"ಪ್ರತಿ ಸಿನಿಮಾದಲ್ಲೂ ಪ್ರಭಾಸ್ ಪಕ್ಕ ಅನುಷ್ಕಾ ಇರಬೇಕಷ್ಟೇ": 'ಆದಿಪುರುಷ್' ಟ್ರೈಲರ್ ನೋಡಿ ಮೀಮ್ಸ್!

ಟಾಲಿವುಡ್, ಬಾಲಿವುಡ್ ಸಿನಿ ಪ್ರೇಮಿಗಳಿಗೆ ಇರೋ ಗೊಂದಲ ಇನ್ನೂ ಕಡಿಮೆಯಾಗಿಲ್ಲ. ಪ್ರಭಾಸ್, ಕೃತಿ ಸೆನನ್ ಹಾಗೂ ಅನುಷ್ಕಾ ಶೆಟ್ಟಿ ಮೂವರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ. ಅದೇ ಕಾರಣಕ್ಕೆ ಟಾಲಿವುಡ್ ಮಂದಿ 'ಆದಿಪುರುಷ್' ಟ್ರೈಲರ್ ನೋಡಿ ಹೆವಿ ಟ್ರೋಲ್ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ 'ಆದಿಪುರುಷ್' ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್, ಕೃತಿ ಸೆನನ್ ಪ್ರಮುಖ ಆಕರ್ಷಣೆಯಾಗಿದ್ದರು. ಫ್ಯಾನ್ಸ್ ಇಬ್ಬರ ಕೆಮಿಸ್ಟ್ರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಒಂದ್ಕಡೆ ಟ್ರೈಲರ್, ಇನ್ನೊಂದ್ಕಡೆ ಈ ಜೋಡಿ ಫುಲ್ ಕನ್ಫ್ಯೂಸ್ ಆಗಿದ್ದೇನೋ ನಿಜ.

Adipurush Trailer

'ಆದಿಪುರುಷ್' ಟ್ರೈಲರ್ ರಿಲೀಸ್ ಆದ್ಮೇಲೆ ಒಂದು ನಿರ್ಧಾರಕ್ಕೆ ಬಂದ್ಬಿಟ್ಟಿದ್ದಾರೆ. ಸೀತೆ ಪಾತ್ರ ಕೃತಿ ಸೆನನ್ ಅಲ್ಲ. ಅನುಷ್ಕಾ ಶೆಟ್ಟಿನೇ ಮಾಡಬೇಕು ಅಂತ ಪಟ್ಟು ಹಿಡಿದಿದಂತಿದೆ. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಮೀಮ್ಸ್‌ಗಳೇ ಕಾರಣ.

'ಆದಿಪುರುಷ್' ಟ್ರೈಲರ್ ನೋಡಿ ಮೀಮ್ಸ್

'ಆದಿಪುರುಷ್' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಈ ಸಿನಿಮಾದ ಟೀಸರ್ ಟೀಕೆಗೆ ಗುರಿಯಾಗಿದ್ದರೂ, ಟ್ರೈಲರ್ ಮೂಲಕ ಬಹುತೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೂ, ಅಭಿಮಾನಿಗಳಿಗೆ ಹಿಡಿಸದ ಒಂದು ಅಂಶವಿದೆ. ಅದನ್ನೇ ಮೀಮ್ಸ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಅದೇ ಕೃತಿ ಸೆನನ್ ಸೀತೆಯಾಗಿ ನಟಿಸಿದ್ದಾರೆ. ಇದೇ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅನುಷ್ಕಾ ಶೆಟ್ಟಿಯನ್ನು ಎಳೆತಂದು ಮೀಮ್ಸ್ ಮಾಡುತ್ತಿದ್ದಾರೆ. ಈ ಮೀಮ್ಸ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Adipurush Trailer

"ಪ್ರಭಾಸ್ ಪಕ್ಕ ಅನುಷ್ಕಾ ಇರಬೇಕಷ್ಟೇ"

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದೆ. ಅದರಲ್ಲೂ 'ಬಾಹುಬಲಿ' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ಮೇಲೆ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಬಿಟ್ಟು ಬೇರೆ ಯಾರನ್ನೂ ಕಲ್ಪನೆನೂ ಮಾಡಿಕೊಳ್ಳುತ್ತಿಲ್ಲ. ಅಲ್ಲದೆ ರಿಯಲ್ ಲೈಫ್‌ನಲ್ಲೂ ಈ ಜೋಡಿಯ ಸಂಬಂಧ ಉತ್ತಮವಾಗಿದೆ. ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಅಂತ ವಾದ ಮಾಡುವವರೂ ಇದ್ದಾರೆ.

ಅದಕ್ಕೆ ಕೃತಿ ಸೆನನ್ ಸೀತೆ ಅವತಾರವೆತ್ತಿರುವ ಫೋಟೊ ಪಕ್ಕದಲ್ಲಿ ಅದೇ ಗೆಟಪ್‌ನಲ್ಲೇ ಅನುಷ್ಕಾ ಶೆಟ್ಟಿ ಫೋಟೊವನ್ನೂ ಕೂರಿಸಿ ಮೀಮ್ಸ್ ಮಾಡಿದ್ದಾರೆ. " ಅದೇನಾದರೂ ಆಗಲಿ ಪ್ರಭಾಸ್ ಪಕ್ಕ ಅನುಷ್ಕಾ ಶೆಟ್ಟಿ ಇರಬೇಕು. ಮತ್ತೆ ಯಾರೂ ಸೆಟ್ಟಾಗುವುದಿಲ್ಲ" ಎಂದು ಮೀಮ್ಸ್ ಮಾಡುತ್ತಿದ್ದಾರೆ.

'ಆದಿಪುರುಷ್' ಟ್ರೈಲರ್ ಮೀಮ್ಸ್ ನಿಲ್ಲುತ್ತಿಲ್ಲ

ಸೀತೆ ಪಾತ್ರದಲ್ಲಿ ಕೃತಿ ಸೆನನ್ ಅಲ್ಲ ಅನುಷ್ಕಾ ಶೆಟ್ಟಿ ಇರಬೇಕು ಅನ್ನೋ ಮೀಮ್ಸ್ ಟಾಲಿವುಡ್‌ನಲ್ಲಿ ವೈರಲ್ ಆಗುತ್ತಿದೆ. ಇನ್ನೊಂದು ಕಡೆ ಇವರಿಬ್ಬರ ಜೋಡಿ ಅಷ್ಟೇ ಅಲ್ಲ ಸಿನಿಮಾ ಕಥೆ ಲೀಕ್ ಆಗಿದೆ ಅಂತಲೂ ಮೀಮ್ಸ್ ಮಾಡುತ್ತಿದ್ದಾರೆ. ರಾಮಾಯಾಣದ ಕಥೆ ಆಗಿರುವುದರಿಂದ ಬಹುತೇಕ ಮಂದಿಗೆ ಸ್ಟೋರಿ ಗೊತ್ತಿದೆ. ಈ ಕಾರಣಕ್ಕೆ 'ಆದಿಪುರುಷ್' ಕಥೆ ಕೂಟ ಮೀಮ್ಸ್ ಮಾಡುವವರ ಕಣ್ಣಿಗೆ ಬಿದ್ದಿದೆ.

ಇನ್ನೊಂದು ಕಡೆ ಸಿನಿಮಾದ ನಿರ್ದೇಶಕ ಓಂ ರಾವತ್ ಕೂಡ ಮೀಮ್ಸ್ ಮಾಡುವವರ ಕಣ್ಣಿಗೆ ಬಿದ್ದಿದ್ದಾರೆ. ಟೀಸರ್ ರಿಲೀಸ್ ಆದಾಗ ಓಂ ರಾವತ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು. ಈಗ ಟ್ರೈಲರ್ ನೋಡಿದ ಮೇಲೆ "ಕ್ಷಮಿಸಿ ಬಿಡಿ ಓಂ.. ಕೋಪದಲ್ಲಿ ಶಾಪ ಕೊಟ್ಟುಬಿಟ್ಟೆವು" ಎಂದು ಪೋಸ್ಟ್ ಮಾಡುತ್ತಿದ್ದಾರೆ.

More from Filmibeat

English summary
After Adipurush Trailer release Prabhas fans wants to See sita as Anushka Shetty hot Kriti Sanon, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X