"ಪ್ರೀತಿಯೇ ಬದುಕು ನಡೆಸುವ ಇಂಧನ" ನಾಗಚೈತನ್ಯ ಜೊತೆ ಡೇಟಿಂಗ್ ಒಪ್ಪಿಕೊಂಡ್ರಾ ಶೋಭಿತಾ? ಮುಂದೆ?
ತೆಲುಗು ನಟ ನಾಗಚೈತನ್ಯ ತಮ್ಮ ಪತ್ನಿ ಸಮಂತಾರಿಂದ ವಿಚ್ಛೇದನ ಪಡೆದು ಈಗಾಗ್ಲೇ ಸಾಕಷ್ಟು ಸಮಯ ಕಳೆದಿದೆ. ಇವರ ಡಿವೋರ್ಸ್ ನಂತರ ಸಮಂತಾ ಅನಾರೋಗ್ಯ, ನಂತರ ಆಕೆಯ ಕೆರಿಯರ್‌ನ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದ್ದು. ಇದೆಲ್ಲವೂ ಅಭಿಮಾನಿಗಳ ಮುಂದೆಯೇ ನಡೆದಿರುವಂಥದ್ದು.
ಇನ್ನು ತಾನಾಯ್ತು, ತನ್ನ ಬ್ಯುಸಿನೆಸ್‌ಗಳು, ಸಿನಿಮಾ ಪ್ರಾಜೆಕ್ಟ್‌ಗಳು, ಪಾಡ್ ಕಾಸ್ಟ್, ಆರೋಗ್ಯ ಇಷ್ಟರಲ್ಲೇ ಮುಳುಗಿಹೋಗಿರುವ ಸಮಂತಾ ಒಂದು ಕಡೆ. ಮತ್ತೊಂದೆಡೆ ಸಮಂತಾರಿಂದ ದೂರವಾಗಿ ಕೆಲವು ತಿಂಗಳಲ್ಲೇ ಮತ್ತೊಬ್ಬ ನಟಿಯ ಜೊತೆ ಕಾಣಿಸಿಕೊಳ್ತಿರೋ ನಾಗಚೈತನ್ಯ. ಈಗ ಈ ಎರಡೂ ವಿಚಾರಗಳನ್ನು ನೋಡ್ತಿರೋ ಅಭಿಮಾನಿಗಳ ಪಾಲಿಗೆ ಮಾತ್ರ ಶೋಭಿತಾ ಧೂಲಿಪಾಲ ಎನ್ನುವ ನಟಿ ಪಕ್ಕಾ ವಿಲನ್ ಆಗ್ಬಿಟ್ಟಿದ್ದಾರೆ.

ವಿಚ್ಛೇದನದ ನಂತರ ಕೆಲಕಾಲ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿರಲಿಲ್ಲ. ಆದರೆ, ಈಗ ಸಾಕಷ್ಟು ಸಮಯ ಕಳೆದಿರುವುದರಿಂದ ಇಬ್ಬರೂ ತಮ್ಮ ಬದುಕಿನ ಆ ಘಟ್ಟದ ಬಗ್ಗೆ ಸ್ವಲ್ಪಸ್ವಲ್ಪವೇ ತೆರೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸಂಬಂಧಗಳ ಬಗ್ಗೆ ಮಾತನಾಡುತ್ತಾ, "ನಾನೂ ಕೆಲವೊಂದು ತಪ್ಪು ಮಾಡಿದ್ದೇನೆ. ಆದರೆ ಆ ತಪ್ಪುಗಳಿಂದಲೇ ನಾವು ಪಾಠ ಕಲಿಯುವುದು. ಅದರಿಂದಲೇ ನಾವು ಮತ್ತಷ್ಟು ಗಟ್ಟಿಯಾಗುವುದು" ಎಂದು ನಾಗಚೈತನ್ಯ ಹೇಳಿದ್ದರು. ಅವರು ಆಡಿದ ಆ ಮಾತು ಸಮಂತಾ ಮತ್ತು ತಮ್ಮ ದಾಂಪತ್ಯದ ಕುರಿತಾದದ್ದು ಎಂದು ಅಭಿಮಾನಿಗಳು ಅರ್ಥ ಮಾಡಿಕೊಂಡರು. ಅಂದರೆ, ತಮ್ಮ ದಾಂಪತ್ಯದಲ್ಲಿ ತಾನು ತಪ್ಪು ಮಾಡಿದ್ದಾಗ ನಾಗಚೈತನ್ಯ ಒಪ್ಪಿಕೊಂಡಿದ್ದಾರೆ ಎಂದು ತಾವೇ ಚರ್ಚೆ ಮಾಡಿಕೊಂಡರು. ಅಲ್ಲಿಗೆ ಸಮಂತಾ ಮುಗ್ಧೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಇನ್ನು ನಾಗಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿದೇಶಗಳಲ್ಲಿ, ರೆಸ್ಟೊರೆಂಟ್‌ಗಳಲ್ಲಿ ಹೀಗೆ ನಾನಾ ಕಡೆ ಈ ಜೋಡಿಯನ್ನು ಅನೇಕರು ಜೊತೆಯಾಗಿ ನೋಡಿದ್ದಾರೆ. ಹೀಗಿದ್ದರೂ ಶೋಭಿತಾ ಈ ಬಗ್ಗೆ ಎಂದೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಒಟಿಟಿಯ ಸೀರಿಸ್‌ಗಳ ಮೂಲಕ ಹಿಂದಿ ಚಿತ್ರ ಜಗತ್ತಿನಲ್ಲಿ ಚಿರಪರಿಚಿತ ಹೆಸರಾಗಿರುವ ಈ ಬಹುಭಾಷಾ ನಟಿ ಇದೇ ಮೊದಲ ಬಾರಿಗೆ ತಮ್ಮ ಖಾಸಗಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆದರೆ, ಮದುವೆಯ ಕುರಿತಾಗಿ ಯಾವುದೇ ವಿಚಾರ ಹಂಚಿಕೊಂಡಿಲ್ಲ.
"ನಾನು ಪ್ರೀತಿಯಲ್ಲಿದ್ದೇನೆ. ಪ್ರೀತಿಯೇ ಬದುಕು ನಡೆಸುವ ಇಂಧನ" ಎನ್ನುವ ಮೂಲಕ ತಾನು ಸದ್ಯ ಪ್ರೀತಿಯಲ್ಲಿದ್ದೇನೆ ಎನ್ನುವುದನ್ನು ಶೋಭಿತಾ ಕನ್ ಫರ್ಮ್ ಮಾಡಿದ್ದಾರೆ.
ಶೋಭಿತಾ ಧೂಲಿಪಾಲ ನಾಗಚೈತನ್ಯ ಬಿಟ್ಟು ಬೇರೆ ಇನ್ನಾರ ಜೊತೆಯೂ ಕೆಲಸದ ಹೊರತಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಆಕೆ ಹೇಳುತ್ತಿರುವ ಪ್ರೀತಿಯ ವಾರಸುದಾರ ನಾಗಚೈತನ್ಯ ಎನ್ನುವುದು ನಿರ್ಧರಿತ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳು ಮತ್ತು ವೆಬ್ ಸೀರಿಸ್‌ಗಳಲ್ಲಿ ಶೋಭಿತಾ ನಟಿಸಿದ್ದಾರೆ. ಸದ್ಯ ಹಾಲಿವುಡ್ ನ ಮಂಕಿಮ್ಯಾನ್ ಎನ್ನುವ ಬಿಗ್ ಬಜೆಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ಈ ನಟಿ ತನ್ನ ಬದುಕು, ಪ್ರೀತಿ, ಮನಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.


Click it and Unblock the Notifications











