'ಆದಿಪುರುಷ್' ಸಿನಿಮಾ ವಿರುದ್ಧ ದೂರು: ಶ್ರೀರಾಮನ ಅವತಾರವೆತ್ತಿದ ಪ್ರಭಾಸ್‌ಗೆ ಮತ್ತೆ ಶಾಕ್!
ಪ್ರಭಾಸ್ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಆದಿಪುರುಷ್' ಬಿಡುಗಡೆ ರೆಡಿಯಾಗುತ್ತಿದೆ. ಮುಂದಿನ ತಿಂಗಳು (ಜೂನ್ 16) ಈ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ.
ಮಹಾಕಾವ್ಯ ರಾಮಾಯಣವನ್ನು ಬಾಲಿವುಡ್ ನಿರ್ದೇಶಕ ಓಂ ರಾವತ್ ತೆರೆಮೇಲೆ ತರುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಆದರೆ, 'ಆದಿಪುರುಷ್' ಸಿನಿಮಾದ ಟೀಸರ್ ರಿಲೀಸ್ ಆದಲ್ಲಿಂದ ಒಂದಲ್ಲ ಒಂದು ರೀತಿಯಲ್ಲಿ ವಿವಾದಕ್ಕೆ ಸಿಕ್ಕಿಕೊಳ್ಳುತ್ತಿರೋದು ಚಿತ್ರತಂಡವನ್ನು ಆತಂಕಕ್ಕೆ ಸಿಲುಕಿಸಿದೆ.

ಇನ್ನೇನು ಬಿಡುಗಡೆ ಒಂದು ತಿಂಗಳು ಬಾಕಿ ಇದೆ ಅನ್ನುವಾಗಲೇ ಮತ್ತೊಂದು ಸಂಕಷ್ಟ ಎದುರಿಸುತ್ತಿದೆ. 'ಆದಿಪುರುಷ್' ಸಿನಿಮಾ ವಿರುದ್ಧ ಸೆನ್ಸಾರ್ ಬೋರ್ಡ್‌ಗೆ ದೂರನ್ನು ನೀಡಲಾಗಿದೆ. ಟ್ರೈಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದ ಬೆನ್ನಲ್ಲೇ ಈ ವಿವಾದ ಸಿನಿಮಾ ತಂಡಕ್ಕೆ ದೊಡ್ಡ ತಲೆ ನೋವಾಗಿದೆ.
'ಆದಿಪುರುಷ್' ಟ್ರೈಲರ್‌ಗೆ ಸೂಪರ್ ರೆಸ್ಪಾನ್ಸ್
'ಆದಿಪುರುಷ್' ಟೀಸರ್ ರಿಲೀಸ್ ಆದಾಗ ಭಾರೀ ಟೀಕೆಗೆ ಗುರಿಯಾಗಿತ್ತು. ಇದೇ ಭಯದಲ್ಲೇ ಕೆಲವೇ ದಿನಗಳ ಹಿಂದಷ್ಟೇ 'ಆದಿಪುರುಷ್' ಸಿನಿಮಾದ ಟ್ರೈಲರ್ ಅನ್ನೂ ರಿಲೀಸ್ ಮಾಡಲಾಗಿತ್ತು. ಆದರೆ, ಟ್ರೈಲರ್‌ಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ.

ಆದಿಪುರುಷ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬಝ್ ಕ್ರಿಯೇಟ್ ಮಾಡಿದೆ. ಈ ಟ್ರೈಲರ್ ಯೂಟ್ಯೂಬ್‌ನಲ್ಲಿ 70 ಮಿಲಿಯನ್ ವೀವ್ಸ್ ಗಳಿಸಿ ದಾಖಲೆ ಬರೆದಿದೆ. 2023ಯಲ್ಲಿ ಅತೀ ಹೆಚ್ಚು ವೀವ್ಸ್ ಕಂಡ ಟ್ರೈಲರ್ ಎಂಬ ಪಟ್ಟಿ ಸೇರಿಕೊಂಡಿದೆ. ಆದರೆ, ಈ ಸಿನಿಮಾಗೆ ವಿವಾದಗಳು ಬಿಡುವಂತೆ ಕಾಣುತ್ತಿಲ್ಲ.
'ಆದಿಪುರುಷ್' ವಿರುದ್ಧ ದೂರು
ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC)ನಲ್ಲಿ ಇತ್ತೀಚೆಗೆ ದೂರು ದಾಖಸಲಾಗಿದೆ. ಸನಾತನ ಧರ್ಮದ ಪ್ರಚಾರಕ ಸಂಜಯ್ ದೀನನಾಥ್ ತಿವಾರಿ ಎಂಬುವವರು ಈ ದೂರನ್ನು ದಾಖಲಿಸಿದ್ದಾರೆ. 'ಆದಿಪುರುಷ್' ಬಿಡುಗಡೆಗೂ ಮುನ್ನ ಸ್ಪೆಷಲ್ ಸ್ಕ್ರೀನಿಂಗ್ ಹಾಗೂ ಸೆನ್ಸಾರ್‌ಶಿಪ್ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹ ಮಾಡಲಾಗಿದೆ. ಇಂತಹ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
'ಆದಿಪುರುಷ್' ಸಿನಿಮಾ ಮೇಕಿಂಗ್‌ನಲ್ಲಿ ಕೆಲವು ತಪ್ಪುಗಳನ್ನು ಮಾಡಲಾಗಿದೆ. ಸಿನಿಮಾ ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಕೆಲವು ಪಾತ್ರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ. ಟೀಸರ್‌ನಲ್ಲಿ ಮಾಡಿದ ತಪ್ಪು ಸಿನಿಮಾದಲ್ಲಿ ಇದ್ದರೆ, ಸನಾತನ ಧರ್ಮಕ್ಕೆ ಸೇರಿದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಹೀಗಾಗಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬಿಡುಗಡೆಗೂ ಮುನ್ನ ವಿಶೇಷ ಸ್ಕ್ರೀನಿಂಗ್ ಮಾಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
'ಆದಿಪುರುಷ್'ಗೆ ವಿವಾದ ಹೊಸದೇನಲ್ಲ
'ಆದಿಪುರುಷ್' ಸಿನಿಮಾಗೆ ವಿವಾದಗಳೇನು ಹೊಸದಲ್ಲ. ಸಿನಿಮಾದ ಫಸ್ಟ್ ಲುಕ್‌ನಿಂದಲೂ ಒಂದಲ್ಲ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಹನುಮಂತ, ರಾವಣ ಪಾತ್ರಗಳಿಗೆ ಟ್ರೋಲ್ ಆಗಿದ್ದವು. ಆ ವೇಳೆ ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಈ ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.
ಉತ್ತರ ಪ್ರದೇಶದಲ್ಲೂ 'ಆದಿಪುರುಷ' ಸಿನಿಮಾದ ಟೀಸರ್ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಕಿಡಿಕಾರಿದ್ದರು. ಹಾಗೇ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದರು. ಇನ್ನು ವಿಎಫ್‌ಎಕ್ಸ್ ಅಂತೂ ಟ್ರೋಲ್ ಮೇಲೆ ಟ್ರೋಲ್ ಆಗಿತ್ತು. ಈಗ ಸೆನ್ಸಾರ್ ಬೋರ್ಡ್‌ಗೆ ಪತ್ರ ಬರೆದಿದ್ದು, ಬಿಡುಗಡೆ ಹೊತ್ತಲ್ಲಿ ವಿವಾದಗಳು ಹೆಚ್ಚಾದರೆ ಚಿತ್ರತಂಡಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.


Click it and Unblock the Notifications











