20 ದಿನ ಅನಾರೋಗ್ಯದಿಂದ ಬಳಲಿದ ಸಮಂತಾ ಜಿಮ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ!
ಟಾಲಿವುಡ್ ಇರಲಿ, ಬಾಲಿವುಡ್ ಇರಲಿ ಸಮಂತಾ ಬಗ್ಗೆನೇ ಚರ್ಚೆ. ವಿಚ್ಛೇದನದ ಬಳಿಕ ಟಾಲಿವುಡ್ ನಟಿಯ ಬಗ್ಗೆ ಎಲ್ಲರ ಗಮನ ಸೆಳೆದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇನ್ನೊಂದು ಕಡೆ ಸಮಂತಾ ಏಳಿಗೆಯನ್ನು ಸಹಿಸದವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ವೈಯುಕ್ತಿಕ ಜೀವನ ಹಳಿತಪ್ಪಿದರೂ ಸಮಂತಾ ವೃತ್ತಿ ಜೀವನ ಸುಗಮವಾಗಿ ಸಾಗುತ್ತಿದೆ.
2021 ಸಮಂತಾ ಬದುಕಿನಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ವಿಚ್ಛೇದನದ ನೋವಿನಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡಿದ್ದ ಸಮಂತಾ ಪುಷ್ಟ ಐಟಂ ಸಾಂಗಿನಿಂದ ಗಮನ ಸೆಳೆದಿದ್ದರು. ಮತ್ತೆ ಸಮಂತಾಳನ್ನು ಬೋಲ್ಡ್ ಅವತಾರದಲ್ಲಿ ನೋಡಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಹೊಸ ವರ್ಷದಿಂದ ತನ್ನ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಮಂತಾ ಸಜ್ಜಾಗಿ ನಿಂತಿದ್ದಾರೆ. ಅದಕ್ಕೆ ಜಿಮ್‌ನಲ್ಲಿ ಫುಲ್ ವರ್ಕ್‌ಔಟ್ ಆರಂಭಿಸಿದ್ದಾರೆ.

ಜಿಮ್‌ನಲ್ಲಿ ಸಮಂತಾ ಮತ್ತೆ ವರ್ಕ್‌ಔಟ್
ದಕ್ಷಿಣ ಭಾರತದ ನಟಿ ಸಮಂತಾ ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅತಿಯಾದ ಜ್ವರದಿಂದ ಬಳಲುತ್ತಿದ್ದ ಸಮಂತಾ ಜಿಮ್ ಮುಖ ಕೂಡ ಮಾಡಿರಲಿಲ್ಲ. ಇದೊಂದಿಗೆ ಕ್ರಿಸ್‌ಮಸ್ ಹಬ್ಬ ಬೇರೆ ಇದ್ದಿದ್ದರಿಂದ ಆ ಮೂಡಿನಲ್ಲಿ ಇದ್ದರು. ಇವೆರಡೂ ಮುಗಿದ ಬಳಿಕ ಸಮಂತಾ ಮತ್ತೆ ವರ್ಕ್‌ಔಟ್ ಮಾಡುತ್ತಿದ್ದಾರೆ. 34 ವರ್ಷದ ನಟಿ ಜಿಮ್‌ನಲ್ಲಿ ಕಸರತ್ತು ಮಾಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಳಿಕ " ವೈರಲ್ ಜ್ವರ ಬಂದ 20 ಕ್ರೇಜಿ ದಿನಗಳ ಬಳಿಕ ಮತ್ತೆ ವರ್ಕ್‌ಔಟ್‌ಗೆ ಮರಳಿದ್ದೇನೆ." ಎಂದು ಸಮಂತಾ ಬರೆದುಕೊಂಡಿದ್ದಾರೆ.

ಸಮಂತಾ ವೃತ್ತಿಬದುಕಿನ ಹೊಸ ಅಧ್ಯಾಯ ಆರಂಭ
ನಟಿ ಸಮಂತಾ ವೃತ್ತಿ ಬದುಕಿನ ಹೊಸ ಅಧ್ಯಾಯ 2022ರಿಂದ ಆರಂಭ ಆಗಲಿದೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗಾಗಿ ಜಿಮ್‌ನಲ್ಲಿ ಕಸರತ್ತು ನಡೆಸಿದ್ದಾರೆ. ಸಮಂತಾ ನಟಿಸಲು ಮುಂದಾಗಿರುವ ಸಿನಿಮಾಗಳಲ್ಲಿ ಹಾಲಿವುಡ್ ಸಿನಿಮಾವೂ ಸೇರಿಕೊಂಡಿದೆ. ಹೀಗಾಗಿ ಫಿಟ್ ಆಗಿ ಕಾಣಿಸಿಕೊಳ್ಳಲೇಬೇಕಿದೆ. ಬದುಕಿನ ಕಹಿ ಘಟನೆಗಳನ್ನು ಮರೆದು ಹೊಸ ವರ್ಷದಿಂದ ಬದುಕಿನ ಹೊಸ ಅಧ್ಯಾಯಕ್ಕೆ ಅಣಿಯಾಗಲು ಸಮಂತಾ ಮುಂದಾಗಿದ್ದಾರೆ. ಹೀಗಾಗಿ ಜಿಮ್‌ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ನಟಿ ಸಮಂತಾ ಫಿಟ್‌ನೆಸ್ ಫ್ರೀಕ್
ಸಮಂತಾ ಫಿಟ್‌ನೆಟ್ ಫ್ರೀಕ್ ಅನ್ನುವುದು ಎಲ್ಲರಿಗೂ ಗೊತ್ತಿದೆ. ಒಪ್ಪಿಕೊಂಡ ಪಾತ್ರಕ್ಕಾಗಿ ಸಂಪೂರ್ಣವಾಗಿ ತಯಾರಿ ನೆಡೆಸುತ್ತಾರೆ. ಹೊಸ ಪ್ರಾಜೆಕ್ಟ್‌ಗಳಿಗಾಗಿ ಸಮಂತಾ ದೇಹ ದಂಡಿಸಲು ಸೈಕಲ್ ಸವಾರಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಏಪ್ಯಾದ ಸೈಕಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಸಿಲ್ವರ್ ಮೆಡಲ್ ಪಡೆದಿದ್ದ ಆದಿತ್ಯಾ ಮೆಹ್ತಾರೊಂದಿಗೆ ಸೇರಿಕೊಂಡಿದ್ದಾರೆ. ಇವರೊಂದಿಗೆ ಸೈಕಲಿಂಗ್ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಈ ವಿಡಿಯೋವನ್ನೂ ಸಮಂತಾ ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು.
ಶಿಲ್ಪಾ ರೆಡ್ಡಿ ಜೊತೆ ವರ್ಕ್‌ಔಟ್
ಸಮಂತಾ ಕೆಲವು ದಿಗ್ಗಜರೊಂದಿಗೆ ವರ್ಕ್‌ಔಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲೂ ಸಮಂತಾ ಮಿಸ್ ಇಂಡಿಯಾ ಕಿರೀಟ ಗೆದ್ದ ಶಿಲ್ಪಾ ರೆಡ್ಡಿ ಅವರೊಂದಿಗೆ ವರ್ಕ್‌ಔಟ್ ಮಾಡುತ್ತಿದ್ದಾರೆ. ಕಾರ್ಡಿಯೋ ಹಾಗೂ ಸ್ಟ್ರೆಚ್ಚಿಂಗ್ ವ್ಯಾಯಾಮವನ್ನು ಶಿಲ್ಪಾ ರೆಡ್ಡಿ ಜೊತೆ ನಿರ್ವಹಿಸುತ್ತಿದ್ದಾರೆ. ಇನ್ನು 'ಪುಷ್ಪ' ಸಿನಿಮಾದ ಐಟಂ ಸಾಂಗ್ ಸಮಂತಾ ಒಳ್ಳೆ ಹೆಸರು ತಂದುಕೊಟ್ಟಿದೆ. ಹೀಗಾಗಿ ವರ್ಷದ ಕೊನೆಯಲ್ಲಿ ಸಮಂತಾ ಮತ್ತೆ ಟ್ರ್ಯಾಕ್‌ಗೆ ಮರಳಿದ್ದು, 2022ರಲ್ಲಿ ಇನ್ನೂ ದೊಡ್ಡ ಸಿನಿಮಾಗಳನ್ನು ನಿರೀಕ್ಷೆ ಮಾಡಬಹುದಾಗಿದೆ.


Click it and Unblock the Notifications











