ಶ್ರುತಿ ಹಾಸನ್ 36ನೇ ಹುಟ್ಟುಹಬ್ಬ: ಸಲಾರ್ ತಂಡದಿಂದ ಭರ್ಜರಿ ಗಿಫ್ಟ್
ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಇಂದು (ಜನವರಿ 28) 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಶ್ರುತಿ ಹಾಸನ್‌ಗೆ ಸಲಾರ್ ಚಿತ್ರತಂಡ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಇಲ್ಲಿವರೆಗೂ ಶ್ರುತಿ ಹಾಸನ್ ಪಾತ್ರ ಹಾಗೂ ಲುಕ್ ಅನ್ನು ಚಿತ್ರತಂಡ ಗೌಪ್ಯವಾಗಿಯೇ ಇಟ್ಟಿತ್ತು. ಈಗ ಬರ್ತ್ ಡೇ ದಿನವೇ ಶ್ರತಿ ಹಾಸನ್ ಫಸ್ಟ್ ಲುಕ್ ಪಾತ್ರದ ಹೆಸರು ರಿಲೀಸ್ ಆಗಿದೆ.
'ಸಲಾರ್' ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾ. ಟಾಲಿವುಡ್‌ನ ಯಂಗ್ ರೆಬೆಲ್ ಪ್ರಭಾಸ್ ರಗಡ್ ಅವತಾರದಲ್ಲಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮೊದಲ ಕಾಂಬಿನೇಷನ್ ಇದಾಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ತಂಡಕ್ಕೆ ಶ್ರುತಿ ಹಾಸನ್ ಸೇರ್ಪಡೆಯಾದ ಬಳಿಕ 'ಸಲಾರ್' ಸಿನಿಮಾಗೆ ಬೆಳಕು ಬಂದಂತಾಗಿದೆ.
ಶ್ರತಿ ಹಾಸನ್ ಗುಟ್ಟು ಬಿಟ್ಟುಕೊಟ್ಟ 'ಸಲಾರ್' ತಂಡ
'ಕೆಜಿಎಫ್' ಸಿನಿಮಾ ಬಳಿಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಸಿನಿಮಾ 'ಸಲಾರ್'. ಈಗಾಗಲೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಚಿತ್ರೀಕರಣ ಶುರುವಾದ ಕೂಡಲೇ ಶ್ರುತಿ ಹಾಸನ್ ತಂಡ ಸೇರಿಕೊಂಡಿದ್ದನ್ನು ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ ಶ್ರುತಿ ಹಾಸನ್ ಪಾತ್ರದ ಬಗ್ಗೆ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಈಗ ಶ್ರುತಿ ಹಾಸನ್ 36ನೇ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಅವರ ಪಾತ್ರದ ಹೆಸರು ಆದ್ಯ ಎಂದು ರಿವೀಲ್ ಮಾಡಿದ್ದಾರೆ.

'ಸಲಾರ್' ಸಿನಿಮಾದಲ್ಲಿ ಶ್ರುತಿ ಹಾಸನ್ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ಪೋಸ್ಟರ್ ರಿವೀಲ್ ಮಾಡಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟರ್‌ನಲ್ಲಿ ಶ್ರುತಿ ಹಾಸನ್ ಫಸ್ಟ್ ಲುಕ್ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. " ಶ್ರುತಿ ಹಾಸನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಲಾರ್ ತಂಡದ ಭಾಗವಾಗಿದ್ದಕ್ಕೆ ಹಾಗೂ ಈ ತಂಡದಲ್ಲಿ ಹೊಳಪು ತಂದಿದ್ದಕ್ಕೆ ಧನ್ಯವಾದಗಳು." ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶ್ರುತಿ ಹಾಸನ್
'ಸಲಾರ್' ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಯಾವ ರಿಲೀಸ್ ಮಾಡಲಿದೆ ಎಂಬುವುದು ಇನ್ನೂ ಚಿತ್ರತಂಡ ಹೇಳಿಲ್ಲ. ಆದರೆ, ಹಿಂದೆ ಏಪ್ರಿಲ್ 14ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದೇ ಡೇಟ್‌ನಲ್ಲಿ 'ಕೆಜಿಎಫ್ 2' ರಿಲೀಸ್ ಆಗುತ್ತಿರುವುದರಿಂದ 'ಸಲಾರ್' ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಾಗಿದೆ. ಈ ಮಧ್ಯೆ ಶ್ರುತಿ ಹಾಸನ್ ಫಸ್ಟ್ ಲುಕ್ ಅವರ ಅಭಿಮಾನಿಗಳಿಗೆ ಇಷ್ಟ ಆಗಿದ್ದು, ಶುಭಾಶಗಳನ್ನು ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ.
ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆ ಶ್ರುತಿ ಹಾಸನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. " ನನಗೆ ನಿಮ್ಮ ಅಮೂಲ್ಯ ಸಮಯ ತೆಗೆದುಕೊಂಡು ವಿಶ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಧನ್ಯವಾದಗಳನ್ನು ಹೇಳುವುದಕ್ಕಿಂತಲ್ಲೂ ಹೆಚ್ಚು ಧನ್ಯಳಾಗಿದ್ದೇನೆ. ಇದನ್ನು ವಿವರಿಸಲು ಸಾಧ್ಯವಿಲ್ಲ. " ಎಂದು ಶ್ರತಿ ಹಾಸನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಶ್ರುತಿ ಹಾಸನ್ ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರದಲ್ಲಿಯೇ ಶೂಟಿಂಗ್‌ಗೆ ಸೆಟ್ಟಿಗೆ ಎಂಟ್ರಿಕೊಡಲಿದ್ದಾರೆ.


Click it and Unblock the Notifications











