ಸಮಂತಾ ಟ್ವಿಟರ್‌ನಲ್ಲೇ ಗುರಿ ಇಟ್ಟಿದ್ದು ಯಾರಿಗೆ? ನೆಟ್ಟಿಗರು ಗಾಬರಿಬಿದ್ದಿದ್ದೇಕೆ?
ಟಾಲಿವುಡ್ ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಕೆಲವರು ಸಮಂತಾ ಹಾಕುವ ಪೋಸ್ಟ್‌ಗಳಿಗೆ ಕಾಲೆಳೆಯುತ್ತಾರೆ. ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಾರೆ. ಆದರೂ, ಸಮಂತಾ ಇದ್ಯಾವುದರ ಬಗ್ಗೆನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಟ್ವಿಟರ್‌ನಲ್ಲೇ ಸಮಂತಾ ಖಡಕ್ ಪ್ರತಿಕ್ರಿಯೆ ನೀಡುತ್ತಾರೆ.
ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ವಿಚ್ಛೇದನ ಪಡೆಯುತ್ತಿರುವುದನ್ನು ಅನೌನ್ಸ್ ಮಾಡಿದ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸಮಂತಾರನ್ನು ಕಾಡುತ್ತಲೇ ಇದ್ದಾರೆ. ಏನಾದರೂ ಒಂದು ವಿಷಯಕ್ಕೆ ಕಾಲೆಳೆಯುತ್ತಲೇ ಇರುತ್ತಾರೆ. ಆದರೆ, ಇವುಗಳ ಬಗ್ಗೆ ಗಮನ ಹರಿಸದೆ, ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸಿದ್ದರು.
ಇಂದು (ಏಪ್ರಿಲ್ 22) ಸಂಜೆ ಸಮಂತಾ ಇದ್ದಕ್ಕಿದ್ದ ಹಾಗೇ ಖಡಕ್ ಟ್ವೀಟ್ ಮಾಡಿ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ಅಷ್ಟಕ್ಕೂ ಸಮಂತಾ ಮಾಡಿದ ಟ್ವೀಟ್‌ನಲ್ಲಿ ಏನಿದೆ? ಟ್ವಿಟರ್‌ನಲ್ಲಿ ಸಮಂತಾ ಗುರಿಯಿಟ್ಟಿದ್ದು ಯಾರಿಗೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸಮಂತಾ ಟ್ವೀಟ್ ಮೂಲಕ ಗುರಿಯಿಟ್ಟಿದ್ಯಾರಿಗೆ?
ಸಮಂತಾ ಕೆಲವು ದಿನಗಳಿಂದ ತಮ್ಮ ಹೊಸ ಪ್ರಾಜೆಕ್ಟ್‌ಗಳಿಂದಲೇ ಸುದ್ದಿ ಮಾಡುತ್ತಿದ್ದರು. ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಂಡಿರುವ ನಟಿ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದರೊಂದಿಗೆ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಅವುಗಳ ಪ್ರಮೋಷನ್‌ನಲ್ಲಿ ಭಾಗಿಯಾಗಬೇಕಿತ್ತು. ಆದರೆ, ಇದ್ದಕ್ಕಿದ್ದ ಹಾಗೆ ಯಾರ ಮೇಲೋ ಟ್ವೀಟ್‌ನಲ್ಲೇ ಗುರಿಯಿಟ್ಟಿದ್ದಾರೆ.
ಸಮಂತಾ ಹೇಳಿದ್ದೇನು?
ಇಂದು (ಏಪ್ರಿಲ್ 22) ಸಂಜೆ 5.30ಕ್ಕೆ ಸಮಂತಾ ಟ್ವಿಟರ್‌ನಲ್ಲಿ ಪವರ್‌ಫುಲ್ ಆಗಿ ಟ್ವೀಟ್ ಮಾಡಿದ್ದರು. ಮೌನ ಅಥವಾ ತಾಳ್ಮೆಯನ್ನು ಅವರ ಅಜ್ಞಾನ ಅಥವಾ ದೌರ್ಬಲ್ಯವೆಂದು ಪರಿಗಣಿಸಬಾರದು ಎಂದಿದ್ದಾರೆ. "ನನ್ನ ಮೌನವನ್ನು ಅಜ್ಞಾನವೆಂದೂ, ನನ್ನ ಶಾಂತ ಸ್ವಭಾವವನ್ನು ಸ್ವೀಕಾರವೆಂದೂ, ನನ್ನ ದಯೆಯನ್ನು ದೌರ್ಬಲ್ಯವೆಂದು ಎಂದೂ ತಪ್ಪಾಗಿ ಭಾವಿಸಬೇಡಿ." ಎಂದು ಟ್ವೀಟ್ ಮಾಡಿದ್ದಾರೆ. ಸಮಂತಾ ಹೀಗ್ಯಾಕೆ ಹೇಳಿದರು ಎಂದು ಫ್ಯಾನ್ಸ್ ಕಂಗಾಲಾಗಿದ್ದಾರೆ.

ದುಬೈನಲ್ಲಿ ಸಮಂತಾ
ಸಮಂತಾ ಇದ್ದಕ್ಕಿದ್ದ ಹಾಗೆ ಯಾಕೆ ಹೀಗೆ ಟ್ವೀಟ್ ಮಾಡಿದ್ದಾರೆ ಅಂತ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಆದರೆ, ಸಮಂತಾ ಸದ್ಯ ದುಬೈನಲ್ಲಿದ್ದಾರೆ. ದುಬೈನಲ್ಲಿ ರಜೆಯ ದಿನಗಳನ್ನು ಕಳೆಯುತ್ತಿರುವ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ಸಮಂತಾ ಹೈದರಾಬಾದ್‌ಗೆ ಮರಳುತ್ತಿದ್ದು, ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಅನೌನ್ಸ್
ವಿಜಯ್ ದೇವರಕೊಂಡ ಜೊತೆ ಸಮಂತಾ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ಸಮಂತಾ ಗೈರಾಗಿದ್ದರು. ದುಬೈನಲ್ಲಿರುವ ಸಮಂತಾ ಹೈದರಾಬಾದ್‌ಗೆ ಮರಳುತ್ತಿದ್ದಂತೆ ಸಿನಿಮಾ ಶೂಟಿಂಗ್ ಆರಂಭ ಆಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾಂಬಿನೇಷನ್ ಈಗಾಗಲೇ ಕುತೂಹಲ ಕೆರಳಿಸಿದ್ದು, ಸಿನಿಮಾ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಕಾತುರದಿಂದ ಕಾದು ಕೂತಿದ್ದಾರೆ.


Click it and Unblock the Notifications











