ಮತ್ತೆ ರಾಜ್ ನಿಡಿಮೋರು ಜೊತೆ ಕಾಣಿಸಿಕೊಂಡ ಸಮಂತಾ;ಇದು ಹೊಸ ಪ್ರಯಾಣ ಎಂದು ಪೋಸ್ಟ್.. ಮ್ಯಾಟರ್ ಏನು?

ನಟಿ ಸಮಂತಾ ರುಥ್ ಪ್ರಭು ಕೆಲವು ತಿಂಗಳುಗಳಿಂದ ನಟನೆಯಿಂದ ದೂರವಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದರೂ, ನಟನೆಯಿಂದ ಕೊಂಚ ವಿರಾಮ ತೆಗೆದುಕೊಂಡಿದ್ದರು. ಆದರೂ ಅವರ ಜನಪ್ರಿಯತೆ ಏನೂ ಕಮ್ಮಿಯಾಗಿಲ್ಲ. ಅವರ ಸಿನಿಮಾ ಅಲ್ಲದೇ ಹೋದರೂ, ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತೆ.

ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈಗ ಅವರು ಕೇವಲ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲ. ಬಾಲಿವುಡ್‌ನಲ್ಲಿಯೂ ಫೇಮಸ್. ವೆಬ್ ಸೀರಿಸ್‌ನಲ್ಲಿ ನಟಿಸಿದ ಬಳಿಕ ಅಲ್ಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ಧಾರೆ. ಇನ್ನು 'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್‌ ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ಜೊತೆ ಅವರ ಹೆಸರು ತಳುಕು ಹಾಕಿಕೊಂಡಲ್ಲಿಂದ ಇನ್ನಷ್ಟು ಚರ್ಚೆಯಾಗುತ್ತಿದ್ದಾರೆ.

Actress Samantha and Rumored Boyfriend Raj Nidimoru joined for new project Maa Inti Bangaram Pooja Photo Viral

ಇತ್ತೀಚೆಗೆ ಸಮಂತಾ ಹೆಚ್ಚಾಗಿ ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆನೇ ಕಾಣಿಸಿಕೊಳ್ಳುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ರಾಜ್ ಜೊತೆಯೇ ಸಮಂತಾ ಹಬ್ಬವನ್ನು ಆಚರಿಸಿದ್ದರು. ಈಗ ಕೂಡ ಅವರಿಬ್ಬರೂ ಸೇರಿ ಮತ್ತೊಂದು ಹೊಸ ಪಯಣವನ್ನು ಆರಂಭಿಸಿದ್ದಾರೆ. ಆ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಚಿತ್ರೀಕರಣದ ವೇಳೆ ಸಮಂತಾ ಹಾಗೂ ರಾಜ್ ನಿಡಿಮೋರು ಪರಿಚಯ ಆಗಿತ್ತು. ಅಲ್ಲಿಂದ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದು ಅದು ಪ್ರೀತಿಗೆ ತಿರುಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಈ ವೆಬ್ ಸೀರಿಸ್ ಬಳಿಕ 'ಸಿಟಾಡೆಲ್: ಹನಿ ಬನ್ನಿ' ಯಲ್ಲೂ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಅಲ್ಲಿಂದ ಇಬ್ಬರ ಪ್ರೀತಿ ಮತ್ತಷ್ಟು ಗಾಢವಾಯ್ತು ಎಂದು ಈಗಾಗಲೇ ವರದಿಗಳಾಗಿವೆ. ಆದರೆ, ಸಮಂತಾ ಆಗಲಿ, ರಾಜ್ ಆಗಲಿ ಎಲ್ಲಿಯೂ ಈ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿಲ್ಲ.

ಸದ್ಯ ಸಮಂತಾ ಹಾಗೂ ರಾಜ್ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಆಳವಾಗಿ ಮುಳುಗಿದ್ದು, ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದೇ ವೇಳೆ ಸಮಂತಾ ಶೇರ್ ಮಾಡಿರುವ ಫೋಸ್ಟ್ ಒಂದು ಈ ವದಂತಿಗಳಿಗೆ ಸಾಕ್ಷಿ ನೀಡುವಂತಿದೆ ಎಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ಸಮಂತಾ ಹಾಗೂ ರಾಜ್ ಬಗ್ಗೆ ಸುದ್ದಿಗಳು ಓಡಾಡುತ್ತಿರುವಾಗಲೇ ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ಸಮಂತಾ ತಮ್ಮ ನಿರ್ಮಾಣ ಸಂಸ್ಥೆ 'ಟ್ರಾಲಾಲಾ ಬ್ಯಾನರ್' ಅಡಿಯಲ್ಲಿ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ 'ಮಾ ಇಂಟಿ ಬಂಗಾರಂ'. ಈ ಸಿನಿಮಾ ಸಮಂತಾ ನಿರ್ಮಾಣದ ಜೊತೆಗೆ ನಟನೆ ಕೂಡ ಮಾಡುತ್ತಿದ್ದಾರೆ. ಈ ಸಿನಿಮಾ ಪೂಜೆ ವೇಳೆ ಸಮಂತಾ ಜೊತೆ ರಾಜ್ ಕಾಣಿಸಿಕೊಂಡಿದ್ದಾರೆ.

ಸಮಂತಾ ಅವರ 'ಮಾ ಇಂಟಿ ಬಂಗಾರಂ' ಸಿನಿಮಾವನ್ನು ರಾಜ್ ನಿರ್ದೇಶಿಸುತ್ತಿಲ್ಲ. ತೆಲುಗಿನ ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. 'ಓ ಬೇಬಿ' ಸಿನಿಮಾದ ಬಳಿಕ ಈ ಜೋಡಿಯ ಎರಡನೇ ಕಾಂಬಿನೇಷನ್ಇದಾಗಿದೆ. ಈ ಸಿನಿಮಾವನ್ನು ಸಮಂತಾ ತಮ್ಮ ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದರೆ, ಇದಕ್ಕೆ ರಾಜ್ ನಿಡಿಮೋರು ಮತ್ತು ಹಿಮಾಂಕ್ ದುವ್ವೂರಿ ಸಹ-ನಿರ್ಮಾಪಕರಾಗಿದ್ದಾರೆ.

ಇನ್ನು 'ಮಾ ಇಂಟಿ ಬಂಗಾರಂ' ಸಿನಿಮಾ ಜೊತೆಗೆ ಸಮಂತಾ 'ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್‌ಡಮ್' ಎಂಬ ವೆಬ್ ಸರಣಿಯಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಪೋಸ್ಟ್ ಮಾಡಿದ ಫೋಟೋಗಳು ಮತ್ತು ಕಾಮೆಂಟ್‌ಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

More from Filmibeat

English summary
Actress Samantha and Rumored Boyfriend Raj Nidimoru joined for new project Maa Inti Bangaram Pooja Photo Viral.
Read more about: samantha boyfriend movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X