ಚಿರಂಜೀವಿ ಆಯ್ತು.. ಈಗ ರಾಮ್ ಚರಣ್ ವಿರುದ್ಧ ತಿರುಗಿಬಿದ್ದ ಕೋಟಾ ಶ್ರೀನಿವಾಸ ರಾವ್!

ಟಾಲಿವುಡ್‌ನ ಲೆಜೆಂಡರಿ ಕ್ಯಾರೆಕ್ಟರ್ ನಟ ಕೋಟಾ ಶ್ರೀನಿವಾಸ ರಾವ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರಿಗೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆ ಕೋಟಾ ಶ್ರೀನಿವಾಸ ರಾವ್ ಅವರಿಗೂ ಇದೆ. ಆದರೆ, ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ.

ತೆಲುಗು ಚಿತ್ರರಂಗದ ಪೋಷಕ ಹಾಗೂ ಹಾಸ್ಯ ನಟ ಕೋಟಾ ಶ್ರೀನಿವಾಸ ರಾವ್ ಕಂಡರೆ, ಎಲ್ಲರಿಗೂ ಗೌರವ. ಆದರೆ, ಅವರು ನೀಡುತ್ತಿರುವ ಹೇಳಿಕೆಗಳು ಕೆಲವರನ್ನು ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಹಿರಿಯ ನಟ ಸದ್ಯ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಟಾಲಿವುಡ್‌ನಲ್ಲಿ ಸಿನಿಮಾಗಳನ್ನು ಮಾಡುವ ಹುಮ್ಮಸ್ಸು ಇದ್ದರೂ, ವಯಸ್ಸು ಸಪೋರ್ಟ್ ಮಾಡುತ್ತಿಲ್ಲ ಎನ್ನುತ್ತಿದ್ದಾರೆ ಸಿನಿಮಾ ಮಂದಿ.

ಇಷ್ಟು ದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಕೋಟಾ ಶ್ರೀನಿವಾಸ ರಾವ್, ಈಗ ಬೇಡದೆ ಇರೋ ವಿವಾದಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಟಾಲಿವುಡ್ ತಾರೆಯರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮೆಗಾ ಸ್ಟಾರ್ ಚಿರಂಜೀವಿ ವಿರುದ್ಧ ತಿರುಗಿ ಬಿದ್ದಿದ್ದ ಹಿರಿಯ ನಟ, ಈಗ ರಾಮ್ ಚರಣ್ ತೇಜಾ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಕೋಟಾ ಕೊಟ್ಟ ಹೇಳಿಕೆ ಏನು? ಅದು ವಿವಾದಕ್ಕೆ ಸಿಲುಕಿದ್ದು ಯಾಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ರಾಮ್ ಚರಣ್ ವಿರುದ್ಧ ತಿರುಗಿಬಿದ್ದ ಹಿರಿಯ ನಟ

ರಾಮ್ ಚರಣ್ ವಿರುದ್ಧ ತಿರುಗಿಬಿದ್ದ ಹಿರಿಯ ನಟ

ಟಾಲಿವುಡ್ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ನೀಡಿದ ಹೇಳಿಕೆ ವಿವಾದಕ್ಕೆ ತಿರುಗಿ, ಅದು ತಣ್ಣಗಾಗುವ ಮುನ್ನವೇ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಕೋಟಾ ಶ್ರೀನಿವಾಸ ರಾವ್ ಟಾಲಿವುಡ್ ಮೆಗಾ ಪವರ್‌ಸ್ಟಾರ್‌ ರಾಮ್ ಚರಣ್ ತೇಜಾ ಪರ್ಫಾರ್ಮೆನ್ಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ರಾಮ್ ಚರಣ್ ಆಕ್ಟಿಂಗ್ ಸ್ಕಿಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಹೇಳಿಕೆಗಳು ಈಗ ರಾಮ್ ಚರಣ್ ಅಭಿಮಾನಿಗಳನ್ನು ಕೆರಳಿಸಿದೆ.

ಕೋಟಾ ಕೊಟ್ಟ ಹೇಳಿಕೆ ಏನು?

ಕೋಟಾ ಕೊಟ್ಟ ಹೇಳಿಕೆ ಏನು?

"ಜೂ.ಎನ್‌ಟಿಆರ್, ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್ ಬರುತ್ತಾರೆ. ಅವರು ಈ ಹಂತಕ್ಕೆ ಬರಲು ಕಾರಣ, ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ. ರಾಮ್ ಚರಣ್‌ಗೆ ಇನ್ನೂ ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ಅವರ ಸಾಮರ್ಥ್ಯ ಹೊರಹಾಕುತ್ತಾರೆ." ಎಂದು ಕೋಟಾ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗಳಿಂದ ಮೆಗಾಸ್ಟಾರ್ ಕುಟುಂಬದ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.

ಚಿರಂಜೀವಿ ವಿರುದ್ಧ ಕೋಟಾ ಕಿಡಿ

ಚಿರಂಜೀವಿ ವಿರುದ್ಧ ಕೋಟಾ ಕಿಡಿ

ಮೇ ಡೇಯಂದು ಚಿರಂಜೀವಿ ಹೈದರಾಬಾದ್‌ನ ಚಿತ್ರಪುರಿ ಪ್ರದೇಶದಲ್ಲಿ ಚಲನಚಿತ್ರ ಕಾರ್ಮಿಕರಿಗಾಗಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. "ಚಿರಂಜೀವಿ ನಿರ್ಮಿಸುವ ಆಸ್ಪತ್ರೆಗೆ ಯಾರೂ ಹೋಗುವುದಿಲ್ಲ. ಚಿರಂಜೀವಿ ಯಾರಿಗಾದರೂ ಸಹಾಯ ಮಾಡಿದ್ದಾರಾ? ಚಿರಂಜೀವಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಚಿರಂಜೀವಿ ತಮ್ಮ ಸಿನಿಮಾಗಳಲ್ಲಿ ಕಲಾವಿದರಿಗೆ ಪಾತ್ರಗಳನ್ನು ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಅನುಸೂಯ ಬಗ್ಗೆ ಹೇಳಿಕೆ

ಅನುಸೂಯ ಬಗ್ಗೆ ಹೇಳಿಕೆ

ಕೋಟಾ ಶ್ರೀನಿವಾಸ ರಾವ್ ಇಲ್ಲಿಗೆ ನಿಲ್ಲಿಸಿಲ್ಲ. ತೆಲುಗು ನಿರೂಪಕಿ ಅನುಸೂಯ ಭಾರದ್ವಾಜ್ ಡ್ರೆಸ್ಸಿಂಗ್ ಸೆನ್ಸ್ ವಿರುದ್ಧ ಕಮೆಂಟ್ ಮಾಡಿದ್ದರು. ಅನುಸೂಯ ತೆಲುಗಿನ ಫೇಮಸ್ ಕಾಮಿಡಿ ಶೋ ಜಬರ್ದಸ್ತ್ ಅನ್ನು ನೆಡೆಸಿಕೊಡುತ್ತಾರೆ. ಹೀಗೆ ಒಂದಲ್ಲ ಒಂದು ವಿವಾದಗಳಿಕೆ ಕೋಟಾ ಶ್ರೀನಿವಾಸ ರಾವ್ ಸಿಲುಕುತ್ತಲೇ ಇದ್ದಾರೆ.

More from Filmibeat

English summary
After Chiranjeevi Kota Srinivasa Rao Criticize About Ram Charan Performance Leads Into Controversy, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X