ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಬೆಳ್ಳಿತೆರೆಯ ಶ್ರೀರಾಮನಿಂದ ದೇಣಿಗೆ: ಮೊತ್ತ ಎಷ್ಟು? ಯಾಕೆ?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮತ್ತೊಂದು ಸಿನಿಮಾ ಜೂನ್ 16ಕ್ಕೆ ರಿಲೀಸ್ ಆಗಲಿದೆ. ಈ ಬಾರಿ ಪ್ರಭಾಸ್ ಶ್ರೀರಾಮನ ಅವತಾರ ತಾಳಿದ್ದು, ಬೆಳ್ಳಿ ಪರದೆ ಮೇಲೆ ರಂಜಿಸಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಟ್ರೈಲರ್ ಡಾರ್ಲಿಂಗ್ ಅಭಿಮಾನಿಗಳನ್ನು ರಂಜಿಸಿದೆ.

'ಆದಿಪುರುಷ್' ಸಿನಿಮಾದ ರಿಲೀಸ್ ಡೇಟ್ ಸಮೀಪಿಸುತ್ತಿದ್ದಂತೆ ಪ್ರಭಾಸ್ ಆಕ್ಟಿವ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಭಾಸ್ ಗೆಲ್ಲಲೇ ಬೇಕಾಗಿದೆ. 'ಬಾಹುಬಲಿ' ಸಿನಿಮಾ ಬಳಕ ಪ್ರಭಾಸ್ ನಟಿಸಿದ ಯಾವುದೇ ಸಿನಿಮಾನೂ ಗೆದ್ದಿಲ್ಲ. ಹೀಗಾಗಿ 'ಆದಿಪುರುಷ್' ಬಾಕ್ಸಾಫೀಸ್‌ನಲ್ಲಿ ಗೆಲ್ಲಬೇಕಿದೆ.

Adipurush Star Prabhas Donated 10 Lakhs Rs. to Bhadrachalam Sita Ramachandraswamy temple

ಇನ್ನೇನು ಕೆಲವೇ ದಿನಗಳಲ್ಲಿ ಶ್ರೀರಾಮನಾಗಿ ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬೆನ್ನಲ್ಲೇ ಭದ್ರಾಚಲಂನಲ್ಲಿರು ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ದೇವಸ್ಥಾನದ ಮೇಲ್ವೀಚಾರಕರಿಗೆ 10 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.

ಪ್ರಭಾಸ್ 10 ಲಕ್ಷ ರೂ. ದೇಣಿಗೆ

ತೆಲಂಗಾಣ ರಾಜ್ಯದ ಭದ್ರಾಚಲಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನವು ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷವೂ ಸೀತಾರಾಮ ಕಲ್ಯಾಣವನ್ನು ಆಚರಣೆ ಮಾಡಲಾಗುತ್ತೆ. ವಿವಿಧ ಮೂಲೆಗಳಿಂದ ಅನೇಕ ಭಕ್ತರು ಆಗಮಿಸುತ್ತಾರೆ.

ಇದೇ ಶ್ರೀ ಸೀತಾರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ 'ಆದಿಪುರುಷ್' ನಟ ಪ್ರಭಾಸ್ ಸುಮಾರು 10 ಲಕ್ಷ ರೂ.ಯನ್ನು ದೇಣಿಗೆಯಾಗಿ ನೀಡಿದ್ದಾರೆ. ಪ್ರಭಾಸ್ ಚಿಕ್ಕಪ್ಪ ಸತ್ತನಾರಾಯಣ ರಾಜು ಈ 10 ಲಕ್ಷ ರೂ. ಚೆಕ್ ಅನ್ನು ದೇವಸ್ಥಾನದ ಮೇಲ್ವೀಚಾರಕರಿಗೆ ಹಸ್ತಾಂತರ ಮಾಡಿದ್ದಾರೆ.

Adipurush Star Prabhas Donated 10 Lakhs Rs. to Bhadrachalam Sita Ramachandraswamy temple

ಶ್ರೀರಾಮನ ಅವತಾರದಲ್ಲಿ ಪ್ರಭಾಸ್

ಪ್ರಭಾಸ್ ಶೀಘ್ರದಲ್ಲಿಯೇ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಆದಿಪುರುಷ್' ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ರಾಘವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಇನ್ನಿಲ್ಲದ ಕುತೂಹಲವಿದೆ.

'ಆದಿಪುರುಷ್' ಸಿನಿಮಾವನ್ನು ಬಾಲಿವುಡ್‌ ನಿರ್ದೇಶಕ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಮೋಷನ್ ಕ್ಯಾಪ್ಚರ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರಿಗೆ ಈ ವಿಶಿಷ್ಟ ಅನುಭವವನ್ನು ನೀಡಲಿದೆ. ಪ್ರಭಾಸ್ ಜೊತೆ ಸೀತೆಯಾಗಿ ಕೃತಿ ಸೆನನ್ ನಟಿಸಿದ್ದರೆ, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಹಾಗೂ ಲಂಕೇಶನ ಪಾತ್ರದಲ್ಲಿ ಸೈಫ್ ಅಲಿಖಾನ್ ನಟಿಸಿದ್ದಾರೆ.

ಪ್ರಭಾಸ್ ಬಳಿ ನಾಲ್ಕೈದು ಸಿನಿಮಾ

ಇನ್ನು ಪ್ರಭಾಸ್ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. 'ಆದಿಪುರುಷ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಬಿಡುಗಡೆಯಾಗಲಿದೆ. ಸದ್ಯ ಈ ಸಿನಿಮಾ ಕೊನೆಯ ಹಂತದಲ್ಲಿದೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದೇ ಸೆಪ್ಟೆಂಬರ್ 28ರಂದು ಸಿನಿಮಾ ರಿಲೀಸ್ ಆಗಲಿದೆ.

ಇದರೊಂದಿಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾ, ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಲಾರ್' ಸಿನಿಮಾ ಬಳಿಕ ನಾಗ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ ಕೆ' ರಿಲೀಸ್ ಆಗಲಿದೆ. ಹೀಗಾಗಿ ದೊಡ್ಡ ಪ್ರಾಜೆಕ್ಟ್‌ಗಲ್ಲೇ ಪ್ರಭಾಸ್ ನಟಿಸುತ್ತಿದ್ದಾರೆ.

More from Filmibeat

English summary
Adipurush Star Prabhas Donated 10 Lakhs Rs. to Bhadrachalam Sita Ramachandraswamy temple, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X