ್ಲ" ಎಂದು ನಟಿ ರೋಜಾ ಸಂತಸದಿಂದ ಬರೆದು ಶೇರ್ ಮಾಡಿದ್ದಾರೆ.

Also Read
'ಬಾಹುಬಲಿ' ವಿರುದ್ಧ ಬಲ್ಲಾಳ ದೇವ ಎಷ್ಟೇ ಪಿತೂರಿ ಮಾಡಿದ್ರೂ ಏನಾಯ್ತು?
'ಬಾಹುಬಲಿ' ವಿರುದ್ಧ ಬಲ್ಲಾಳ ದೇವ ಎಷ್ಟೇ ಪಿತೂರಿ ಮಾಡಿದ್ರೂ ಏನಾಯ್ತು?" ನಾಯ್ಡು,ಪವನ್‌ಗೆ ರೋಜಾ ಎಚ್ಚರಿಕೆ

ಅನ್ಶು ಸೆಲ್ವಮಣಿಯ ಫೋಟೊಗಳನ್ನು ರೋಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪುತ್ರಿ ಅನ್ಶು ಸೆಲ್ವಮಣಿ ಫೋಟೊಗಳನ್ನು ನೋಡಿ ಥೇಟ್ ನೋಡುವುದಕ್ಕೆ ನಿಮ್ಮ ಹಾಗೇ ಇದ್ದರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಿಕ್ಕವರಿದ್ದಾಗಿನ ನಟಿ ರೋಜಾ ಅವರನ್ನೇ ಹೋಲುತ್ತಿದ್ದಾರೆಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ರೋಜಾಗೂ ಅವರ ಮಗಳಿಗೂ ತುಂಬಾನೇ ಹೋಲಿಕೆಯಿದೆ ಅಂತ ನೆಟ್ಟಿಗರು ಕಾಮೆಂಟ್ ಪಾಸ್ ಮಾಡುತ್ತಿದ್ದಾರೆ.

ಅಮೆರಿಕದ ಅತ್ಯುನ್ನತ ಯುನಿವರ್ಸಿಟಿಯಲ್ಲಿ ರೋಜಾ ಪುತ್ರಿ ಪದವಿಯನ್ನು ಪಡೆದಿದ್ದಾರೆ. ಈಗ ಮಗಳನ್ನು ಉನ್ನತ ಶಿಕ್ಷಣಕ್ಕೆ ಅಲ್ಲಿಯೇ ಬಿಡುತ್ತಾರಾ? ಇಲ್ಲಾ ಭಾರತಕ್ಕೆ ಕರೆದಕೊಂಡು ಬರುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇನ್ನೊಂದು ಕಡೆ ರೋಜಾ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ಕರೆ ತರಬಹುದೇ? ಅವರನ್ನು ಸಿನಿಮಗಳಲ್ಲಿ ನೋಡಬಹುದೇ? ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ರೋಜಾ ಪುತ್ರಿಯನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಯಾಕಂದ್ರೆ ರೋಜಾ ಈಗಾಗಲೇ ರಾಜಕೀಯದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನಾಯಕಿಯಾಗಿ ಹೆಸರು ಗಳಿಸಿದ್ದಾರೆ. ಹೀಗಾಗಿ ಮಗಳನ್ನು ಸಿನಿಮಾಗೆ ಕರೆ ತರೋದು ಅನುಮಾನ. ಆದರೆ, ಉದ್ಯಮ ಕ್ಷೇತ್ರದಲ್ಲಿ ಸಾಗುವಂತೆ ಅವರಿಗೆ ಉತ್ತೇಜನ ನೀಡಬಹುದು ಎಂದು ಚಿತ್ರರಂಗದಲ್ಲಿ ಟಾಕ್ ಶುರುವಾಗಿದೆ. ಏನಕ್ಕೂ ರೋಜಾ ಯಾವ ನಿರ್ಧಾರ ತಗೋತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Actress Roja daughter Anushu looks like her mother recent pics Goes viral. Roja daughter Anshu got degree in US University. Both mother and daughte photos went viral.
Read more about: roja daughter actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X