ಬೀಚ್‌ನಲ್ಲಿ ರೋಜಾ 'ಪಾದರಕ್ಷೆ' ಹಿಡಿದು ನೌಕರ: ಮತ್ತೊಂದು 'ಚಪ್ಪಲಿ' ವಿವಾದ
ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಚಪ್ಪಲಿ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಗೊತ್ತೇ ಇದೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ತಣ್ಣಗಾಗುತ್ತಿದ್ದಂತೆ, ಮತ್ತೊಂದು ಚಪ್ಪಲಿ ಪ್ರಕರಣ ಸದ್ದು ಮಾಡುವುದಕ್ಕೆ ಶುರು ಮಾಡಿದೆ
ಹೌದು, ಆಂಧ್ರದ ಪ್ರವಾಸೋಧ್ಯಮ ಸಚಿವೆ ಕಮ್ ನಟಿ ರೋಜಾ ಈ ಬಾರಿ 'ಚಪ್ಪಲಿ' ವಿವಾದ ಸಿಕ್ಕಿಕೊಂಡಿದ್ದಾರೆ. ಹಾಗಂತ ರೋಜಾ ಮೇಲೆ ಚಪ್ಪಲಿ ಬಿದ್ದಿಲ್ಲ. ಹಾಗೇ ರೋಜಾನೂ ಯಾರ ಮೇಲೂ ಚಪ್ಪಲಿ ಎಸೆದಿಲ್ಲ.
ಸರ್ಕಾರಿ ನೌಕರ ಆಂಧ್ರದ ಪ್ರವಾಸೋಧ್ಯಮ ಸಚಿವೆಯ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಕೊಂಡು ಅವರ ಹಿಂದೆ ಓಡಾಡಿದ್ದೇ ದೊಡ್ಡ ವಿವಾದಕ್ಕೆ ಎಡಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಏನಿದು 'ಚಪ್ಪಲಿ' ಪ್ರಕರಣ? ಆಂಧ್ರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿರೋದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರೋಜಾ ಚಪ್ಪಲಿ ವಿವಾದ
ಆಂಧ್ರ ಜಗನ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವೆಯಾಗಿರೋ ರೋಜಾ ಎಲ್ಲಾ ಕಡೆಗೂ ಓಡಾಡುತ್ತಿದ್ದಾರೆ. ಆಂಧ್ರದಲ್ಲೂ ಚುನಾವಣೆ ಸಮೀಪದಲ್ಲಿರುವುದರಿಂದ ರೋಜಾ ಚುರುಕಿನಿಂದ ಓಡಾಡುತ್ತಿದ್ದಾರೆ. ಇತ್ತೀಚೆಗೆ ಆಂಧ್ರದ ಸೂರ್ಯಲಂಕಾ ಬೀಚ್‌ಗೆ ವಿಸಿಟ್ ಕೊಟ್ಟಿದ್ದರು. ಈ ವೇಳೆ ಚಪ್ಪಲಿ ಬಿಟ್ಟು ನೀರಿಗೆ ಇಳಿದಿದ್ದರು. ಇದೇ ವೇಳೆ ಸರ್ಕಾರಿ ನೌಕರ ರೋಜಾ ಚಪ್ಪಲಿ ಹಿಡಿದುಕೊಂಡು ನಿಂತಿದ್ದರು. ಈ ವಿಡಿಯೋ ಸೋಶಿಯಲ್ ವೈರಲ್ ಆಗುತ್ತಿದ್ದು, ನೆಟ್ಟಿಗರು ರೋಜಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಜಾ ಹೇಳಿದ್ದೇನು?
ಪ್ರವಾಸೋಧ್ಯಮ ಮಂತ್ರಿಯಾಗಿರೋ ರೋಜಾ ಸೂರ್ಯಲಂಕಾ ಬೀಚ್‌ಗೆ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಬೀಚ್‌ಗೆ ಇಳಿಯಲು ಮುಂದಾಗಿದ್ರು. ಆಗ ದಡದಲ್ಲಿ ಹಾಕಿದ್ದ ಚಪ್ಪಲಿಯನ್ನು ಬಿಟ್ಟು ತಮ್ಮ ಇಲಾಖೆಯ ನೌಕರನಿಗೆ "ಚಪಲಿಯನ್ನು ಎತ್ತುಕೊಳ್ಳಿ" ಎತ್ತುಕೊಳ್ಳುವಂತೆ ಹೇಳಿದ್ದರು. ಇದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಸರ್ಕಾರಿ ನೌಕರ ಚಪ್ಪಲಿ ಹಿಡಿದು ನಿಂತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ರೋಜಾ ನಡೆಗೆ ಸೋಶಿಯಲ್ ವಿಡಿಯೋದಲ್ಲಿ ಕಿಡಿ
ರೋಜಾ ಚಪ್ಪಲಿ ಹಿಡಿದುಕೊಳ್ಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರವಾಸೋದ್ಯಮ ಸಚಿವೆ ರೋಜಾ ವಿರುದ್ಧ ಕಿಡಿಕಾರುತ್ತಿದ್ದಾರೆ. " ರೋಜಾ ರಾಜಕೀಯ ಮುಖಂಡರ ಬಗ್ಗೆ ಖಾರವಾಗಿ ಮಾತಾಡುತ್ತಿದ್ದಾರೆ. ಆದರೆ, ಇವರಿಗೆ ಸೌಜನ್ಯವೇ ಇಲ್ಲ. ಸರ್ಕಾರಿ ನೌಕರನಿಗೆ ತನ್ನ ಚಪ್ಪಲಿ ಹಿಡಿದುಕೊಳ್ಳುವಂತೆ ಅದ್ಹೇಗೆ ಹೇಳಿದ್ರು? ಇದು ಅಧಿಕಾರ ದುರಪಯೋಗ ಅಲ್ಲವೇ? ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಸರ್ಕಾರಿ ನೌಕರನ ಪ್ರತಿಕ್ರಿಯೆ ಏನು?
ಅಂದ್ಹಾಗೆ, ರೋಜಾ ಚಪ್ಪಲಿ ಹಿಡಿದು ನಿಂತಿರೋ ಸರ್ಕಾರಿ ನೌಕರನ ಹೆಸರು ನಾಗರಾಜು. ರೋಜಾ ಚಪ್ಪಲಿ ಪ್ರಕರಣ ವಿವಾದಕ್ಕೆ ತಿರುಗುತ್ತಿದ್ದಂತೆ ನಾಗರಾಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. " ಮಂತ್ರಿ ಚಪ್ಪಲಿಯನ್ನು ಹಿಡಿದುಕೊಳ್ಳುವಂತೆ ಯಾರೂ ಹೇಳಿಲ್ಲ. ನೀರಿನಲ್ಲಿ ಚಪ್ಪಲಿ ಕೊಚ್ಚಿಕೊಂಡು ಹೋಗಬಹುದು ಅನ್ನೋ ಕಾರಣಕ್ಕೆ ನಾನೇ ಚಪ್ಪಲಿಯನ್ನು ತೆಗೆದುಕೊಂಡು ಬೇರೆಡೆಗೆ ಇಟ್ಟೆ." ಎಂದು ನೌಕರ ಹೇಳಿದ್ದಾರೆ.


Click it and Unblock the Notifications











