"ಅಧ್ಯಾಯ ಮುಗೀತು" ಎಂದ ಟಾಲಿವುಡ್ ನಿರ್ಮಾಪಕ: ಚಿಟ್ಟಿಬಾಬುಗೆ ಭಗವದ್ಗೀತೆ ಸಾಲುಗಳಿಂದಲೇ ತಿರುಗೇಟು!

ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ರುಥ್ ಪ್ರಭು ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿದೆ.

ಕಳೆದ ಮೂರು ದಿನಗಳಿಂದ 'ಶಾಕುಂತಲಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಖರಾಬು ಪ್ರದರ್ಶನ ಕಾಣುತ್ತಿದೆ. ಎರಡಂಕಿಯನ್ನು ದಾಟುವುದಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಈ ಸಿನಿಮಾದ ಗ್ರಾಫಿಕ್ಸ್ ನೋಡಿ ಪ್ರೇಕ್ಷಕರೇ ಗರಂ ಆಗಿದ್ದರು. ಕಳಪೆ ಗ್ರಾಫಿಕ್ಸ್ ಕಂಡು ಕಿಡಿಕಾರಿದ್ದರು.

After Chittibabu Comment Shaakuntalam Failure Samantha Shares Cryptic Post

ಇನ್ನೊಂದು ಕಡೆ ತೆಲುಗಿನ ನಿರ್ಮಾಪಕ ಚಿಟ್ಟಿಬಾಬು 'ಶಾಕುಂತಲಂ' ಸಿನಿಮಾ ನೋಡಿ ಸಮಂತಾ ವಿರುದ್ಧ ಕಮೆಂಟ್ ಮಾಡಿದ್ದರು. "ಸಮಂತಾ ಅಧ್ಯಾಯ ಮುಗೀತು" ಅಂತ ಟೀಕಿಸಿದ್ದರು. ಅದಕ್ಕೀಗ ಸಮಂತಾ ಭಗವದ್ಗೀತೆಯ ಸಾಲುಗಳಿಂದ ತಿರುಗೇಟು ಕೊಟ್ಟಿದ್ದಾರೆ.

ಚಿಟ್ಟಿಬಾಬುಗೆ ಭಗವದ್ಗೀತೆ ಪಾಠ

ಸಮಂತಾ ಡೇರಿಂಗ್ ನಟಿ. ಸೋಲು ಗೆಲುವುಗಳನ್ನು ಹೇಗೆ ಸ್ವೀಕರಿಸಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. 'ಶಾಕುಂತಲಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಾಗಲೂ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಇನ್ನೊಂದು ಕಡೆ ನಿರ್ಮಾಪಕ ಚಿಟ್ಟಿ ಬಾಬು ಕೂಡ " ಕರಿಯರ್ ಮುಗೀತು" ಅಂತ ಟೀಕಿಸಿದ್ದರು. ಅದಕ್ಕೆ ಸಮಂತಾ ತನ್ನದೇ ಒಂದು ಫೋಟೊ ಶೇರ್ ಮಾಡಿ ಭಗವದ್ಗೀತೆ ಪಾಠ ಮಾಡಿದ್ದಾರೆ.

ಸಮಂತಾ ಟ್ವೀಟ್ ಬಗ್ಗೆನೂ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ತನ್ನ ವಿರೋಧಿಸುವವರಿಗೆ ಭಗವದ್ಗೀತೆ ಹಾಗೂ ಕರ್ಮವನ್ನು ಮುಂದಿಟ್ಟುಕೊಂಡು ಸೈಲೆಂಟಾಗಿ ತಿರುಗೇಟು ಕೊಟ್ಟಿದ್ದಾರೆ. ಪರೋಕ್ಷವಾಗಿ ಚಿಟ್ಟಿಬಾಬುಗೆ ಭಗವದ್ಗೀತೆ ಸಾಲುಗಳ ಮೂಲಕ ಕರ್ಮದ ಪಾಠ ಮಾಡಿದ್ದಾರೆ.

ಸಮಂತಾ ಪೋಸ್ಟ್ ಮಾಡಿದ ಸಾಲುಗಳ ಅರ್ಥವೇನು?

ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಭಗವದ್ಗೀತೆಯ ಈ ಸಾಲುಗಳನ್ನು ಶೇರ್ ಮಾಡಿದ್ದರು. "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ". ಚಿಟ್ಟಿಬಾಬು ತಿರುಗೇಟು ಕೊಡಲೆಂದೇ ಈ ಸಾಲುಗಳನ್ನು ಬಳಸಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಸಾಲು ಅರ್ಥ ಹೀಗಿದೆ.

"ನಿನಗೆ ನಿನ್ನ ಕರ್ಮಗಳನ್ನು ಮಾಡುವುದಕ್ಕೆ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಅಲ್ಲ. ಈ ಕಾರಣಕ್ಕೆ ನೀನು ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯನ್ನು ಹಾಗೂ ಫಲವನ್ನು ನಿರೀಕ್ಷೆ ಮಾಡಬೇಡ. ಹಾಗೆ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸಿ ಕೆಲಸ ಮಾಡು" ಎಂಬುದಾಗಿದೆ. ಈ ಸಾಲುಗಳನ್ನು ನೆಟ್ಟಿಗರು ಚಿಟ್ಟಿಬಾಬುಗೇ ಹೇಳಿದ್ದಾರೆಂದು ಕಮೆಂಟ್ ಮಾಡುತ್ತಿದ್ದಾರೆ.

ಲಂಡನ್‌ಗೆ ಹಾರಿದ ಸಮಂತಾ

ಶಾಕುಂತಲಂ ಸಿನಿಮಾ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಮೊದಲ ವಾರಾಂತ್ಯದಲ್ಲಿ 10 ಕೋಟಿ ರೂ. ಗಳಿಸುವುದಕ್ಕೂ ಸಾಧ್ಯವಾಗಿಲ್ಲ. ಈ ಕಾರಣಕ್ಕೆ 'ಶಾಕುಂತಲಂ' ಸಮಂತಾ ವೃತ್ತಿ ಬದುಕಿನಲ್ಲೇ ಹೀನಾಯ ಸೋಲು ಕಂಡ ಸಿನಿಮಾ ಎಂದು ಟ್ರೇಡ್ ಅನಲಿಸ್ಟ್ ಕಮೆಂಟ್ ಮಾಡುತ್ತಿದ್ದಾರೆ.

'ಶಾಕುಂತಲಂ' ಸಿನಿಮಾವನ್ನು ಇಲ್ಲೇ ಬಿಟ್ಟು ಸಮಂತಾ ಲಂಡನ್‌ಗೆ ಹಾರಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್ ಖ್ಯಾತಿಯ ರಾಜ್ & ಡಿಕೆ ನಿರ್ದೇಶಿಸುತ್ತಿರುವ ಸಿಟಾಡೆಲ್‌ ಶೂಟಿಂಗ್‌ನಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿಸಿದ್ದಾರೆ. ಅಲ್ಲದೆ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ 'ಖುಷಿ' ಸಿನಿಮಾ ಕೂಡ ರಿಲೀಸ್ ಆಗಬೇಕಿದೆ.

More from Filmibeat

English summary
After Shaakuntalam Failure Samantha Shares Cryptic Post On Instagram. Telugu Produce Chittibabu claims that her career is over, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X