ಡಿವೋರ್ಸ್ ವಿಚಾರ ಬಿಟ್ಟಾಕಿ, ಕ್ರಿಪ್ಟೊದಲ್ಲಿ ಹಣ ಹಾಕಿ ಅಂತಿದ್ದಾಳೆ ಸಮಂತಾ

ಪತಿ ನಾಗ ಚೈತನ್ಯರಿಂದ ದೂರವಾದ ಬಳಿಕ ಸಮಂತಾ ಆಕ್ಟಿವ್ ಆಗಿದ್ದಾರೆ. ಸಿನಿಮಾಗಳ ಮೇಲೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಐಟ ಸಾಂಗ್‌ಗಳಲ್ಲಿ ನಟಿಸುತ್ತಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿವಾಹಕ್ಕೂ ಮುನ್ನ ಸಮಂತಾ ಇಷ್ಟೊಂದು ಬ್ಯುಸಿಯಾಗಿರಲಿಲ್ಲ. ಈಗ ಸಿನಿಮಾ ಅಷ್ಟೇ ಅಲ್ಲದೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ವಿಚ್ಛೇದನದ ಬಳಿಕ ಜಾಹೀರಾತು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಾಗಿದೆ. ಈ ಅವಕಾಶವನ್ನು ಸಮಂತಾ ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗ ಸಮಂತಾ ವಿಚ್ಛೇದನದ ವಿಷಯ ಬಿಟ್ಟಾಕಿ, ಕ್ರಿಪ್ಟೋದಲ್ಲಿ ಹಣ ಹಾಕಿ ಅಂತಿದ್ದಾರೆ. ಅರೇರೆ.. ಕ್ರಿಪ್ಟೋ ಕರೆನ್ಸಿ ಬಗ್ಗೆ ಸಮಂತಾ ಹೇಳಿದ್ದಾರೆ ಅನ್ನುವ ಕುತೂಹಲನಾ? ಅವರ ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.

 ಕ್ರಿಪ್ಟೋ ಕರೆನ್ಸಿ ಬ್ರ್ಯಾಂಡ್‌ಗೆ ಸಮಂತಾ ರಾಯಬಾರಿ

ಕ್ರಿಪ್ಟೋ ಕರೆನ್ಸಿ ಬ್ರ್ಯಾಂಡ್‌ಗೆ ಸಮಂತಾ ರಾಯಬಾರಿ

ಇತ್ತೀಚೆಗೆ ಕ್ರಿಷ್ಟೋ ಕರೆನ್ಸಿ ಹಗರಣ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿತ್ತು. ಈ ಹಗರಣದಿಂದ ಕ್ರಿಪ್ಟೋ ಕರೆನ್ಸಿ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಇಲ್ಲಿಂದ ಜನರಿಗೆ ಹಣ ಹೂಡಿಕೆಗೆ ಪರ್ಯಾಯ ವ್ಯವಸ್ಥೆಯೊಂದು ಜಗತ್ತಿಗೆ ಗೊತ್ತಾಗಿದೆ. ಇಂತಹದ್ದೇ ಕರೆನ್ಸಿಯನ್ನು ಡೀಲ್ ಮಾಡುವ ಕಂಪನಿಯೊಂದನ್ನು ಸಮಂತಾ ಪ್ರಮೋಟ್ ಮಾಡುತ್ತಿದ್ದಾರೆ. ಜಿಮ್‌ನಲ್ಲಿ ಕೂತು ಕ್ರಿಪ್ಟೋ ಕರೆನ್ಸಿ ಕಂಪನಿಯ ಬಗ್ಗೆ ಪ್ರಚಾರ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.

 ಕ್ರಿಪ್ಟೋ ಕರೆನ್ಸಿ ಬಗ್ಗೆ ಸಮಂತಾ ಹೇಳಿದ್ದೇನು?

ಕ್ರಿಪ್ಟೋ ಕರೆನ್ಸಿ ಬಗ್ಗೆ ಸಮಂತಾ ಹೇಳಿದ್ದೇನು?

ಕ್ರಿಪ್ಟೋ ಕರೆನ್ಸಿಯನ್ನು ಡೀಲ್ ಮಾಡುವ ಕಂಪನಿಯೊಂದಕ್ಕೆ ಸಮಂತಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸಮಂತಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕ್ರಿಪ್ಟೋ ಕರೆನ್ಸಿ ಡೀಲ್ ಮಾಡುವ ಕಂಪನಿಯ ಪರವಾಗಿ ಪ್ರಚಾರ ಮಾಡಿದ್ದಾರೆ. ಕಾಯಿನ್ ಸ್ವಿಚ್ ಎನ್ನುವ ಕಂಪನಿಯ ಪರವಾಗಿ ಸಮಂತಾ ಪ್ರಚಾರಕ್ಕಿಳಿದಿದ್ದಾರೆ ಜಿಮ್‌ನಲ್ಲಿ ಕೂತು ಫಿಟ್ನೆಸ್ ಹಾಗೂ ಕ್ರಿಪ್ಟೋ ಕರೆನ್ಸಿಯನ್ನು ಹೋಲಿಕೆ ಮಾಡಿ ಪ್ರಚಾರ ಮಾಡಿದ್ದಾರೆ. " ಕಡಿಮೆ ಬಾರ ಎತ್ತುವ ಮೂಲಕ ನೀವು ಹೇಗೆ ವರ್ಕ್‌ಔಟ್ ಶುರು ಮಾಡುತ್ತಿರೋ ಹಾಗೇ, ನೀವು ಅತೀ ಕಡಿಮೆ ಮೊತ್ತ 100 ರೂಪಾಯಿಯನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಬಹುದು." ಎಂದು ಸಮಂತಾ ಮಾಹಿತಿ ನೀಡಿದ್ದಾರೆ.

 ಸಂಶೋಧನೆ ಮಾಡಿ ಎಂದ ಸಮಂತಾ

ಸಂಶೋಧನೆ ಮಾಡಿ ಎಂದ ಸಮಂತಾ

ಸಮಂತಾ ಕೇವಲ ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರಚಾರ ಮಾಡಿಲ್ಲ. ಇದರೊಂದಿಗೆ ಹಣ ಹೂಡಿಕೆ ಮಾಡುವ ಮುನ್ನ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂಶೋಧನೆ ಮಾಡಿ. ಆ ಬಳಿಕವಷ್ಟೇ ಹಣವನ್ನು ಹೂಡಿಕೆ ಮಾಡಿ ಎಂದು ಸಲಹೆ ಕೂಡ ನೀಡಿದ್ದಾರೆ. "ಬೆಳವಣೆಯ ಮೊದಲ ಹೆಚ್ಚು ಏನು ಅಂದರೆ, ಅದು ಆರಂಭ." ಎಂದು ಸಮಂತಾ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

 ಸಮಂತಾ ಸಿನಿಮಾಗಳಲ್ಲೂ ಬ್ಯುಸಿ

ಸಮಂತಾ ಸಿನಿಮಾಗಳಲ್ಲೂ ಬ್ಯುಸಿ

ಸಮಂತಾ ಕೇವಲ ಜಾಹೀರಾತು ಹಾಗೂ ಐಟಂ ಸಾಂಗ್‌ಗಳಲ್ಲಿ ಮಾತ್ರ ನಟಿಸುತ್ತಿಲ್ಲ. ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. 'ಶಾಕುಂತಲಂ' ಸಿನಿಮಾ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಇದರೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ 'ಯಶೋಧ' ಶೂಟಿಂಗ್ ನಡೆಯುತ್ತಿದೆ. ಹಾಲಿವುಡ್‌ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಶೀಘ್ರದಲ್ಲಿಯೇ ಸಿನಿಮಾ ಆರಂಭ ಆಗಲಿದೆ. ಇನ್ನು ಬಾಲಿವುಡ್‌ಗೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹೊಸ ವೆಬ್‌ ಸಿರೀಸ್‌ ಶೂಟಿಂಗ್‌ ಕೂಡ ಆರಂಭ ಆಗಿದೆ.

More from Filmibeat

English summary
Samantha has turned brand ambassador for a cryptocurrency dealing platform. Samantha is seen promoting the cryptocurrency portal in her personal fitness Gym.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X