3 ವರ್ಷದ ಬಳಿಕ ಅನುಷ್ಕಾ ಸಿನಿಮಾ ರಿಲೀಸ್: ಬಿಡುಗಡೆಗೂ ಮುನ್ನ ಪವನ್.. ಆಮೇಲೆ ಚಿರು ಟಕ್ಕರ್!

ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಕೇವಲ ತೆಲುಗು ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸೂಪರ್‌ಸ್ಟಾರ್. 'ಅರುಂಧತಿ', 'ಬಾಹುಬಲಿ' ಅಂತಹ ಎವರ್‌ಗ್ರೀನ್ ಸಿನಿಮಾ ಕೊಟ್ಟ ನಟಿ. ಆದರೆ, ಇತ್ತೀಚೆಗೆ ಅನುಷ್ಕಾ ಸಿನಿಮಾದಿಂದ ಕೊಂಚ ದೂರವೇ ಉಳಿದ್ದರು.

2020ರಲ್ಲಿ ರಿಲೀಸ್ ಆಗಿದ್ದ 'ನಿಶ್ಯಬ್ದ' ಸಿನಿಮಾವೇ ಕೊನೆ. ಆ ಬಳಿಕ ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೂ, ಈ ಸಿನಿಮಾದ ಶೂಟಿಂಗ್ ಕೂಡ ಕೊಂಚ ತಡವಾಯ್ತು. ಅದಕ್ಕೆ ಕಾರಣಗಳೇನು ಅನ್ನೋದನ್ನು ತಂಡ ಇನ್ನೂ ರಿವೀಲ್ ಮಾಡಿಲ್ಲ.

Anushka Shetty-Miss Shetty Mr. Polishetty Movie

ಕೊನೆಗೂ ಮೂರು ವರ್ಷಗಳ ಬಳಿಕ ಅನುಷ್ಕಾ ಶೆಟ್ಟಿಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ರಿಲೀಸ್‌ಗೆ ಮುಂದಾಗಿದೆ. ಸುಮಾರು ಮೂರು ವರ್ಷಗಳ ಬಳಿಕ ಅನುಷ್ಕಾ ಶೆಟ್ಟಿಯ ಸಿನಿಮಾವೊಂದು ರಿಲೀಸ್ ಆಗುತ್ತಿದೆ. ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಅಭಿಮಾನಿಗಳ ಮುಖದಲ್ಲಿ ನಗು ತರಿಸಿದೆ.

3 ವರ್ಷಗಳ ಬಳಿಕ ತೆರೆಮೇಲೆ ಅನುಷ್ಕಾ ಶೆಟ್ಟಿ

'ಬಾಹುಬಲಿ' ಅಂತಹ ಮೆಗಾ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ ಬಳಿಕ ಅನುಷ್ಕಾ ಶೆಟ್ಟಿ ಯಾಕೋ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಿಧಾನವಾಗಿ ಒಂದೊಂದೇ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಎರಡ್ಮೂರು ವರ್ಷಕ್ಕೊಮ್ಮೆ ಅನುಷ್ಕಾ ಶೆಟ್ಟಿ ಸಿನಿಮಾ ರಿಲೀಸ್ ಆಗುತ್ತಿವೆ. ಈಗಲೂ ಅಷ್ಟೇ 3 ವರ್ಷ ಗ್ಯಾಪ್ ಕೊಟ್ಟು ಅನುಷ್ಕಾ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ.

Anushka Shetty-Miss Shetty Mr. Polishetty Movie

2020ರಲ್ಲಿ 'ನಿಶ್ಯಬ್ದ' ಸಿನಿಮಾ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಅಲ್ಲಿಂದ ಸಿನಿಮಾ ಒಪ್ಪಿಕೊಂಡಿದ್ದರು. ಅದು ಶೂಟಿಂಗ್ ಮುಗಿದು ಬಿಡುಗಡೆಯಾಗುವುದಕ್ಕೆ ಮೂರು ವರ್ಷ ತೆಗೆದುಕೊಂಡಿದೆ. ಕೊನೆಗೂ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಮೂರು ವರ್ಷಗಳ ಬಳಿಕ ತೆರೆಮೇಲೆ ಅನುಷ್ಕಾ ಶೆಟ್ಟಿಯನ್ನು ನೋಡಬಹುದಾಗಿದೆ.

'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಯಾವಾಗ?

ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಕೊನೆಗೂ ರಿಲೀಸ್ ಆಗುತ್ತಿದೆ. ಯುವಿ ಕ್ರಿಯೇಷನ್ ಮುಂಬರುವ ಆಗಸ್ಟ್ 4ರಂದು ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದೆ. ಈ ಸಿನಿಮಾವನ್ನು ಮಹೇಶ್ ಬಾಬು ಪಿ ನಿರ್ದೇಶಿಸಿದ್ದು, ರಿಲೀಸ್ ಡೇಟ್ ಅನೌನ್ಸ್ ಮಾಡುವುದರಿಂದಲೇ ಸೀರಿಯಸ್ ಆಗಿ ಪ್ರಚಾರಕ್ಕೆ ಇಳಿದಿದೆ.

ಈ ಸಿನಿಮಾ ಏಪ್ರಿಲ್-ಮೇನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಯಾಕೋ ಸಿನಿಮಾ ರಿಲೀಸ್ ಆಗಲೇ ಇಲ್ಲ. ಆದರೆ, ಟೀಸರ್ ಹಾಗೂ ಹಾಡುಗಳು ರಿಲೀಸ್ ಆಗಿದ್ದು, ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಕೊನೆಗೂ ಅನುಷ್ಕಾ ಶೆಟ್ಟಿ ಬೆಳ್ಳಿ ಪರದೆ ಮೇಲೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಆದರೆ, 3 ವರ್ಷ ಗ್ಯಾಪ್ ಕೊಟ್ಟು ಎಂಟ್ರಿ ಕೊಡುತ್ತಿರೋ ಟಾಲಿವುಡ್ ಸ್ವೀಟಿಗೆ ಸೂಪರ್‌ಸ್ಟಾರ್‌ಗಳು ಪೈಪೋಟಿ ನೀಡುತ್ತಿದ್ದಾರೆ.

ಅನುಷ್ಕಾಗೆ ಚಿರು, ಪವನ್ ಟಕ್ಕರ್

ಆಗಸ್ಟ್ 4 ರಂದು ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿ' ಸಿನಿಮಾ ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿರೋದೇನೋ ನಿಜ. ಆದರೆ, ರಿಲೀಸ್ ಆಗುತ್ತಿರೋ ಹಿಂದೆ ಮುಂದೆ ಟಾಲಿವುಡ್ ದಿಗ್ಗಜರ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದು ಗೊತ್ತಿದ್ದರೂ, ಅನುಷ್ಕಾ ಸಿನಿಮಾ ರಿಲೀಸ್ ಆಗುತ್ತಿರೋದು ಅಚ್ಚರಿ ಮೂಡಿಸಿದೆ.

ಜುಲೈ 28 ರಂದು ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್ ನಟಿಸುತ್ತಿರುವ 'ಬ್ರೋ' ರಿಲೀಸ್ ಆಗುತ್ತಿದೆ. ಇದಾದ ಒಂದು ವಾರದ ಬಳಿಕ ಅನುಷ್ಕಾ ಸಿನಿಮಾ ರಿಲೀಸ್. ಆಗಸ್ಟ್ 8ಕ್ಕೆ ಅಂದರೆ, 'ಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿ' ರಿಲೀಸ್ ಆದ ನಾಲ್ಕು ದಿನಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಲಾ ಶಂಕರ್' ರಿಲೀಸ್ ಆಗುತ್ತಿದೆ. ಈ ಎರಡು ಮೆಗಾ ಸಿನಿಮಾಗಳ ಮಧ್ಯೆ ಅನುಷ್ಕಾ ಹಾಗೂ ನವೀನ್ ಪೋಲಿಶೆಟ್ಟಿ ಸಿನಿಮಾದ ರಿಸಲ್ಟ್ ಏನಾಗುತ್ತೋ? ಈಗಾಗಲೇ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
After a 3 year gap Anushka Shetty's new movie Miss Shetty Mr. Polishetty, is releasing, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X