ವಿಚ್ಛೇದನದ ಬಳಿಕ ಒಂದೇ ವೇದಿಕೆಯಲ್ಲಿ ಸಮಂತಾ-ನಾಗ ಚೈತನ್ಯ; ಮುನಿಸು ಮರೆತರೇ..!

ಸಮಂತಾ ರುಥ್ ಪ್ರಭು ಹಾಗೂ ನಾಗ ಚೈತನ್ಯ ಜೋಡಿಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮದುವೆ ಬಳಿಕ ಈ ಜೋಡಿ ಸುಂದರವಾಗಿ ಬಾಳ್ವೆ ನಡಿಸುತ್ತೆ ಅನ್ನೋ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ಬೇರೆಯಾಗುವುದಾಗಿ ಘೋಷಣೆ ಮಾಡಿತ್ತು. ಇದು ನಿಜಕ್ಕೂ ಇಬ್ಬರ ಅಭಿಮಾನಿಗಳಿಗೂ ಶಾಕ್ ಕೊಟ್ಟಿತ್ತು.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಇವರಿಬ್ಬರ ಲವ್‌ ಸ್ಟೋರಿ ಹೊರಬಿದ್ದಾಗ ಅವರ ಅಭಿಮಾನಿ ಸಂಭ್ರಮಿಸಿದ್ದರು. ವಿವಾಹವಾದ ಬಳಿಕ ಈ ಜೋಡಿಯನ್ನು ಒಟ್ಟಿಗೆ ನೋಡುವುದಕ್ಕೆ ಹೆಮ್ಮೆ ಪಟ್ಟುಕೊಂಡಿದ್ದರು. ಆದರೆ, 2021ರಲ್ಲಿ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು.

After divorce for the first time Samantha and Naga Chaitanya in same event

ವಿಚ್ಛೇದನದ ಬಳಿಕ ಸಮಂತಾ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದಂತೂ ನಿಜ. ಕೆಲವು ಸಂದರ್ಶನದಲ್ಲಿ ಸಮಂತಾ ಮಾಜಿ ಪತಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದೂ ಇದೆ. ಆಧ್ಯಾತ್ಮದ ಮೊರೆ ಹೋಗಿದ್ದೂ ಗೊತ್ತಿದೆ. ಇದರ ಮಧ್ಯೆ ಅನಾರೋಗ್ಯಕ್ಕೀಡಾಗಿರೋದು ಮತ್ತಷ್ಟು ಸಮಂತಾ ಕಷ್ಟಗಳನ್ನು ದುಪ್ಪಟ್ಟು ಮಾಡಿತ್ತು. ಇತ್ತ ನಾಗಚೈತನ್ಯ ವಿಚ್ಛೇದನದ ಬಗ್ಗೆ ಮೌನ ವಹಿಸಿದ್ದಾರೆ.

ಇಬ್ಬರೂ ವಿಚ್ಚೇದನ ಪಡೆದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದು ಇಲ್ಲ. ಇಬ್ಬರೂ ತಮ್ಮದೇ ದಾರಿ ಹಿಡಿದು ಮುನ್ನುಗ್ಗುತ್ತಿದ್ದಾರೆ. ಸಮಂತಾ ಸಿನಿಮಾದ ಜೊತೆಗೆ ಆರೋಗ್ಯದ ಬಗ್ಗೆನೂ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಹೆಲ್ತ್ ಪಾಡ್‌ಕಾಸ್ಟ್ ಅನ್ನೂ ಆರಂಭಿಸಿದ್ದಾರೆ. ಅತ್ತ ನಾಗಚೈತನ್ಯ ಕೂಡ ಉತ್ತಮ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೆ ಏರುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದಾರೆ.

ಆದರೆ, ವಿಚ್ಚೇದನದ ಬಳಿಕ ಈ ಜೋಡಿ ಎಂದಿಗೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಬಹುತೇಕ ಎರಡೂವರೆ ವರ್ಷಗಳ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಂ ವಿಡಿಯೋ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅಮೆಜಾನ್ ಪ್ರೈಂ ವಿಡಿಯೋ ತನ್ನ ವೇದಿಕೆ ನಿರ್ಮಾಣ ಮಾಡಿದ್ದ ಒರಿಜಿನಲ್ ಪ್ರಾಜೆಕ್ಟ್‌ಗಳ ಭಾಗವಾಗಿದ್ದವರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಮೆಜಾನ್ ಒರಿಜಿನಲ್‌ಗಳ ನಟರು ಮತ್ತು ತಂತ್ರಜ್ಞರು ಈ ಮೆಗಾ ಇವೆಂಟ್‌ಗಳಲ್ಲಿ ಭಾಗವಹಿಸಿದ್ದರು. ಕರಣ್‌ ಜೋಹರ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದೇ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಭಾಗವಹಿಸಿದ್ದರು.

ಸಮಂತಾ ನಟಿಸಿದ 'ಸಿಟಾಡೆಲ್' ವೆಬ್ ಸರಣಿಯನ್ನು ಅಮೆಜಾನ್ ಪ್ರೈಮ್ ನಿರ್ಮಾಣ ಮಾಡಿದೆ. ಭಾರತ ವರ್ಷನ್‌ನ ಈ ವೆಬ್ ಸೀರಿಸ್‌ ಅನ್ನು 'ಫ್ಯಾಮಿಲಿ ಮ್ಯಾನ್' ಸೀರಿಸ್‌ನ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಮಂತಾ ಅಮೆಜಾನ್‌ನ ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದರು. ಇನ್ನೊಂದು ಕಡೆ ನಾಗಚೈತನ್ಯ ನಟಿಸಿದ 'ಧೂತ' ವೆಬ್ ಸೀರಿಸ್‌ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಹೀಗಾಗಿ ಅವರನ್ನು ಆಹ್ವಾನ ಮಾಡಲಾಗಿತ್ತು.

ಅಭಿಮಾನಿಗಳಿಗೆ ಈ ವಿಷಯ ಸ್ವಲ್ಪ ಖುಷಿ ಕೊಟ್ಟರೆ, ಮತ್ತೆ ಸ್ವಲ್ಪ ಬೇಸರ ತರಿಸಿತ್ತು. ಯಾಕಂದ್ರೆ, ಒಂದೇ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಕಾಣಿಸಿಕೊಂಡಿದ್ದೇನೋ ಸರಿ. ಆದರೆ, ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಆದ್ದರಿಂದ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳದೆ ಇರುವ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವುದಂತೂ ನಿಜ.

More from Filmibeat

English summary
Samantha and Naga Chaitanya in same amazon prime video event:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X