"ನಾನು ಸಿಂಗಲ್ ಅಲ್ಲ" ಅನ್ನೋದಕ್ಕೆ ಪ್ರೋಫ್ ಕೊಟ್ಟ ಟಿಟೌನ್ ರೌಡಿ; ರಶ್ಮಿಕಾ ಜೊತೆ ವಿಜಯ್ ಲಂಚ್..ಮದುವೆ ಫಿಕ್ಸ್?

ಪ್ರಭಾಸ್, ಸಲ್ಮಾನ್ ಖಾನ್ ಮದುವೆ ವಿಷಯ ಎಷ್ಟು ಸದ್ದು ಮಾಡುತ್ತೋ ಹಾಗೇ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಲವ್ ಸ್ಟೋರಿ ಕೂಡ ಟ್ರೆಂಡಿಂಗ್‌ನಲ್ಲಿ ಇರುತ್ತೆ. ಇಬ್ಬರೂ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ತಮ್ಮ ಲವ್ ಸ್ಟೋರಿಯನ್ನು ಮಾತ್ರ ಇನ್ನೂ ಒಪ್ಪಿಕೊಂಡಿಲ್ಲ. ಆದ್ರೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೊಗಳು ಟ್ರೆಂಡಿಂಗ್‌ನಲ್ಲಿವೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಸಂದರ್ಶನ ನೀಡಿದ್ದರು. ಅದರಲ್ಲಿ ತಾನು ಸಿಂಗಲ್ ಅಲ್ಲ.. ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಅನ್ನೋದನ್ನು ಒಪ್ಪಿಕೊಂಡಿದ್ದರು. ಆವೇಳೆ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಆದರೆ, ಆಗಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬಗ್ಗೆನೇ ಚರ್ಚೆಯಾಗಿತ್ತು. ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇರೋದು ಕನ್ಫರ್ಮ್ ಆಂತಲೇ ಸುದ್ದಿಗಳಾಗಿದ್ದವು.

After confirming he is not single Vijay Deverakonda and Rashmika Mandanna lunch photo went trending

ಇವರಿಬ್ಬರ ಡೇಟಿಂಗ್ ಮ್ಯಾಟರ್ ಸದ್ದು ಮಾಡಿದ ಬೆನ್ನಲ್ಲೇ ಎರಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರ ಅಭಿಮಾನಿಗಳು ಗೆಸ್ ಮಾಡಿದಂತೆ ಮತ್ತೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಅದೂ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮಾಡುತ್ತಿರುವ ಫೋಟೊಗಳು ವೈರಲ್ ಆಗಿವೆ. ಈ ಮೂಲಕ ಫ್ಯಾನ್ಸ್ ಅನುಮಾನಗಳಿಗೆ ಈ ಜೋಡಿ ತೆರೆ ಎಳೆದಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಶೀಘ್ರದಲ್ಲಿಯೇ ಈ ಜೋಡಿ ಮದುವೆ ಡೇಟ್ ಫಿಕ್ಸ್ ಅಂತಾನೂ ಸುದ್ದಿ ಹಬ್ಬಿದೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ರೆಸ್ಟೋರೆಂಟ್‌ ಒಂದರಲ್ಲಿ ಊಟಕ್ಕೆ ಸೇರಿದ್ದರು. ಈ ವೇಳೆ ಯಾರೋ ಇಬ್ಬರು ಊಟ ಮಾಡುತ್ತಿರುವುದನ್ನು ದೂರದಿಂದ ಕ್ಲಿಕ್ ಮಾಡಿದ್ದಾರೆ. ಆ ಫೋಟೊಗಳನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಸಿಂಗಲ್ ಅಲ್ಲ ಎಂದಿದ್ದಕ್ಕೂ, ಇಬ್ಬರೂ ಒಟ್ಟಿಗೆ ಕೂತು ಊಟ ಮಾಡುತ್ತಿರುವ ಫೋಟೊ ರಿಲೀಸ್ ಆಗಿದ್ದಕ್ಕೂ ಸರಿಯಾಗಿದೆ. ಇವರ ಫೋಟೊಗಳು ಥ್ರೆಡ್ಸ್ ಹಾಗೂ ರೆಡ್ಡಿಟ್‌ನಲ್ಲಿ ವೈರಲ್ ಆಗುತ್ತಿವೆ.

After confirming he is not single Vijay Deverakonda and Rashmika Mandanna lunch photo went trending

ಈ ಫೋಟೊದಲ್ಲಿ ವಿಜಯ್ ದೇವರಕೊಂಡ ಮುಖ ಮಾತ್ರ ಕಾಣಿಸುತ್ತಿದೆ. ವಿಜಯ್ ಎದುರು ರಶ್ಮಿಕಾ ಮಂದಣ್ಣ ಕೂತಿದ್ದರಿಂದ ಅವರ ಮುಖ ಕಾಣಿಸುತ್ತಿಲ್ಲ. ಇನ್ನೊಂದು ಫೋಟೊದಲ್ಲಿ ಸೇಮ್ ಅದೇ ಡ್ರೆಸ್‌ನಲ್ಲಿ ರಶ್ಮಿಕಾ ರೆಸ್ಟೋರೆಂಟ್‌ನಲ್ಲಿರುವ ಫೋಟೊ ಕೂಡ ವೈರಲ್ ಆಗಿದೆ. ಹೀಗಾಗಿ ವಿಜಯ್ ಜೊತೆ ಇರೋದು ರಶ್ಮಿಕಾ ಮಂದಣ್ಣ ಅವರೇ ಅನ್ನುವ ನಿರ್ಧಾರಕ್ಕೆ ನೆಟ್ಟಿಗರು ಬಂದು ಬಿಟ್ಟಿದ್ದಾರೆ.

ಇನ್ನು ಅದ್ಯಾವಾಗ ಈ ಫೋಟೊಗಳು ವೈರಲ್ ಆಗುವುದಕ್ಕೆ ಶುರುವಾಗಿದ್ದವೋ ಅಲ್ಲಿಂದ ಇಬ್ಬರ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಫೋಟೊಗಳನ್ನೇ ಇಟ್ಟುಕೊಂಡು ಇವರು ಕೇವಲ ಫ್ರೆಂಡ್ಸ್ ಅಷ್ಟೇ ಅಲ್ಲ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇವರು ಮಾಧ್ಯಮಗಳ ಮುಂದೆ ಸುಮ್ಮನೆ ನಾಟಕ ಆಡುತ್ತಿದ್ದಾರೆ. ಇಬ್ಬರ ಗಾಢವಾಗಿ ಪ್ರೀತಿ ಮಾಡುತ್ತಿದ್ದಾರೆಂದು ಕಾಮೆಂಟ್ ಬರುತ್ತಿವೆ.

"ನಮಗೆ ಗೊತ್ತು ಅಂತ ಅವರಿಗೂ ಗೊತ್ತು. ನಮಗೆ ಗೊತ್ತಿರೊ ವಿಷಯ ಅವರಿಗೆ ಗೊತ್ತು ಅಂತ ನಮಗೂ ಗೊತ್ತು. ಆದರೆ, ಅವರಿಗೆ ಹೇಳಿಕೊಳ್ಳುವುದಕ್ಕೆ ಇಷ್ಟವಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಫೋಟೊ ವೈರಲ್ ಹೊರತು ಪಡಿಸಿ ಅವರ ಸಿನಿಮಾ ಬಗ್ಗೆ ಮಾತಾಡುವುದಾದರೆ, ರಶ್ಮಿಕಾ ಮಂದಣ್ಣ ಸಿನಿಮಾಗಳಲು ಬ್ಯಾಕ್ ಟು ಬ್ಯಾಕ್ ಸೂಪರ್ ಸಕ್ಸಸ್ ಆಗುತ್ತಿವೆ.

ಸದ್ಯ 'ಪುಷ್ಪ 2' ರಿಲೀಸ್‌ಗೆ ರೆಡಿಯಾಗಿದೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಶುರುವಾಗಿದೆ. ಹಾಗೇ ವಿಕ್ಕಿ ಕೌಶಲ್ ನಟಿಸುತ್ತಿರುವ 'ಛಾವ' ಸಿನಿಮಾಗೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತ ವಿಜಯ್ ದೇವರಕೊಂಡ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿದ್ದು, ತಮ್ಮ 12ನೇ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
After confirming he is not single Vijay Deverakonda and Rashmika Mandanna lunch photo went trending;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X