'ಡಿಜೆ ಟಿಲ್ಲು 2' ತೆಲುಗು ಸಿನಿಮಾದಿಂದ ನಟಿ ಶ್ರೀಲೀಲಾ ಔಟ್: ಕಾರಣವೇನು?

ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕೈ ತುಂಬಾ ತೆಲುಗು ಸಿನಿಮಾಗಳಿವೆ. ಶ್ರೀಲೀಲಾ ಸ್ಯಾಂಡಲ್‌ವುಡ್, ಟಾಲಿವುಡ್ ಎರಡೂ ಇಂಡಸ್ಟ್ರಿಯಲ್ಲೂ ಕೆಲಸ ಮಾಡಿದ್ದರೂ ಹೇಳಿಕೊಳ್ಳುವಂತಹ ಹಿಟ್ ಸಿನಿಮಾವನ್ನೇನು ಕೊಟ್ಟಿಲ್ಲ.

ಕೆಲವು ತಿಂಗಳ ಹಿಂದಷ್ಟೇ ತೆರೆಕಂಡಿದ್ದ 'ಪೆಳ್ಳಿ ಸಂದಡಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಮೋಡಿ ಮಾಡಿತ್ತು. ಅದು ಬಿಟ್ಟರೆ, ಮುಂದೆ ರಿಲೀಸ್ ಆಗುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವ ನಿರೀಕ್ಷೆಯಿದೆ.

ಸದ್ಯ ನಟಿ ಶ್ರೀಲೀಲಾ ಟಾಲಿವುಡ್‌ನ ಯಂಗ್ ಸೆನ್ಸೇಷನ್. ತೆಲುಗು ಬಿಗ್ ಬಜೆಟ್ ಸಿನಿಮಾಗಳು ಇವರ ಕೈಯಲ್ಲಿ ಇದ್ದರೂ, ವಿವಾದಗಳು ಇವರನ್ನು ಸುತ್ತಿಕೊಳ್ಳುತ್ತಲೇ ಇವೆ. ಈಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, 'ಡಿಜೆ ಟಿಲ್ಲು 2' ಸಿನಿಮಾದಿಂದ ಶ್ರೀಲೀಲಾ ಹೊರಬಿದ್ದಿದ್ದಾರೆ ಎನ್ನಲಾಗಿದೆ.

'ಡಿಜೆ ಟಿಲ್ಲು 2' ಸಿನಿಮಾದಿಂದ ಶ್ರೀಲೀಲಾ ಔಟ್?

'ಡಿಜೆ ಟಿಲ್ಲು 2' ಸಿನಿಮಾದಿಂದ ಶ್ರೀಲೀಲಾ ಔಟ್?

ಶ್ರೀಲೀಲಾ ಕೈಯಲ್ಲಿರುವ ತೆಲುಗು ಸಿನಿಮಾಗಳ ಪೈಕಿ 'ಡಿಜೆ ಟಿಲ್ಲು 2' ಕೂಡ ಒಂದಾಗಿತ್ತು. ಈ ಹಿಂದೆ ತೆರೆಕಂಡಿದ್ದ 'ಡಿಜೆ ಟಿಲ್ಲು' ಚಾಪ್ಟರ್ 1 ಟಾಲಿವುಡ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಫಸ್ಟ್ ಪಾರ್ಟ್‌ನಲ್ಲೂ ಕನ್ನಡದ ನಟಿಗೆ ಅವಕಾಶ ಸಿಕ್ಕಿತ್ತು. ನೇಹಾ ಶೆಟ್ಟಿ ಮೊದಲ ಪಾರ್ಟ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪಾರ್ಟ್‌ 2ನಲ್ಲಿ ಶ್ರೀಲೀಲಾ ಹೀರೊಯಿನ್ ಆಗಿ ಆಯ್ಕೆಯಾಗಿದ್ದರು. ಆದ್ರೀಗ ದಿಢೀರನೇ ಸಿನಿಮಾದಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಶ್ರೀಲೀಲಾ ಸಿನಿಮಾದಿಂದ ಔಟ್ ಆಗಿದ್ದೇಕೆ?

ಶ್ರೀಲೀಲಾ ಸಿನಿಮಾದಿಂದ ಔಟ್ ಆಗಿದ್ದೇಕೆ?

'ಡಿಜೆ ಟಿಲ್ಲು 2' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಕೆಲವು ದಿನಗಳು ಶೂಟಿಂಗ್ ಕೂಡ ನಡೆದಿದೆ. ಶ್ರೀಲೀಲಾ ಕೂಡ ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಸಿನಿಮಾ ತಂಡದೊಂದಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಸಿನಿಮಾದಿಂದ ಹೊರಬಂದಿದ್ದಾರೆ ಅನ್ನೋ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಆದರೆ, ಈ ಸಿನಿಮಾದಿಂದ ಶ್ರೀಲೀಲಾ ಹೊರಬರೋಕೆ ನಿಖರವಾದ ಕಾರಣವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಶ್ರೀಲೀಲಾ ವಿವಾದಗಳು

ಶ್ರೀಲೀಲಾ ವಿವಾದಗಳು

ಟಾಲಿವುಡ್‌ನಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿರುವ ನಟಿ ಶ್ರೀಲೀಲಾ ವಿವಾದಗಳಿಗೇನು ಕಮ್ಮಿಯಿಲ್ಲ. ಆರಂಭದಿಂದಲೇ ಒಂದಲ್ಲ ವಿವಾದಗಳು ಇಲ್ಲವೇ ಬೇಡದ ಸುದ್ದಿಗಳು ಇವರನ್ನು ಸುತ್ತಿಕೊಳ್ಳುತ್ತಲೇ ಇವೆ. ಇತ್ತೀಚೆಗೆಷ್ಟೇ 7 ಸ್ಟಾರ್ ಹೋಟೆಲ್‌ನಲ್ಲಿ ಶ್ರೀಲೀಲಾ ಉಳಿದುಕೊಂಡಿರೋ ಐಶಾರಾಮಿ ರೂಮಿನ ಬಗ್ಗೆ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿದ್ದರು. ಸಿನಿಮಾದ ಜೊತೆ ಜೊತೆಗೆ ಶ್ರೀಲೀಲಾ ನಾನಾ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ.

ಶ್ರೀಲೀಲಾ ಕೈಯಲ್ಲಿರೋ ಸಿನಿಮಾಗಳು

ಶ್ರೀಲೀಲಾ ಕೈಯಲ್ಲಿರೋ ಸಿನಿಮಾಗಳು

ಕೇವಲ 21 ವರ್ಷದ ನಟಿ ಶ್ರೀಲೀಲಾ ಟಾಲಿವುಡ್‌ನ ಬೇಡಿಕೆಯ ನಟಿ ಎನಿಸಿಕೊಳ್ಳುತ್ತಿದ್ದಾರೆ. ಮಾಸ್ ಮಹಾರಾಜ ರವಿತೇಜಾ ಸಿನಿಮಾ 'ಧಮಾಕಾ'ದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಬಾಲಕೃಷ್ಣ ಹಾಗೂ ಅನಿಲ್ ರವಿಪುಡಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶ್ರೀಲೀಲಾ ಬಾಲಯ್ಯನ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. 'ಉಪ್ಪೇನಾ' ಹೀರೊ ವೈಷ್ಣವ್ ತೇಜ್ ಸಿನಿಮಾಗೂ ನಾಯಕಿ. ಇದರೊಂದಿಗೆ ಜರ್ನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟಿಸುತ್ತಿರುವ ಸಿನಿಮಾಗೂ ಶ್ರೀಲೀಲಾನೇ ನಾಯಕಿ. ಆದ್ರೀಗ ಕೈಯಲ್ಲಿದ ಸಿನಿಮಾಗಳಲ್ಲಿ ಒಂದರಿಂದ ಹೊರಬಂದಿದ್ದಾರೆ.

More from Filmibeat

English summary
Actress Sree Leela Came Out Of Telugu Movie DJ Tillu 2 unavoidable circumstances. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X