ರಾಜಮೌಳಿ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ನಿರ್ಧರಿಸಿದ ಮೆಗಾಸ್ಟಾರ್ ಚಿರಂಜೀವಿ

ಮೆಗಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡಬೇಕು ಅನ್ನೋದು ಅದೆಷ್ಟೋ ನಿರ್ದೇಶಕರ ಹಾಗೂ ನಿರ್ಮಾಪಕರ ಕನಸು. ಜೀವಮಾನದಲ್ಲಿ ಚಿರಂಜೀವಿ ಜೊತೆ ಒಂದಾದರೂ ಸಿನಿಮಾ ಮಾಡಬೇಕು ಅಂತ ಕಾದು ಕೂತಿರುವ ಅದೆಷ್ಟೋ ನಿರ್ದೇಶಕರಿದ್ದಾರೆ. ಇದರೊಂದಿಗೆ ಚಿರಂಜೀವಿ ಕೂಡ ಶ್ರೇಷ್ಠ ನಿರ್ದೇಶಕರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ, ಇತ್ತೀಚೆಗೆ ರಾಜಮೌಳಿ ಜೊತೆ ಸಿನಿಮಾ ಮಾಡಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಬಿಡುಗಡೆಗೂ ಪ್ರತಿಯೊಂದಕ್ಕೆ ಸಂದರ್ಶನ ನೀಡಿದ್ದರು. ಅದೇ ಹೇಳಿಕೆ ಈಗ ಮತ್ತೆ ಚರ್ಚೆಯಾಗುತ್ತಿದೆ. ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ರಾಜಮೌಳಿ ಜೊತೆ ಚಿರಂಜೀವಿ ಸಿನಿಮಾ ಮಾಡಲ್ಲ ಎಂದಿದ್ದೇಕೆ? ಈ ಹೇಳಿಕೆ ಹಿಂದಿರೋ ಅಸಲಿ ಸತ್ಯವೇನು? ಅಭಿಮಾನಿಗಳು ಅಂತ ತಲೆಕೆಡಿಸಿಕೊಂಡಿದ್ದಾರೆ.

2ನೇ ಇನ್ನಿಂಗ್ಸ್ ಸೂಪರ್ ಎಂದು ಚಿರು

2ನೇ ಇನ್ನಿಂಗ್ಸ್ ಸೂಪರ್ ಎಂದು ಚಿರು

ಚಿರಂಜೀವಿ 'ಆಚಾರ್ಯ' ಸಿನಿಮಾದ ಸೋಲಿನ ಕಹಿ ಅನುಭವಿಸುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ತನ್ನ ಎರಡನೇ ಇನ್ನಿಂಗ್ಸ್‌ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು. " ನಾನು ಅನೇಕ ನಿರ್ದೇಶಕರೊಂದಿಗೆ, ನಟರೊಂದಿಗೆ ಕೆಲಸ ಮಾಡಿದ್ದೇನೆ. ಪ್ರತಿ ಹಂತದಲ್ಲೂ ನನಗೆ ವೃತ್ತಿ ಬದುಕಿನ ಗ್ರಾಫ್ ಅದ್ಭುತವಾಗಿದೆ. ಸಿನಿ ಬದುಕಿನ ಪ್ರತಿಕ್ಷಣವನ್ನು ಅನುಭವಿಸಿದ್ದೇನೆ. 'ಖೈದಿ ನಂ 150' ಸಿನಿಮಾದಿಂದ ಹೊಸ ಇನ್ನಿಂಗ್ಸ್ ಶುರುಮಾಡಿದ್ದೆ, ಅಂದಿನಿಂದ ಸೈರಾ ನರಸಿಂಹ ರೆಡ್ಡಿವರೆಗೂ ಗೆದ್ದಿದ್ದೇನೆ ಎಂದಿದ್ದರು.

ಇಳಿವಯಸ್ಸಿನವರೆಗೂ ಕ್ಲಿಂಟ್‌ರಂತೆ ನಟನೆ

ಇಳಿವಯಸ್ಸಿನವರೆಗೂ ಕ್ಲಿಂಟ್‌ರಂತೆ ನಟನೆ

"ನನ್ನ ನೆಚ್ಚಿನ ಕ್ಲಿಂಟ್ ಈಸ್ಟ್‌ವುಡ್. ನನಗೆ 90 ವರ್ಷ ವಯಸ್ಸು ಆಗುವವರೆಗೂ ಅವರಂತೆಯೇ ನಟಿಸುತ್ತೇನೆ. ತೆಲುಗು ಪ್ರೇಕ್ಷಕರು ಪ್ರತಿ ಹಂತದಲ್ಲಿಯೂ ನನ್ನನ್ನು ಬೆಂಬಲಿಸಿದ್ದಾರೆ. ನನಗೆ ಪ್ರೀತಿ ತೋರಿದ್ದಾರೆ. ಈ ಕಾರಣಕ್ಕೆ ನಾನು ತೆಲುಗಿನವನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನಾನು ಎಂದೂ ಹಣಕ್ಕಾಗಿ ಕೆಲಸ ಮಾಡಿಲ್ಲ." ಎಂದು ಆ ಸಂದರ್ಶನದಲ್ಲಿ ಹೇಳಿದ್ದರು. ಇದೇ ವೇಳೆ ರಾಜಮೌಳಿ ಸಿನಿಮಾ ಬಗ್ಗೆನೂ ಚಿರಂಜೀವಿ ಮಾತಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಾಜಮೌಳಿ ತೃಪ್ತಿ ಪಡಿಸುವುದು ಗೊತ್ತಿಲ್ಲ

ರಾಜಮೌಳಿ ತೃಪ್ತಿ ಪಡಿಸುವುದು ಗೊತ್ತಿಲ್ಲ

"ರಾಜಮೌಳಿ ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂಬುವುದರಲ್ಲಿ ಸತ್ಯವಿಲ್ಲ. ಅವರೊಂದಿಗೆ ಕೆಲಸ ಮಾಡುವ ಆಸೆ ಕೂಡ ನನಗಿಲ್ಲ. ಒಂದು ವೇಳೆ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೂ ನಟಿಸುವುದಿಲ್ಲವೆಂದು." ಮೆಗಾಸ್ಟಾರ್ ಹೇಳಿಕೆ ಕೊಟ್ಟು ಶಾಕ್ ಕೊಟ್ಟಿದ್ದರು. ಹಾಗೇ ಯಾಕೆ ಅವರ ಸಿನಿಮಾದಲ್ಲಿ ನಟಿಸವುದಿಲ್ಲ ಅಂತಾನೂ ಹೇಳಿದ್ದರು. " ರಾಜಮೌಳಿಯನ್ನು ತೃಪ್ತಿಗೊಳಿಸುವುದು ನನಗೆ ಗೊತ್ತಿಲ್ಲ. ನನಗೆ ಕಷ್ಟವಾಗುತ್ತೆ." ಎಂದು ಮೆಗಾಸ್ಟಾರ್ ಹೇಳಿದ್ದಾರೆ.

ಪವನ್ ಕಲ್ಯಾಣ್ ಜೊತೆ ನಟಿಸಲು ಇಷ್ಟ

ಪವನ್ ಕಲ್ಯಾಣ್ ಜೊತೆ ನಟಿಸಲು ಇಷ್ಟ

"ನನಗೆ ನನ್ನ ತಮ್ಮ ಪವನ್ ಕಲ್ಯಾಣ್ ಜೊತೆ ನಟಿಸಬೇಕು ಅಂತ ಆಸೆ. ಆದರೆ, ಅದಕ್ಕೆ ಸರಿಯಾದ ಕಥೆ ಸಿಗುತ್ತಿಲ್ಲ. ಇಬ್ಬರಿಗೂ ಸರಿ ಹೊಂದುವಂತಹ ಕಥೆಯೇ ಸಿಗುತ್ತಿಲ್ಲ. ಒಂದೊಳ್ಳೆ ಕಥೆ, ಸ್ಕ್ರೀಪ್ಟ್ ಸಿಕ್ಕರೆ, ತಮ್ಮನೊಂದಿಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ.

'ಆಚಾರ್ಯ' ಸಿನಿಮಾ ಸೋಲು

'ಆಚಾರ್ಯ' ಸಿನಿಮಾ ಸೋಲು

ಮೆಗಾಸ್ಟಾರ್ ಚಿರಂಜೀವಿ ಹಾಗೂ ಪುತ್ರ ರಾಮ್‌ ಚರಣ್ ಅಭಿನಯ ಸಿನಿಮಾ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದೆ. ಅಪ್ಪ-ಮಗ ಇಬ್ಬರೂ ಸ್ಟಾರ್. ಅಲ್ಲದೆ ಸ್ಟಾರ್ ನಿರ್ದೇಶಕ ಕೊರಟಾಲ ಶಿವ 'ಆಚಾರ್ಯ' ಆಕ್ಷನ್ ಕಟ್ ಹೇಳಿದ್ದರು. ಆದರೂ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. 'ಆಚಾರ್ಯ' ಸಿನಿಮಾ ನೋಡಿ, ಅಭಿಮಾನಿಗಳು ಬೇಸರ ಹೊರಹಾಕಿದ್ದು, ಈಗಲಾದರೂ ಮೆಗಾಸ್ಟಾರ್ ತಮ್ಮ ನಿರ್ಧಾರ ಬದಲಿಸುತ್ತಾರಾ? ಎನ್ನುವುದು ಕುತೂಹಲ.

More from Filmibeat

English summary
After Acharya Flop Chiranjeevi Says He Will Not Work With SS Rajamouli, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X